ಅಥಣಿ-ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ದಲಿತರಿಗೆ ಒಕ್ಕಲಿಗರಿಗೆ ಬೈದರಿಯುವದು ಇನ್ನೂ ಪ್ರೂವಾಗಿಲ್ಲ.ಇದನ್ನು ಸಿಡಿ ಶಿವು ಮಾಡಿದ್ದಾನೆ, ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ.ಹೆಸರು ಹೇಳದೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಒಬ್ಬ ಗಟ್ಟಿ ಇದ್ದೇನೆ ಎಂದು ಹೊರಗಡೆ ಇದ್ದೇನೆ.ಸಿಡಿ ಶಿವು ಉಳಿದ ರಾಜಕೀಯ ವೈರಿಗಳನ್ನು ಜೈಲಿಗೆ ಹಾಕಿದ್ದಾನೆ.ನಾನು ಉಮೇಶ್ ಕತ್ತಿ ಜಾತಿ ಬಗ್ಗೆ ಪರಸ್ಪರ ನಿಂದನೆ ಮಾಡುತ್ತಿದ್ದೇವು.
ನಾನು ಒಬ್ಬರು ಸ್ನೇಹಿತರಾಗಿ ಬೈಯುತ್ತಿದ್ದೇವು.
ಡಿಕೆಶಿ ಕಂಪನಿ ರಾಜ್ಯದಲ್ಲಿ ನನ್ನ ಮೊದಲು ಬಲಿ ಪಡೆದರು.ನಂತರ ದೇವೇಗೌಡ ಕುಟುಂಬ ಬಲಿ ಪಡೆದರು.
ನಂತರ ಮುನಿರತ್ನ ಅವರನ್ನು ಬಲಿ ಪಡೆದುಕೊಂಡ.
ಮುಂದೆ ಯಾರೂ ಬಲಿ ಆಗುತ್ತಾರೆ ನೋಡಿ, ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ.
ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರು ಸಫರ್ ಆಗುತ್ತಾರೆ. ಎಂದು ರಮೇಶ್ ಜಾರಕಿಹೊಳಿ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೂ ಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತದೆ.ಸಿಡಿ ಬಗ್ಗೆ ಸಿಬಿಐ ತನಿಖೆ ನೀಡಬೇಕು.ಸಿಡಿ ನಂತರ ದ್ವೇಷದ ರಾಜಕಾರಣದಿಂದ ಜಾತಿ ಜಾತಿ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತದೆ.ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರದಾನಿ ಅವರು ಸಿಡಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು.
ಪ್ರಧಾನಿ ಅವರಿಗೆ ಮಾದ್ಯಮಗಳ ಮುಖಾಂತರ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡರು.
ಮುನಿರತ್ನ ಬಂಧನ ವಿಚಾರವಾಗಿ,ಸ್ವಪಕ್ಷದ ಬಿಜೆಪಿ ನಾಯಕರ ವಿರುದ್ಧ ರಮೇಶ್ ಜಾರಕಿಹೊಳಿ ಕೆಂಡಾಮಂಡಲ ಆದ್ರು,ಮುನಿರತ್ನ ಬೈದಿರುವುದು ಪ್ರೂ ಆಗಿಲ್ಲ.ಅವಾಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಫ್ ಎಸ್ ಎಲ್ ವರದಿ ಬರುವರಿಗೆ ನಮ್ಮವರು ಮಾತನಾಡಬಾರದು.ವಿಜಯಪುರ ಸಂಸದ ರಮೇಶ ಜಿಗಿಜಣಿಗಿ ವಿರುದ್ಧ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ ಜಾರಕಿಹೊಳಿ.ಮುನಿರತ್ನ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರಿಗೆ ಒತ್ತಾಯ ಮಾಡಿದ್ದಾರೆ.
ಅವರು ಹಿಂದೆ ಮುಂದೆ ನೋಡದೆ ಈ ರೀತಿ ಮಾತನಾಡುತ್ತಿದ್ದಾರೆ.ಆರ್ ಅಶೋಕ ಕೂಡ ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನಿರತ್ನ ಬೈದಿರುವುದು ದೃಢವಾಗಿಲ್ಲ.
ಮುನಿರತ್ನ ಬೈದಿರುವ ಆಡಿಯೋ ಕಟ್ ಆ್ಯಂಡ್ ಪೆಸ್ಟ ಇರಬಹುದು.ನಮ್ಮ ಬಿಜೆಪಿ ನಾಯಕರೇ ಬಯ್ಯೋದು ಎಷ್ಟರ ಮಟ್ಟಿಗೆ ಸರಿ.ಮುನಿರತ್ನ ವಿಚಾರದಲ್ಲಿ ಬಿಜೆಪಿ ನಾಯಕರು ದುಡಿಕಿ ನಿರ್ಧಾರ ಮಾಡುತ್ತಿದ್ದಾರೆ. ಎಂದು ರಮೇಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆ ಶಿವಕುಮಾರ್ ಈ ಕೆಲಸ ಬಿಟ್ಟರೆ ಬೇರೆ ಒಂದು ಕೆಲಸವಿಲ್ಲ. ಅವನು ಯಾವುದೇ ಹೋರಾಟದಿಂದ ಬೆಳೆದಿಲ್ಲಗ್ರಾಮ ಪಂಚಾಯತ್ ಮೆಂಬರ್ ಆಗೋಕೂ ಕೂಡ ಅವನು ಲಾಯಕ್ಕಿಲ್ಲ.ಅಡ್ಜಸ್ಟ್ಮೆಂಟ್ ರಾಜಕಾರಣಿ ಆಗಿದ್ದರಿಂದ ಏಳೆಂಟು ಸಲ ಎಮ್ಎಲ್ಎ ಆಗಿದ್ದಾನೆ.
ಮುಂದಿನ ಸಲವೂ ಕೂಡ ಡಿಕೆ ಶಿವಕುಮಾರ್ ಸೋಲುತ್ತಾನೆ.ಮೋನ್ನೆ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಎರಡೂವರೆ ಲಕ್ಷದಿಂದ ಸೋತನು.
ಡಿಕೆ ಶಿವಕುಮಾರ್ ಅರ್ಜೆಂಟ್ ಮಾಡಿಕೊಂಡು ಕಾಲು ಬಿದ್ದು ಎಂಎಲ್ಎ ಆಗಿದ್ದಾನೆ.ನನ್ನ ಮತ್ತು ದೇವೇಗೌಡ ಕುಟುಂಬ ಮತ್ತು ಮುನಿರತ್ನ ಕೆಟ್ಟ ಪರಿಸ್ಥಿತಿ ಬಂದಿದೆ. ಮುಂದೆ ಹಲವು ಕಾಂಗ್ರೆಸ್ ನಾಯಕರಿಗೆ ಒನ್-ಟು-ತ್ರೀ ಫೋರ್ ನಾಯಕರಿಗೆ ಈ ಪರಿಸ್ಥಿತಿ ಬರಲಿದೆ. ಎಂದು ರಮೇಶ್ ಭವಿಷ್ಯ ನುಡಿದರು.
ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ವಿಚಾರ. ಅಥಣಿಯಲ್ಲಿ ಸಹೋದರ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ.ರಮೇಶ್ ಜಾರಕಿಹೊಳಿ ಪಕ್ಷ ಬೇರೆ ಇದೆ, ಸತೀಶ್ ಜಾರಕಿಹೊಳಿ ಪಕ್ಷ ಬೇರೆ ಇದೆ.ನಮ್ಮ ನಮ್ಮ ಪಕ್ಷಗಳ ಸಿದ್ದಾಂತ ಅದಲು ಬದಲು.
ಅವರ ಪಕ್ಷದಲ್ಲಿ ಏನಾಗುತ್ತದೆ ಎಂಬುವುದು ನಮಗೆ ಗೊತ್ತಿಲ್ಲ.ನಾವು ಮನೆಯಲ್ಲಿ ಮಾತ್ರ ಸಹೋದರರು.
ಪಕ್ಷ ಬಂದರೆ ನಾವು ಬೇರೆ ಬೇರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.
ಆರ್ ಎಸ್ ಎಸ್ ಸಂಘಟನೆ ಸಭೆ ವಿಚಾರ*
ಸಭೆಯಲ್ಲಿ ಏನ್ ಚರ್ಚೆ ಆಯಿತು ಹೇಳೋಕೆ ಬರಲ್ಲ. ಸಭೆಯಲ್ಲಿ ಯಾರನ್ನು ಯಾರನ್ನು ಬೈದ್ರು ಅಂತ ಹೇಳೋಕೆ ಬರಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ.ವಿಜಯೇಂದ್ರ ಅವರ ಅಧ್ಯಕ್ಷ ಸ್ಥಾನವನ್ನು ಎಂದು ಒಪ್ಪೋದಿಲ್ಲ.ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು.ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್, ಅವನಿಗೆ ಏನೂ ಐಡಿಯಾಲಜಿ ಇಲ್ಲ.
ವಿಜಯೇಂದ್ರ ಭಾರತಿ ಜನತಾ ಪಕ್ಷದ ಭ್ರಷ್ಟ ಎಂಬ ಲೇಬಲ್ ಗೆ ಅಷ್ಟೇ,ಭಾರತಿ ಜನತಾ ಪಕ್ಷದ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ.
ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ.
ನಾನು ಯಡಿಯೂರಪ್ಪನವರಿಗೆ ಯಾವತ್ತೂ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ,ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ.ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ.ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರು ಪ್ರಬಲ ನಾಯಕನಾಗಿಲ್ಲ.ಬಿಜೆಪಿ ಎಂಬುದು ಒಬ್ಬರ ಕೈಯಲ್ಲಿ ಆಡಳಿತ ಕೊಡುವುದು ಬೇಡ. ಸಾಮೂಹಿಗ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಬೇಯಲ್ಲಿ ಹೇಳಿದ್ದೇವೆ.ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ ಮೇಲೆ ಕೂತರೆ ಸರ್ವಾಧಿಕಾರ ಧೋರಣೆ ಬರುತ್ತದೆ.
15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ.ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.
ಬಿಜೆಪಿ ವರಿಷ್ಠರು ನೀವು ಇಂತ ಇಂತ ಕೆಲಸ ಮಾಡುವಂತೆ ಟಾಸ್ಕ್ ನಮಗೆ ನೀಡಿ.15 ರಿಂದ 20 ಜನರ ನಾಯಕತ್ವದಲ್ಲಿ ಲೀಡರ್ಶಿಪ್ ಕೊಡಿ.
120 ರಿಂದ 130 ಸ್ಥಾನಗಳನ್ನು ಗೆಲ್ಲಿಸಿ ಕೊಡುವ ಶಕ್ತಿ ನಮ್ಮಲ್ಲಿದೆ.ನಾನು ಕೂಡ ಮೊನ್ನೆ ಸಂಘ ಪರಿವಾರದ ಸಭೆಯಲ್ಲಿ ಅದನ್ನೇ ಹೇಳಿದ್ದೇನೆ.ವರಿಷ್ಠರು ಕೊಟ್ಟಂತಹ ಟಾಸ್ಕ್ ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗಾಕಿ.
ಯಡಿಯೂರಪ್ಪನವರಿಗೆ ವಯಸ್ಸಾಯ್ತು ಅವರಿಗೆ ವಿಶ್ರಾಂತಿ ಅಗತ್ಯವಿದೆ.ಅವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳುದ್ರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಭಯೋತ್ಪಾದನೆ ಗಲಭೆ ಇಂತಹ ಹಲವು ವಿಚಾರಗಳು ಹೆಚ್ಚುತ್ತಿವೆ.ಲೋಕಸಭಾ ಚುನಾವಣೆಯಲ್ಲಿ 40 ಸೀಟುಗಳು ಕಡಿಮೆ ಬಂದಿರುವುದಕ್ಕೆ ಈ ರೀತಿ ನಡೆಯುತ್ತಿದೆ.ರಾಹುಲ್ ಗಾಂಧಿ ವಿದೇಶದಲ್ಲಿ ಕುಳಿತು ದೇಶನ ಮಾನವನು ಕಳೆಯುತ್ತಿದ್ದಾರೆ.
ಅಲ್ಲಿ ಮೀಸಲಾತಿ ತೆಗೆಯಲಾಗುವುದು ಎಂದು ಹೇಳಿದರು.ದೇಶದಲ್ಲಿ ಸಂವಿಧಾನ ಬುಕ್ ಹಿಡುಕೊಂಡು ತಿರುಗಾಡುತ್ತಾರೆ.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಂಡಂತ ದೇಶಕ್ಕೆ ಸ್ವಾತಂತ್ರ ಇನ್ನೂ ಸಿಕ್ಕಿಲ್ಲ.
40 ಸಿಟ್ ಕಡಿಮೆ ಬಂದಿರುವುದಕ್ಕೆ ದೇಶದಲ್ಲಿ ಇಷ್ಟು ಹಾರಾಡುತ್ತಾರೆ.ಮೋದಿ ಅವರ ಕೈ ಬಲ ಪಡಿಸಬೇಕು ಮಾತ್ರ ಹಿಂದೂ ಧರ್ಮದ ಉಳಿಯುತ್ತೆ ಎಂದು
ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಮೂಡ ಹಗರಣ ಕ್ಕಿಂತಲೂ ದೊಡ್ಡದು ಹಗರಣ ವಾಲ್ಮೀಕಿ ನಿಗಮದಲ್ಲಿ ನಡೆದಿದೆ. ಈ ಕುರಿತು ನಾವು ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ವರಿಷ್ಠರ ಹತ್ತಿರ ಮನವಿ ಮಾಡಿದ್ದೇವೆವರಿಷ್ಠರು ಅಂತಿಮವಾಗಿ ಏನು ಹೇಳುತ್ತಾರೆ ಕಾದ ನೋಡಬೇಕಾಗಿದೆ.ತ್ವರಿತವಾಗಿ ತನಿಖೆ ಮಾಡುವಂತೆ ರಾಜ್ಯಪಾಲರನ್ನು ಭೇಟಿಯಾಗಿದ್ದೇವೆ.ಎಂದರು
ಮತ್ತೆ ಲಕ್ಷ್ಮಣ್ ಸವದಿ ಅವರನ್ನು ಕೆಣಕಿದ ರಮೇಶ್ ಜಾರಕಿಹೊಳಿ.ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯಿಂದ ಹೊಸ ಹೊಸ ಕಾರ ಬರುತ್ತಿದೆ.
ಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ.
ಮೊನ್ನೆ ಅಷ್ಟೇ ಶಾಸಕ ಲಕ್ಷ್ಮಣ್ ಸವದಿ ನೂತನ ಕಾರು ಖರೀದಿ.ಈ ವಿಚಾರಕ್ಕೆ ರಮೇಶ್ ಜಾರಕಿಹೊಳಿ ಲಕ್ಷ್ಮಣ್ ಸವದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.