ಬೆಳಗಾವಿ -ಕರ್ನಾಟಕದ ಹೆಸರು ಕೆಡಸಿ ಹರಿಯಾಣದಲ್ಲಿ ಗೆಲ್ಲುವುದು ರಾಜಕೀಯ ಗಿಮಿಕ್.ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮುಡಾ ಪ್ರಕರಣ ಪ್ರಸ್ತಾಪ ಮಾಡಿದ್ದಾರೆ.ಇದು ಚುನಾವಣೆ ಗೆಲ್ಲುವ ತಂತ್ರಗಾರಿಕೆಗೆ ಸೀಮಿತವಾಗಿದೆ.ಇಂತಹ ಸುಳ್ಳು ಆರೋಪಗಳಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಗ್ಗುವದಿಲ್ಲ,ಬಗ್ಗುವದಿಲ್ಲ ಹಿಂಜರಿಯುವದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಅತೀವೃಷ್ಟಿ, ಅನಾವೃಷ್ಟಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ದುಡ್ಡು ಕೊಡಲಿಲ್ಲ.ಬರೀ ಚುನಾವಣೆ ಗೆಲ್ಲಲು ರಾಜಕಾರಣಕ್ಕೆ ನಮ್ಮ ಮುಖ್ಯಮಂತ್ರಿ ಹೆಸರು ತೆಗೆದುಕೊಂಡು ಭಾಷಣ ಮಾಡ್ತಾರೆ.ದೇಶದ ಜನ, ರಾಜ್ಯದ ಜನರು ನೋಡುತ್ತಿದ್ದಾರೆ. ಇವರಿಗೆ ಬೇಕಾಗಿರುವುದು ಕನ್ನಡಿಗರ ಶ್ರೇಯೊಭಿವೃದ್ದಿ ಅಲ್ಲಾ ಎಂದು ಹೆಬ್ಬಾಳಕರ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ,ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ.ಬಿಜೆಪಿಯವರು ಎಷ್ಟು ಬೇಕು ಅಷ್ಟು ಹೋರಾಟ ಮಾಡಲಿ.ದಸರಾ ಉದ್ಘಾಟನೆ ಸಿಎಂ ಮಾಡಿಸಬಾರದು ಅನ್ನೋ ವಿಚಾರ.ಸ್ನೇಹಮಯಿ ಕೃಷ್ಣಾ, ಅಬ್ರಾಹಂ ಹಿನ್ನೆಲೆ ಎನೂ ಅನ್ನೋದು ತಿಳಿದುಕೊಳ್ಳಲಿ.
ರಾಜಕೀಯ ದುರುದ್ದೇಶದಿಂದ ಇಂತಹ ಪರಿಸ್ಥಿತಿ ರಾಜ್ಯದ ಪಾಲಿಗೆ ಬಂದೊದಗಿದೆ.
ಮುಖ್ಯಮಂತ್ರಿಗಳಿಗೆ ಪರಿಕಲ್ಪನೆ ಇದೆ ಅವರು ಎನೂ ಮಾಡ್ತಿದ್ದಾರೆ ಅಂತಾ.ಸ್ನೇಹಮಯಿ ಕೃಷ್ಣಾ ಅವರು ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ಳಿ.
ಯಾರ ವಿರುದ್ಧ ನಾವು ಮಾತಾಡ್ತಿದ್ದೇವೆ ಅಂತಾ.
ರಾಜಕೀಯ ಅವಧಿಯಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಸಿದ್ದರಾಮಯ್ಯ ಅವರಿಗೆ ಇರಲಿಲ್ಲ.ಎಲ್ಲರ ಏಳಿಗೆಗೋಸ್ಕರ ಅವರು ಮಿಡಿಯುತ್ತಾರೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಬಗ್ಗೆಯೂ ಅಬ್ರಾಹಂ ಮತ್ತು ಸ್ನೇಹಮಯಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮಾಡಲಿ.ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ಕಾನೂನಿನ ಪ್ರಕ್ರಿಯೆ ಎಫ್‌ಐಆರ್ ದಾಖಲಾಗಿದೆ.ನಾವು ತನಿಖೆ ಎದುರಿಸುತ್ತೇವೆ ಅಂತಾಗಂಟಾಘೋಷವಾಗಿ ಸಿದ್ದರಾಮಯ್ಯ ಸಾಹೇಬರು ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಬಗ್ಗುವುದಿಲ್ಲ ಜಗ್ಗುವುದಿಲ್ಲ.ನಾವು ತನಿಖೆಯನ್ನ ಎದುರಿಸುತ್ತೇವೆ ಎಂದ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿಯವರು ಒತ್ತಾಯ ವಿಚಾರ.ಅವರಿಗೆ ನಾಚಿಕೆ ಆಗಬೇಕು, ಮೊದಲು ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಡ ಮಾಡಲಿ.ನಿರ್ಮಲಾ ಸಿತಾರಾಮನ್, ಮೋದಿಯವರ ರಾಜೀನಾಮೆಗೆ ಒತ್ತಡ ಮಾಡಲಿ.ಎಲೆಕ್ಟ್ರೋ ಬಾಂಡ್ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ಎಫ್‌ಐಆರ್ ದಾಖಲು ಮಾಡಿ ಅಂತಾ ಆದೇಶ ಮಾಡಿತ್ತು.ಮೊದಲು ಅದನ್ನ ಪಾಲಿಸಿ, ಅವರ ಮೇಲೆ ಕೇಸ್ ದಾಖಲಿಸಲಿ.
ಬಿಜೆಪಿಯವರ ಹೋರಾಟ ಮುಂದುವರೆಸಲಿ ಬಹಳ ಸಂತೋಷ.ನಿರ್ಮಲಾ ಸೀತಾರಾಮನ್ ಮೇಲೆ ಇನ್ನು ಕೂಡ ಎಫ್‌ಐಆರ್ ದಾಖಲು ಮಾಡಿಲ್ಲ,ಇಡೀ ದೇಶದಲ್ಲಿ ಬಿಜೆಪಿಯೇತರ ಸರ್ಕಾರ ಅಸ್ಥಿರಗೊಳಿಸಲು ಅಸ್ತ್ರ ಪ್ರಯೋಗ ಮಾಡ್ತಿದ್ದಾರೆ.ರಾಜಭವನ ಕೂಡ ಇದಕ್ಕೆ ಹೊರತಲ್ಲ.ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡ್ತಿದ್ದು ಕಾನೂನು ರೀತಿ ಉತ್ತರ ಕೊಡ್ತೇವಿ ಎಂದು ಹೆಬ್ಬಾಳಕರ್ ಹೇಳಿದ್ದಾರೆ.
ಇದಕ್ಕೆ ರಾಜಕೀಯ ಉತ್ತರವನ್ನ ನಾವು ಕೊಡ್ತೇವಿ.ಕಾಂಗ್ರೆಸ್ ನವರೇ ಸಿಎಂ ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎಂಬ ರಮೇಶ್ ಆರೋಪ ವಿಚಾರ.ಅವರು ದೊಡ್ಡವರು ಅವರ ಬಗ್ಗೆ ಮಾತನಾಡುವುದಿಲ್ಲ ಎಂದ ಹೆಬ್ಬಾಳ್ಕರ್.ಮೊದಲು ಗ್ಯಾರಂಟಿ ಬಗ್ಗೆ ಹೇಯವಾಗಿ ಮಾತನಾಡಿದರು.
ಗ್ಯಾರಂಟಿ ಪ್ರಸಿದ್ಧಿ ಆದಂತೆ ಬೊಕ್ಕಸಕ್ಕೆ ಹಾನಿ ಆಗ್ತಿದೆ ಅಂದ್ರೂ.ಸಿದ್ದರಾಮಯ್ಯ ಸರ್ಕಾರ ಅಸ್ಥಿರಗೊಳಿಸಲು ಹೊಸ ನಾಟಕ ಶುರು ಮಾಡಿದ್ದಾರೆ.ಇದರಿಂದ ಸರ್ಕಾರಕ್ಕೆ ಆಪತ್ತಿಲ್ಲ ಎಲ್ಲ ಶಾಸಕರು ಅವರ ಜೊತೆಗೆ ಇದ್ದೇವೆ.ಅಂತಹ ಧೀಮಂತ ನಾಯಕ ನಮ್ಮ ಜೊತೆಗೆ ಇದಾರೆ ಅಂದ್ರೇ ಹೆಮ್ಮೆ ಪಡ್ತೇವಿ.ರಾಜ್ಯಪಾಲರು ಒತ್ತಡದಲ್ಲಿದ್ದಾರೆ ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ ಎಂದು ಹೆಬ್ಬಾಳಕರ್ ಆರೋಪಿಸಿದ್ದಾರೆ.
ಜೂನ್ ವರೆಗಿನ ಗೃಹ ಲಕ್ಷ್ಮೀ ಹಣವನ್ನು ಹಾಕಿದ್ದೇವೆ.ಜುಲೈ, ಆಗಸ್ಟ್ ಹಣ ಹಾಕಲು ಸಿದ್ಧತೆ ಮಾಡಲಾಗಿದೆ.ಗ್ಯಾರಂಟಿ ಬಗ್ಗೆ ಟೀಕೆಗೆ ನಾನು ತಲೆ ಕೆಡಿಸಿಕೊಳ್ಳಲ್ಲ.ಜುಲೈ ತಿಂಗಳದ್ದು ಆದಷ್ಟು ಬೇಗ ಹಣ ಬರುತ್ತೆ.ಮೀಸಲಾತಿ ಕೊಡಿಸಿದ್ರೇ ಒಂದು ಕೆಜಿ ಚಿನ್ನ ಕೊಡ್ತೇನಿ ಎಂಬ ಮುರುಗೇಶ್ ನಿರಾಣಿ ಹೇಳಿಕೆ ವಿಚಾರ.
ಸ್ವಾಭಿಮಾನಿ ಪಂಚಮಸಾಲಿ ಸಮಾಜಕ್ಕೆ ಏನ್ ಒಳ್ಳೆಯದು ಮಾಡಿದ್ದಾರೆ ಹೇಳಲಿ.
ಆಮೇಲೆ ನನಗೆ ಬಂಗಾರ ಕೊಡಿಸುವ ಬಗ್ಗೆ ಹೇಳಲಿ.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಪರವಾಗಿ ಇದ್ದೇನೆ.ಇದಕ್ಕೆ ಏನೆಲ್ಲಾ ಬೇಕು ನಾನು ಮಾಡ್ತಿನಿ.
ತಮ್ಮ ಅಧಿಕಾರದಲ್ಲಿ ಏನೂ ನಿರಾಣಿ ಮಾಡಲಿಲ್ಲ.
ಶ್ರೀಗಳನ್ನ ಮೂರು ಬಾರಿ ಸಿಎಂ ಅವರಿಗೆ ಭೇಟಿ ಮಾಡಿಸಿದ್ದೇವೆ.ಶ್ರೀಗಳು ಯಾಕೆ ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ ಅವರ ಜೊತೆಗೆ ನಾನು ಮಾತನಾಡುತ್ತೇನೆ.
ಸಿಎಂ ಸಿದ್ದರಾಮಯ್ಯ ಸಮಯವನ್ನು ಶ್ರೀಗಳಿಗೆ ಕೊಡಿಸಿದ್ದೇನೆ.ಸುವರ್ಣ ಸೌಧದಲ್ಲಿ ಭೇಟಿಗೆ ನಾನು ಅವಕಾಶ ಮಾಡಿ ಕೊಟ್ಟಿದ್ದೆ ಎಂದು ಹೆಬ್ಬಾಳಕರ್ ಹೇಳಿದ್ದಾರೆ.