ಬೆಳಗಾವಿ- ನಾನು ಸೆಂಟ್ರಲ್ ಬ್ಯುರೋ ಆಫೀಸರ್ ,ನಾನು ಎಕ್ಸೈಜ್ ಆಫೀಸರ್, ನಾನು ಪೋಲೀಸ್ ಕಮಿಷ್ನರ್ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ.ಅಲ್ಲಿ ನೌಕರಿ ಕೊಡಿಸುತ್ತೇನೆ.ಇಲ್ಲಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ ಲಪಟಾಯಿಸಿದ ಲೋಫರ್ ಈಗ ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ನಾನು ಸೆಂಟ್ರೆಲ್ ಬ್ಯುರೋ ಆಫೀಸರ್ ನನ್ನ ಸ್ನೇಹಿತನ ಆ್ಯಕ್ಸಿಡೆಂಟ್ ಆಗಿದೆ ಅರ್ಜಂಟ್ ಐದು ಲಕ್ಷ ಬೇಕಾಗಿದೆ ಎಂದು ಬೆಳಗಾವಿಯ ರಿಯಲ್ ಇಸ್ಟೇಟ್ ಉದ್ಯಮಿಯೊಬ್ಬನಿಗೆ ನಂಬಿಸಿ ಐದು ಲಕ್ಷ ರೂ ಪಡೆದ ಡೂಪ್ಲಿಕೇಟ್ ಆಫೀಸರ್ ಬೆಳಗಾವಿ, ರಾಯಬಾಗ, ಚಿಕ್ಕೋಡಿ,ನಿಪ್ಪಾಣಿ,ಕಾಗವಾಡ ಸೇರಿದಂತೆ ಹಲವಾರು ಕಡೆ ಜನರಿಗೆ ಸುಳ್ಳು ಹೇಳಿ ಲಕ್ಷಾಂತರ ರೂ ಟೋಪಿ ಹಾಕಿದವ ಈಗ ಪೋಲೀಸರ ಅತಿಥಿಯಾಗಿದ್ದಾನೆ.
ಹುಕ್ಕೇರಿ ಇಸ್ಲಾಂಪೂರ ಮೂಲದ 33 ವರ್ಷದ ದಯಾನಂದ ರಾಮು ಜಿಂಡ್ರಾಳೆ ಅವರೇ ನಕಲಿ ಸಾಹೇಬ್ರು ಈ ಸಾಹೇಬ್ರನ್ನು ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಇನಸ್ಪೆಕ್ಟರ್ ಕಾಳಿ ಮಿರ್ಚಿ ಅವರು ಅರೆಸ್ಟ್ ಮಾಡಿದ್ದಾರೆ, ನಕಲಿ ಕೆಲಸಗಳಿಗೆ ಬಳಿಸುತ್ತಿದ್ದ ಸ್ವೀಪ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಅರೆಸ್ಟ್ ಆಗಿರುವ ವಂಚಕ ದಯಾನಂದ ಅವರ ಇನ್ನೊಂದು ಸ್ಪೇಶ್ಯಾಲಿಟಿ ಏನಂದ್ರೆ ಈತನಿಗೆ ದುಡ್ಡು ಕೊಟ್ಟು ಮೋಸ ಹೋದವರು ಈ ದಯಾನಂದ್ ಗೆ ಫೋನ್ ಮಾಡಿದ್ರೆ,ನಾನು ಡಿಸಿ ಜೊತೆ ಮೀಟೀಂಗ್ ನಲ್ಲಿ ಇದ್ದೇನೆ, ಮಂತ್ರಿಗಳ ಜೊತೆ ಕಾರಿನಲ್ಲಿದ್ದೇನೆ.ಬೆಂಗಳೂರು ವಿಧಾನಸೌಧ,ದೆಹಲಿ ಪಾರ್ಲಿಮೆಂಟ್ ನಲ್ಲಿ ಇದ್ದೇನೆ ಎಂದು ಫೋನ್ ಕಟ್ ಮಾಡುತ್ತಿದ್ದ ಆದ್ರೆ ಕಾಳಿಮಿರ್ಚಿ ಸಾಹೇಬ್ರು ಈತನಿಗೆ ಫೋನ್ ಮಾಡದೇ ಅರೆಸ್ಟ್ ಮಾಡಿ ಜೈಲಿಗೆ ಕಳಿಸಿದ್ದಾರೆ.
ಅರೆಸ್ಟ್ ಆಗಿರುವ ಸಾಹೇಬ್ರು ಯಾವಾಗಲೂ ಬ್ಯುಸಿ ಇರ್ತಿದ್ರು ಸ್ವಲ್ಪ ರೀಲೀಫ್ ಆಗಲಿ ಅಂತಾ ಅವರನ್ನು ಜೈಲಿಗೆ ಕಳುಹಿಸಲಾಗಿದೆ, ಬಂಧಿತ ಆರೋಪಿ ಸಾಹೇಬ್ರು ಉರ್ಫ್ ದಯಾನಂದ್ ಜಿಂಡ್ರಾಳೆ ಮೂಲತಹ ಹುಕ್ಕೇರಿ ತಾಲ್ಲೂಕಿನ ಇಸ್ಲಾಂಪೂರ ಗ್ರಾಮದವನಾಗಿದ್ದು ಸದ್ಯ ಆಂಜನೇಯನಗರದಲ್ಲಿ ವಾಸವಾಗಿದ್ದಾನೆ.
ಈ ಫೋಟೋ ನೀಡಿ ಈತ ನಿಮಗೂ ಸುಳ್ಳು ಹೇಳಿ ಟೋಪಿ ಹಾಕಿದ್ರೆ,ಯಾರಿಗಾದ್ರು ಮೋಸ ಮಾಡಿದ್ದಲ್ಲಿ, ಹೆದರಬೇಡಿ ನೇರವಾಗಿ ಠಾಣೆಗೆ ಹೋಗಿ ಈತನ ವಿರುದ್ಧ ಕಂಪ್ಲೇಂಟ್ ಕೊಡಿ..