ಬೆಳಗಾವಿ- ಮುಖ್ಯಮಂತ್ರಿ ಸಿದ್ರಾಮಯ್ಯನವರ ಪರಮಾಪ್ತ ಸತೀಶ್ ಜಾರಕಿಹೊಳಿ ಅವರು ನಾಳೆ ಸವದತ್ತಿಯಿಂದ ಮುಖ್ಯಮಂತ್ರಿಗಳ ಜೊತೆ ಬೆಂಗಳೂರಿಗೆ ತೆರಳಲಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲೇ ಇರುವ ಸಚಿವ ಸತೀಶ್ ಜಾರಕೊಹೊಳಿ ನಾಳೆ ಭಾನುವಾರ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದು ಸವದತ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸದತ್ತಿಯಲ್ಲೇ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ ಜೊತೆ ಪ್ರವಾಸ ಬೆಳೆಸಲಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ರಾಮಯ್ಯ ನವರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.ರಾಜಕೀಯ ಬದುಕಿನಲ್ಲಿ ಸತೀಶ್ ಜಾರಕಿಹೊಳಿ ಅವರು ಸಿದ್ರಾಮಯ್ಯನವರ ಜೊತೆಗೆ ನಿಂತಿದ್ದಾರೆ.ಇಬ್ಬರ ನಡುವಿನ ದೋಸ್ತಿಗೆ ಅಹಿಂದ್ ಇತಿಹಾಸವಿದೆ. ಸಿಎಂ ಸಿದ್ರಾಮಯ್ಯ ಈಗ ರಾಜಕೀಯ ಸಂಕಷ್ಟ ಎದುರಿಸುತ್ತಿದ್ದು ಈಗಲೂ ಈ ಜೋಡಿಯ ದೋಸ್ತಿ ಮತ್ತಷ್ಟು ಗಟ್ಟಿಯಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ