ಬೆಳಗಾವಿ- ಇತ್ತೀಚಿಗೆ ಖಾನಾಪೂರದ ಭೀಮಗಡ ಅಭಯಾರಣ್ಯ ಪ್ರದೇಶದಲ್ಲಿ ಇರುವ ಅಮಗಾಂವ್ ಎಂಬ ಊರಿನಲ್ಲಿ ಮಹಿಳೆಯೊಬ್ಬಳು ರಾತ್ರಿ ಎದೆನೋವು,ತಲೆ ನೋವು ಅಂತಾ ಇಡೀ ರಾತ್ರಿ ನರಳಿದ್ದು ಬೆಳಗಿನ ಜಾವ ಆ ಮಹಿಳೆಯನ್ನು ಅಮಗಾಂವ್ ಊರಿನ ಜನ ಕಟ್ಟಿಗೆಯ ಸ್ಟೇಚರ್ ನಲ್ಲಿ ಹತ್ತು ಕಿ.ಮೀ ವರೆಗೆ ಕಾಡಿನಲ್ಲಿ ಹೊತ್ತು ಮುಖ್ಯ ರಸ್ತೆಯವರೆಗೆ ತಂದು ನಂತರ ಅಂಬ್ಯುಲೆನ್ಸ್ ಮೂಲಕ ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಹಲವಾರು ದಿನಗಳ ಕಾಲ ವೈದ್ಯರು ಆ ಮಹಿಳೆಯನ್ನು ಉಳಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದು ಮಹಿಳೆ ಮೃತಪಟ್ಟಿದ್ದಾಳೆ.
ಆ ಮಹಿಳೆಯನ್ನು ಕಟ್ಟಿಗೆಯ ಸ್ಟ್ರೇಚರ್ ನಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದ ಅಮಗಾಂವ್ ಊರಿನ ಜನ ಮೃತಪಟ್ಟ ಮಹಿಳೆಯ ಶವವನ್ನು ಅದೇ ಕಟ್ಟಿಗೆಯ ಸ್ಟ್ರೇಚರ್ ನಲ್ಲಿ ಅಮಗಾಂವ್ ಊರಿಗೆ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ಮಾಡಿದ್ದಾರೆ.
ಖಾನಾಪುರ ಕಾಡಂಚಿನ ಅಮಗಾಂವ ಗ್ರಾಮದಲ್ಲಿ ಕಟ್ಟಿಗೆ ಸ್ಟ್ರೇಚರ್ನಲ್ಲಿ 10 ಕಿ.ಮೀ. ಹೊತ್ತೊಯ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಹರ್ಷದಾ ಘಾಡಿ (38) ಮೃತಪಟ್ಟಿದ್ದಾರೆ. ತೀವ್ರ ಜ್ವರದ ಹಿನ್ನೆಲೆಯಲ್ಲಿ ಜುಲೈ 18ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದರು.
ಕಟ್ಟಿಗೆಯಲ್ಲಿ ಸ್ಟ್ರೇಚರ್ ಮಾಡಿ 10 ಕಿಮೀ ಚಿಕಲೆವರೆಗೂ ಸುರಿಯುತ್ತಿದ್ದ ಭಾರಿ ಮಳೆಯಲ್ಲಿಯೇ ಹೊತ್ತುಕೊಂಡು ಬಂದಿದ್ದರು. ಈ ಮೂಲಕ ಮಹಿಳೆಯ ಪ್ರಾಣ ಉಳಿಸಲು ಕಸರತ್ತು ನಡೆಸಿದ್ದರು. ಆದರೆ, ಗ್ರಾಮಸ್ಥರ ಹೋರಾಟ ಕೊನೆಗೂ ಫಲಿಸಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಮಹಿಳೆ ಸಾವನ್ನಪ್ಪಿದ್ದಾರೆ.ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ ಸರ್ಕಾರಿ ಅಧಿಕಾರಿಗಳು ಮತ್ತು ಹಲವಾರು ಎನ್‌ಜಿಒಗಳು ಆಕೆಯ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು.
ಖಾನಾಪುರಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಬೇಕೆಂಬ ಅಮಗಾಂವ ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸಿದೆ.ಅಮಗಾಂವದಿಂದ ಖಾನಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದಿದ್ದರೆ ಹರ್ಷದಾ ಅವರ ಜೀವ ಉಳಿಸಬಹುದಿತ್ತು. ಆಂಬ್ಯುಲೆನ್ಸ್ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಂದಿದ್ದರೆ, 10 ಕಿಮೀ ವರೆಗೆ ಮರದ ಕಟ್ಟಿಗೆ ಸ್ಟ್ರೆಚರ್ ಮೂಲಕ ಆಕೆಯನ್ನು ಸಾಗಿಸುವ ಸಮಯ ತಪ್ಪುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಹಿಳೆಯ ಕುಟುಂಬಸ್ಥರಿಗೆ ಪರಿಹಾರ ಸಿಗಲಿ
ನಿರಂತರ ಮಳೆ, ರಸ್ತೆ ಸಂಪರ್ಕ ಕಡಿತ,ಈ ಗ್ರಾಮದ ಸ್ಥಳಾಂತರದ ವಿಚಾರದಲ್ಲಿ ವಿಳಂಬ, ಸರ್ಕಾರದ ಲೋಪದಿಂದ ಖಾನಾಪೂರ ಕಾಡಿನ ಅಮಗಾಂವ್ ಗ್ರಾಮದ ಮಹಿಳೆ ಮೃತಪಟ್ಟಿದ್ದು ಬೆಳಗಾವಿ ಜಿಲ್ಲಾಡಳಿತ ಮೃತ ಮಹಿಳೆಯ ಕುಟುಂಬಸ್ಥರಿಗೆ NDRF, CRF ಮಾರ್ಗಸೂಚಿಯ ಪ್ರಕಾರ ಐದು ಲಕ್ಷ ರೂ ಪರಿಹಾರ ನೀಡುವ ಮೂಲಕ ಕಾಡಿನ ಮದ್ಯ ನಡೆದಿರುವ ನೋವಿಗೆ ಮುಲಾಮು ಹಚ್ಚುವದು ಮಾನವೀಯ ಕಾರ್ಯ, ಈ ಕಾರ್ಯವನ್ನು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಮಾಡಬಹುದೇ ಕಾದು ನೋಡೋಣ..