ಬೆಳಗಾವಿ- ಕಳ್ಳರು ಬಂದಿದ್ದಾರೆ ಎಂದು ಬಡಾವಣೆಯ ಜನರಿಗೆ ಹೇಳಲು ಮನೆಯಿಂದ ಹೊರಗೆ ಓಡಿ ಬಂದ ಮಹಿಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳಗಾವಿ ಪಕ್ಕದ ಶಿಂಧೋಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿಂಧೋಳ್ಳಿ ಹೊಸಗೇರಿ ಗಲ್ಲಿಯ ಭರಮಕ್ಕಾ ಪೂಜಾರಿ,ಎಂಬ ಮಹಿಳೆ ರಾತ್ರಿಹೊತ್ತು ಬಾವಿಗೆ ಬಿದ್ದು ಮೃತಪಟ್ಟಿದ್ದು ಇಂದು ಬೆಳಗ್ಗೆ ಮಹಿಳೆಯ ಶವ ಹೊರಗೆ ತೆಗೆಯಲಾಗಿದೆ.
ಮಹಿಳೆ ಬಾವಿಗೆ ಆಕಸ್ಮಿಕವಾಗಿ ಬೀಳಲು ಕಳ್ಳರ ಘಟನೆ ಕಾರಣವೋ ಅಥವಾ ಬೇರೆ ಯಾವುದಾದ್ರು ಕಾರಣ ಇದೆಯೋ ಎನ್ನುವದನ್ನು ಮಾರಿಹಾಳ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ