ಬೆಳಗಾವಿ- ಬೆಳಗಾವಿ ಮಹಾನಗರದ ಎರಡು ರಸ್ತೆ ಕಾಮಗಾರಿಗಳಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಕೋಟಿ,ಕೋಟಿ ಪರಿಹಾರ ನೀಡುವಂತೆ ಮಾನ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು ಹಲವಾರು ಆರ್ಥಿಕ ವಿಚಾರಗಳಲ್ಲಿ ಬೆಳಗಾವಿ ಪಾಲಿಕೆ ಕೋಟ್ಯಾಂತರ ರೂ ಗಳನ್ನು ಭರಿಸುವ ಸಂಕಷ್ಟ ಎದುರಾದ ಹಿನ್ನಲೆಯಲ್ಲಿ ಅಗಸ್ಟ 27 ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತುರ್ತು ಸಭೆ ನಡೆಯಲಿದೆ.
ಬೆಳಗಾವಿಯ ಛತ್ರಪತಿ ಶಿವಾಜಿ ಉದ್ಯಾನದ ಪಕ್ಕದಲ್ಲಿರುವ ಶಿವಚರಿತ್ರ ಎದುರಿನ ರಸ್ತೆ ನಿರ್ಮಾಣದ ಕಾಮಗಾರಿಯಲ್ಲಿ ಬೆಳಗಾವಿಯ BT ಪಾಟೀಲ ಅವರು ಜಮೀನು ಕಳೆದುಕೊಂಡಿದ್ದು ಇವರಿಗೆ ಮಹಾನಗರ ಪಾಲಿಕೆ 20 ಕೋಟಿ ರೂ ಪರಿಹಾರ ನೀಡುವಂತೆ ಮಾನ್ಯ ಹೈಕೋರ್ಟ್ ತೀರ್ಪು ನೀಡಿದೆ. ಈ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಲಾಗಿದೆ. ಈಗ ಪರಿಹಾರ ನೀಡುವ ಜವಾಬ್ದಾರಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಲಿದೆ.
ಇದೆ ರಸ್ತೆಯನ್ನು ಜೋಡಿಸುವ ಮಹಾತ್ಮಾಪುಲೆ ರಸ್ತೆ ಅಗಲೀಕರಣದಲ್ಲಿ ಜಮೀನು ಕಳೆದುಕೊಂಡ ವಿಚಾರದಲ್ಲಿ ಮಹಾನಗರ ಪಾಲಿಕೆ ಸಂತ್ರಸ್ತರಿಗೆ 70 ಲಕ್ಷ ರೂ ಪರಿಹಾರ ಕೊಡಬೇಕಾಗಿದೆ. ಜೊತೆಗೆ ಬೆಳಗಾವಿ ಪಾಲಿಕೆ ಐದು ಕೋಟಿ ರೂ GST ಪಾವತಿಸಲು ವಿಳಂಬ ಮಾಡಿದೆ ಹೀಗಾಗಿ 5 ಕೋಟಿ GST ದಂಡ ಸೇರಿ ಈಗ ಬೆಳಗಾವಿ ಪಾಲಿಕೆ 8 ಕೋಟಿ GST ಭರಿಸುವ ಸಂಕಷ್ಟ ಎದುರಾಗಿದೆ.
ಪರಿಹಾರದ ವಿಚಾರದಲ್ಲಿ 20 ಕೋಟಿ 70 ಲಕ್ಷ, GST 8 ಕೋಟಿ ರೂ ಬೆಳಗಾವಿ ಮಹಾನಗರ ಪಾಲಿಕೆ ತುರ್ತಾಗಿ ಭರಿಸಲೇಬೇಕಾದ ಸಂಕಷ್ಟ ಎದುರಾದ ಹಿನ್ನಲೆಯಲ್ಲಿ
ಪಾಲಿಕೆ ತುರ್ತು ಸಭೆ ನಡೆಸಲಿದೆ.ಬೆಳಗಾವಿ ಮಹಾನಗರ ಪಾಲಿಕೆಯ ವಿಶೇಷ ತುರ್ತು ಸಭೆ 27-8-2024 ರಂದು ಬೆಳಿಗ್ಗೆ 11.30 ಗಂಟೆಗೆ ಪರಿಷತ್ ಸಭಾಂಗಣದಲ್ಲಿ ನಡೆಯಲಿದೆ
ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು 28 ಕೋಟಿಗೂ ಹೆಚ್ವು ಹಣ ಬೆಳಗಾವಿ ಮಹಾನಗರ ಪಾಲಿಕೆಯೇ ತುರ್ತಾಗಿ ಭರಿಸಲೇಬೇಕಾದ ಅನಿವಾರ್ಯತೆ ಎದುರಾಗಿದ್ದು ಈ ಹಣ ಭರಿಸುವದು ಹೇಗೆ,ಸರ್ಕಾರ ಭರಿಸಬೇಕೋ ಅಥವಾ ಪಾಲಿಕೆಯಿಂದಲೇ ಹಣದ ವ್ಯವಸ್ಥೆ ಮಾಡಬೇಕೋ ಎನ್ನುವದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳುಲು 27 ರಂದು ಬೆಳಗಾವಿ ಪಾಲಿಕೆಯಲ್ಲಿ ವಿಶೇಷ ತುರ್ತು ಸಭೆ ನಡೆಯಲಿದೆ.