ಬೆಳಗಾವಿ -ರಿವರ್ ಕ್ರಾಸೀಂಗ್ ತರಬೇತಿಗೆ ಹೋಗಿದ್ದ ಬೆಳಗಾವಿ ಕಮಾಂಡೋ ಸೆಂಟರ್ ನ ಇಬ್ಬರು ಕಮಾಂಡೋಗಳು ಬೋಟ್ ಮುಳುಗಿದ ಪರಿಣಾಮ ಮೃತಪಟ್ಟ ಘಟನೆ ತಿಲ್ಲಾರಿ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ.
ನಿನ್ನೆ ಬೆಳಗ್ಗೆ ಬೆಳಗಾವಿಯ ಕಮಾಂಡೋ ತರಬೇತಿ ವಿಭಾಗದ ಇಬ್ಬರು ಜವಾನರು ರಿವರ್ ಕ್ರಾಸ್ಸೀಂಗ್ ತರಬೇತಿ ಪಡೆಯಲು ತಿಲ್ಲಾರಿ ಡ್ಯಾಂ ಹಿನ್ನೀರಿನ ಜಲಪ್ರದೇಶಕ್ಕೆ ತರಳಿದ್ದರು ಹಿನ್ನೀರಿನ ಒಂದು ದಡದಿಂದ ಇನ್ನೊಂದು ದಡಕ್ಕೆ ಬೋಟ್ ನಲ್ಲಿ ಒಟ್ಟು ಆರು ಜನ ಜವಾನರು ತೆರಳಿದ್ದರು ಮದ್ಯಭಾಗದಲ್ಲಿ ಬೋಟ್ ಮುಳುಗಿದ ಪರಿಣಾಮ ಇಬ್ಬರು ಜವಾನರು ಮೃತಪಟ್ಟಿದ್ದು ನಾಲ್ಕು ಜನ ಜವಾನರು ಸುರಕ್ಷಿತವಾಗಿದ್ದಾರೆ.
ಬೆಳಗಾವಿಯ ಜೆಎಲ್ ವಿಂಗ್ ಕಮಾಂಡೋ ತರಬೇತಿ ಕೇಂದ್ರದ 28 ವರ್ಷದ ರಾಜಸ್ಥಾನ ಮೂಲದ ವಿಜಯಕುಮಾರ್ ಪಶ್ಚಿಮ್ ಬಂಗಾಲದ 26 ವರ್ಷದ ದಿವಾಕರ್ ಎಂಬಾತರು ಮೃತಪಟ್ಟಿದ್ದಾರೆ.ಮೃತಪಟ್ಟಿರುವ ಇಬ್ಬರು ಜವಾನರು ಕಮಾಂಡೋ ಸೆಂಟರ್ ನ ಜವಾನರಿಗೆ ರಿವರ್ ಕ್ರಾಸ್ಸಿಂಗ್ ತರಬೇತಿ ಕೊಡುತ್ತಿದ್ದರು ಎಂದು ತಿಳಿದು ಬಂದಿದೆ.
ಬೋಟ್ ನಲ್ಲಿ ರಿವರ್ ಕ್ರಾಸ್ಸಿಂಗ್ ಮಾಡುತ್ತಿದ್ದ ಆರು ಜನ ಜವಾನರ ಪೈಕಿ ಇಬ್ಬರು ಮೃತಪಟ್ಟಿದ್ದು ನಾಲ್ಕು ಜನರು ಸುರಕ್ಷಿತವಾಗಿದ್ದಾರೆ.ಮಹಾರಾಷ್ಟ್ರದ ಚಂದಗಡ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.