ಬೆಳಗಾವಿ – ಕಳೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಅತ್ಯಲ್ಪ ಮತಗಳಿಂದ ಸೋತವರು ಈಗ ಜಾಕ್ ಪಾಟ್ ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಶ್ರಮಿಸಿದ ಐವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿ ಉತ್ತರಕ್ಕೆ ಎರಡು ಸ್ಥಾನ ,ಬೆಳಗಾವಿ ದಕ್ಷಿಣಕ್ಕೆ ಒಂದು ಸ್ಥಾನ ಜೊತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಒಂದು ಸ್ಥಾನ ನೀಡಿ,ಒಟ್ಟು ಐವರನ್ನು ಸರ್ಕಾರ ನಾಮನಿರ್ದೇಶಿತ ನಗರಸೇವಕರನ್ನಾಗಿ ನೇಮಿಸಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡ, ರಮೇಶ್ ಸೊಂಟಕ್ಕಿ, ಡಾ.ದಿನೇಶ್ ನಾಶಿಪುಡಿ, ಸಿದ್ರಾಯಿ ಮೇತ್ರಿ,ಮಹ್ಮದ ಸಲೀಂ ಸನದಿ,ಮತ್ತು ಮುಸ್ತಾಕ್ ಮುಲ್ಲಾ ಅವರು ಬೆಳಗಾವಿ ಮಹಾನಗರ ಪಾಲಿಕೆಯ ನೂತನ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾಗಲು ಪ್ರಬಲ ಪೈಪೋಟಿ ನಡೆದಿತ್ತು, ಹತ್ತು ಹಲವು ಬಾರಿ ಪಟ್ಟಿ ಬದಲಾವಣೆ ಆಗಿತ್ತು, ಕೊನೆಗೂ ಐದು ಸ್ಥಾನಗಳನ್ನು ಸಮಾನವಾಗಿ ಹಂಚಿಕೆ ಮಾಡುವ ಮೂಲಕ ಅಂತಿಮ ಪಟ್ಟಿಗೆ ಸರ್ಕಾರ ಅನುಮೋದನೆ ಕೊಟ್ಟಿದೆ.