ಬೆಳಗಾವಿ-ಬೆಳಗಿನ ಜಾವ ಪೋಲೀಸರು ಫೀಲ್ಡ್ ಗೆ ಇಳಿದಿದ್ದಾರೆ,ರಸ್ತೆಗಳ ಮೇಲೆ ವಾಹನಗಳ ಓಡಾಟ ಇಲ್ಲವೇ ಇಲ್ಲ,ಜನರಂತೂ ಕಾಣಿಸುತ್ತಿಲ್ಲ,ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣ ಬಿಕೋ ಎನ್ನುತ್ತಿದೆ.ಬೆಳಗಾವಿ ನಗರ ಮತ್ತು ಸಂಪೂರ್ಣ ಜಿಲ್ಲೆಯಲ್ಲಿ ಫುಲ್ ಖಡಕ್ ಲಾಕ್ ಡೌನ್ ಅನುಷ್ಠಾನಗೊಂಡಿರುವದು ಸತ್ಯ.
ಬೆಳಗಾವಿ ನಗರದಲ್ಲಿ ಹಾಲು,ಔಷಧಿ ಅಂಗಡಿ ಹೊರತುಪಡಿಸಿದರೆ ಬೇರೆ ಯಾವ ಅಂಗಡಿಯೂ ಬಾಗಿಲು ತೆರೆದಿಲ್ಲ,ಬೆಳಗಾವಿಯ ಹೋಲ್ ಸೇಲ್ ತರಕಾರಿಯ ಎಪಿಎಂಸಿ ಮಾರುಕಟ್ಟೆಯೂ ಸಂಪೂರ್ಣವಾಗಿ ಬಂದ್ ಆಗಿದೆ.ಅಗತ್ಯ ವಸ್ತುಗಳ ಸರಕು ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳ ನಗರ ಪ್ರವೇಶಕ್ಕೆ ಪೋಲೀಸರು ಅನುಮತಿ ನೀಡುತ್ತಿಲ್ಲ.
ನಿಪ್ಪಾಣಿ ಕುಗನೋಳಿ ಚೆಕ್ಕ್ ಪೋಸ್ಟ್ ನಲ್ಲೂ ಅಗತ್ಯ ವಸ್ತುಗಳ ಸರಕು ಸಾಗಿಸುವ ವಾಹನಗಳನ್ನು ಮಾತ್ರ ಗಡಿ ಪ್ರವೇಶ ಮಾಡಲು ಅವಕಾಶ ಮಾಡಿ ಕೊಡಲಾಗುತ್ತಿದೆ.
ಬೆಳಗಾವಿ ಮಹಾನಗರದ ಎಲ್ಲ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಪೋಲೀಸರ ಕಣ್ಗಾವಲು ಇದೆ,ಬೆಳ್ಳಂ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿರುವ ಪೋಲೀಸರು,ಯಾರೊಬ್ಬರು ನಗರ ಪ್ರವೇಶ ಮಾಡದಂತೆ ತಡೆಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಒಟ್ಟಾರೆ ಬೆಳಗಾವಿ ನಗರ ಮತ್ತು ಜಿಲ್ಲೆ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ.ಯಾರೊಬ್ಬರುನೆಯಿಂದ ಹೊರಗೆ ಬರುವ ಪ್ರಯತ್ನ ಮಾಡಬೇಡಿ,ಮನೆಯಲ್ಲೇ ಇರಿ,
ಸ್ಟೇ ಹೋಮ್
ಟೇಕ್ ಕೇರ್…