ಬೆಳಗಾವಿ ಜಿಲ್ಲೆ, ಯುವಕರ ಪ್ರಗತಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ
ಅಮೂಲ್ಯ ಮತ ನೀಡಿ ಸದನಕ್ಕೆ ಕಳುಹಿಸಿದ ಚಿಕ್ಕೋಡಿ ಜನತೆಗೆ ಸದನ ದಲ್ಲಿಯೇ ಧನ್ಯವಾದ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ
ಬೆಳಗಾವಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಅಲ್ಲಿಂದ ಈ ಸದನ ಪ್ರವೇಶ ಮಾಡಿದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸದನಕ್ಕೆ ತಿಳಿಸಿದರು.
ಇಂದು ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಮೊದಲ ಭಾಷಣ ಮಾಡಿದ ಅವರು, ಒಂದು ದೇಶದ ಪ್ರಗತಿಯನ್ನು ಆ ದೇಶದ ಶಿಕ್ಷಣದ ಗುಣಮಟ್ಟದಿಂದ ಅಳೆಯಬೇಕು ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಆ ಹಿನ್ನೆಲೆಯಲ್ಲಿ ನಾನು ಕೆಲವು ವಿಷಯಗಳನ್ನು ಸದನ ದ ಮುಂದೆ ಇಡುತ್ತಿದ್ದೇನೆ. ನಮ್ಮ ದೇಶದಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ. ಇದು ಈ ದೇಶದ ಮುಂದೆ ಇರುವ ಅನೇಕ ಸವಾಲುಗಳಲ್ಲಿ ಒಂದು. ಇದಕ್ಕೆ ಅನೇಕ ಕಾರಣಗಳು ಇವೆ. ಇವುಗಳಲ್ಲಿ ಕೆಲವು – ಕೇಂದ್ರ ಸರಕಾರ ತನ್ನ ವಾರ್ಷಿಕ ಆಯವ್ಯಯದಲ್ಲಿ ಶಿಕ್ಷಣಕ್ಕೆ ನೀಡುವ ಅನುದಾನ ವರ್ಷ ದಿಂದ ವರ್ಷಕ್ಕೆ ಕಮ್ಮಿಯಾಗುತ್ತಿದೆ ಎಂದು ತಿಳಿಸಿದರು.
ಉದಾಹರಣೆಗೆ ಕಳೆದ ವರ್ಷದ ಅನುದಾನ ಹಾಗೂ ಈ ವರ್ಷದ ಪರಿಷ್ಕೃತ ಅಂದಾಜು ಪಟ್ಟಿಗೆ ಹೋಲಿಸಿದರೆ, ಕೇಂದ್ರೀಯ ವಿಶ್ವ ವಿದ್ಯಾಲಯ ಅನುದಾನ ಆಯೋಗಕ್ಕೆ ನೀಡುವ ಅನುದಾನ ಶೇ. 53 ಕ್ಕಿಂತ ಕಮ್ಮಿಯಾಗಿದೆ. ಇದರಿಂದ ಸರ್ಕಾರಿ ಸಂಸ್ಥೆ ಗಳ ಮೇಲೆ ಅವಲಂಬನ ಆಗಿರುವ ಬಡವರ ಬದುಕು ದುರ್ಬರ ವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಖಾಸಗಿಕರಣ ನಡೆಯುತ್ತಿದೆ. ಇದರಿಂದ ಬಡವರು, ಪರಿಶಿಷ್ಟ ಜಾತಿ ಮತ್ತು ವರ್ಗ , ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಹಾಗೂ ಹಿಂದುಳಿದ, ಅವಕಾಶ ವಂಚಿತ ಜಾತಿಯ ಯುವಕರಿಗೆ ಅನ್ಯಾಯ ವಾಗುತ್ತಿದೆ. ಇದಕ್ಕೆ ಪರಿಹಾರ ಏನು ? ಎಂದು ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ ಎಂದರು.
ಇನ್ನು ಕಳೆದ ಕೆಲ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಗಳಲ್ಲಿ ವಿದ್ಯಾರ್ಥಿ ಗಳ ಸೇರ್ಪಡೆ ಹಾಗೂ ಉದ್ಯೋಗಕ್ಕಾಗಿ ನಡೆಸುವ ಪರೀಕ್ಷೆ ಗಳಲ್ಲಿ ಅನೇಕ ಅವ್ಯವಹಾರ ನಡೆದು, ಯುವ ಜನರ ಭವಿಷ್ಯ ಡೋಲಾಯಮಾನವಾಗಿದೆ. 15 ರಾಜ್ಯ ಗಳಲ್ಲಿ ನೀಟ ಹಾಗೂ ಇತರ ಪರೀಕ್ಷೆ ಗಳು ಸರಿಯಾಗಿ ನಡೆದಿಲ್ಲ. ಅದರಲ್ಲಿ ಅನೇಕ ತಪ್ಪುಗಳು ನಡೆದಿವೆ. ಯುವ ಜನರು ವ್ಯವಸ್ಥೆ ಯನ್ನು ನಂಬಬಾರದು ಎನ್ನುವಂತೆ ಆಗಿದೆ. ಇದಕ್ಕೆ ಪರಿಹಾರ ಏನು ಎಂದು ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವ ರನ್ನು ಕೇಳಲು ಬಯಸುತ್ತೇನೆ. ಇನ್ನು ನನ್ನ ಜಿಲ್ಲೆಯ ಗೋಕಾಕ ಹಾಗೂ ಅಥಣಿ ಗಳಿಗೆ ಹೊಸ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡುವಂತೆ ನಾವು ಕೇಂದ್ರ ವನ್ನು ಕೇಳಿಕೊಂಡಿದ್ದೇವೆ. ಆದರೆ ಕೇಂದ್ರದಿಂದ ಉತ್ತರ ದೊರೆತಿಲ್ಲ. ಅವುಗಳನ್ನು ಬೇಗ ಆರಂಭ ಮಾಡುವಂತೆ ನಾನು ನಿಮ್ಮ ಮೂಲಕ ಕೇಂದ್ರ ಶಿಕ್ಷಣ ಸಚಿವರನ್ನು ಕೇಳಲು ಬಯಸುತ್ತೇನೆ ಎಂದರು.
ಮಾನ್ಯರೇ, ನನ್ನ ಕ್ಷೇತ್ರ ದಲ್ಲಿ ಪ್ರವಾಹ ಬಂದಿದೆ . ಅನೇಕ ಶಾಲೆ ಕಟ್ಟಡ ಗಳು ಬಿದ್ದು ಹೋಗಿವೆ ಅಥವಾ ಶಿಥಿಲ ಅವಸ್ಥೆ ಗೆ ಬಂದಿವೆ. ಇವನ್ನೂ ಮರು ನಿರ್ಮಾಣ ಮಾಡಲು ಕೇಂದ್ರ ಪ್ರತಿ ಶಾಲೆಗೆ ರು. 2 ಲಕ್ಷ ಧನ ಸಹಾಯ ಮಾಡುತ್ತದೆ. ಆದರೆ ನನ್ನ ಕ್ಷೇತ್ರಕ್ಕೆ ಈ ಹಣ ಬಂದಿಲ್ಲ. ಆದಷ್ಟು ಬೇಗ ಅದನ್ನು ಬಿಡುಗಡೆ ಮಾಡಬೇಕು. ಅಲ್ಲದೆ, ಈ ಧನ ರಾಶಿ ಯನ್ನು ಹೆಚ್ಚು ಮಾಡಿ ಎಂದು ನಾನು ಕೋರುತ್ತೇನೆ ಎಂದು ಸಭಾಧ್ಯಕ್ಷರಿಗೆ ಕೋರಿದರು.