Breaking News

ಬೆಳಗಾವಿ ಜಿಲ್ಲಾ ಮಾದ್ಯಮ ವಿಭಾಗದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

 

 

ಕರ್ನಾಟಕ ರಾಜ್ಯೋತ್ಸವ-2024:ಮಾಧ್ಯಮ ಪ್ರತಿನಿಧಿಗಳಿಗೆ ಸನ್ಮಾನ

ಬೆಳಗಾವಿ, ): ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿವಿಧ ವಿಭಾಗಗಳ 11 ಜನ ಪತ್ರಕರ್ತರಿಗೆ ಕರ್ನಾಟಕ ರಾಜ್ಯೋತ್ಸವ-2024ರ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನವೆಂಬರ 1 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ಕನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.

ಸನ್ಮಾನಿತರ ವಿವರ:

ಮುದ್ರಣ ಮಾಧ್ಯಮ ವಿಭಾಗ:
ಪಿ.ಟಿ.ಐ. ಸುದ್ದಿ ಸಂಸ್ಥೆ ವರದಿಗಾರರಾದ ಸುಭಾಷ್ ಮದ್ಧುರಾವ ಕುಲಕರ್ಣಿ ಹಾಗೂ ಉದಯವಾಣಿ ದಿನಪತ್ರಿಕೆಯ ಜಿಲ್ಲಾ ಹಿರಿಯ ವರದಿಗಾರರಾದ ಭೈರೋಬಾ ಶಿವಾಜಿ ಕಾಂಬಳೆ.

ಪತ್ರಿಕಾ ಛಾಯಾಗ್ರಾಹಕರ ವಿಭಾಗ:

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆ ಛಾಯಾಗ್ರಾಹಕರಾದ ಏಕನಾಥ ರಾಮಚಂದ್ರ ಅಗಸಿಮನಿ.

ವಿದ್ಯುನ್ಮಾನ ಮಾಧ್ಯಮ ವಿಭಾಗ:

ಪ್ರಜಾ ಟಿ.ವಿ. ಜಿಲ್ಲಾ ವರದಿಗಾರರಾದ ಚಂದ್ರು ಹಣಮಂತ ಶ್ರೀರಾಮುಡು ಮತ್ತು ಚಿಕ್ಕೋಡಿ ಸುವರ್ಣ ನ್ಯೂಸ್ ವರದಿಗಾರರಾದ ಮುಸ್ತಾಕ್‌ಅಹ್ಮದ್ ಸಯ್ಯದ್ ಹುಸೇನ್ ಪೀರಜಾದೆ.

ಟಿವಿ ಕ್ಯಾಮರಾಮೆನ್ ವಿಭಾಗ:

ನ್ಯೂಸ್ ಫರ್ಸ್ಟ್ ಕ್ಯಾಮೆರಾಮನ್ ರೋಹಿತ ನಾರಾಯಣ ಶಿಂಧೆ ಮತ್ತು ಇನ್ ನ್ಯೂಸ್ ಛಾಯಾಗ್ರಾಹಕ ಸುಭಾನಿ ಇಮಾಮಸಾಬ್ ಮುಲ್ಲಾ.

ಜಿಲ್ಲಾ/ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರುಗಳ ವಿಭಾಗ:

ಸಮದರ್ಶಿ ದಿನಪತ್ರಿಕೆಯ ಸಂಪಾದಕರಾದ ಅಶ್ರಫ್ ಬಾಬಾಸಾಬ್ ಧಾರವಾಡಕರ.

ತಾಲೂಕು ವರದಿಗಾರರ ವಿಭಾಗ:

ಚನ್ನಮ್ಮನ ಕಿತ್ತೂರಿನ ಪ್ರಜಾವಾಣಿ ದಿನಪತ್ರಿಕೆಯ ತಾಲೂಕು ವರದಿಗಾರರಾದ ಪ್ರದೀಪ ನೀಲಕಂಧರ ಮೇಲಿನಮನಿ ಮತ್ತು ಕಾಗವಾಡ ತಾಲೂಕಿನ ಸಂಯುಕ್ತ ಕರ್ನಾಟಕ ಹಾಗೂ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾದ ಸಿದ್ಧಯ್ಯ ಗಂಗಯ್ಯ ಹಿರೇಮಠ.

ಪತ್ರಿಕಾ ವಿತರಕರ ವಿಭಾಗ:

ಬೈಲಹೊಂಗಲ್ ತಾಲೂಕಿನ ನೇಗಿನಹಾಳ ಗ್ರಾಮದ ಸದೆಪ್ಪ ಫಕೀರಪ್ಪ ಗರಗದ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ರಾಜ್ಯೋತ್ಸವ-2024ರ ಮಾಧ್ಯಮ ಪ್ರತಿನಿಧಿಗಳ ಸನ್ಮಾನ ಆಯ್ಕೆ ಸಮಿತಿ ಸಭೆಯಲ್ಲಿ ಏಳು ವಿಭಾಗಗಳಲ್ಲಿ ಈ 11 ಜನ ಪತ್ರಕರ್ತರುಗಳನ್ನು ಸನ್ಮಾನಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
****

Check Also

ವೀರರಾಣಿಯ ಉತ್ಸವಕ್ಕೆ ಸಿಎಂ ಬರೋದು ಖಾತ್ರಿ, ನಾಳೆ ಕಿತ್ತೂರಿನಲ್ಲಿ ಆಗತೈತಿ ಜಾತ್ರೆ…

ಬೆಳಗಾವಿ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಭಾಗವಹಿಸಿದರೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.