Breaking News

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ನಗರದ ಸಿಇಎನ್ ಠಾಣೆಯ ಎಸಿಪಿ ಪ್ರಭು ಮತ್ತು ಪಿಐ ಬಿ.ಆರ್ ಗಡ್ಡೇಕರ ನೇತ್ರತ್ವದ ತಂಡ ಬೆಳಗಾವಿ ತಾಲ್ಲೂಕಿನ ಕಬಲಾಪೂರ ಹತ್ತಿರ ದಾಳಿ ಮಾಡಿ ಸಮೀರ್ ರಾಜೇಸಾಬ್ ಲತ್ತೆಮ್ಮನವರ ಸಾ.ಧಾರವಾಡ ಎಂಬ ಆರೋಪಿತನಿಂದ ಒಂದು ಕೆಜಿ 22 ಗ್ರಾಂ ಗಾಂಜಾ ಮತ್ತು ಬೈಕ್ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗಾವಿ ಮಹಾನಗರದಲ್ಲಿ ಗಾಂಜಾ ಅವ್ಯಾಹತವಾಗಿ ಮಾರಾಟವಾಗುತ್ತಿದೆ.ಬೆಳಗಾವಿಯ ಯುವಕರು ದಿನನಿತ್ಯ ಗಾಂಜಾ ಸೇವನೆಗೆ ಅಂಟಿಕೊಳ್ಳುತ್ತಿದ್ದು ಇದಕ್ಕೆ ಬ್ರೇಕ್ ಹಾಕಲು ಬೆಳಗಾವಿಯ ಸಿಇಎನ್ ಪೋಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕರೆ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ರೆ ಬೆಳಗಾವಿ ಮಹಾನಗರವನ್ನು ಗಾಂಜಾ ಮುಕ್ತ ನಗರವನ್ನಾಗಿ ಬದಲಾಯಿಸುವಲ್ಲಿ ಸಾರ್ವಜನಿಕರು ಕೈಜೋಡಿಸಬಹುದು.

Check Also

ಇಂದು ರಾಜ್ಯಾದ್ಯಂತ ವಕ್ಫ್ ಬೋರ್ಡ್ ಚುನಾವಣೆ, ಬೆಳಗಾವಿಯಲ್ಲಿ ಮತದಾನ.

ಬೆಳಗಾವಿ – ಬಹು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಚುನಾವಣೆ ನಡೆಯುತ್ತಿದೆ. ಬೆಳಗಾವಿ ಸೇರಿದಂತೆ …

Leave a Reply

Your email address will not be published. Required fields are marked *