Breaking News

ಸಾವಿಗೆ ನ್ಯಾಯ ಬೇಕು, ಗುಪ್ತ ಪತ್ರದಲ್ಲಿ ರುದ್ರಣ್ಣನ ಸಾವಿನ ರಹಸ್ಯ..!!!

ಬೆಳಗಾವಿ- ಬೆಳಗಾವಿ ತಹಶೀಲ್ದಾರ್ ಕಚೇರಿಯ SDC ಕ್ಲಾರ್ಕ್ ರುದ್ರಣ್ಣ ಯಡವಣ್ಣವರ್ ತಹಶೀಲ್ದಾರ್ ಚೇಂಬರ್ ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ನನ್ನ ಸಾವಿಗೆ ತಹಶೀಲ್ದಾರ್ ಸೇರಿದಂತೆ ಮೂವರು ಕಾರಣ ಎಂದು ಮೆಸ್ಸೇಜ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ರುದ್ರಣ್ಣ ಯಡವಣ್ಣವರ ಸಾವಿಗೆ ಕಾರಣರಾದ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ಸೇರಿದಂತೆ ಮೂವರ ವಿರುದ್ದ ಪ್ರಕರಣ ದಾಖಲಾಗಿ ಈ ಮೂವರು ಆರೋಪಿಗಳು ನೀರೀಕ್ಷಣಾ ಜಾಮೀನು ಪಡೆದಿರುವ ಬೆನ್ನಲ್ಲಿಯೇ ಈಗ ಗುಪ್ತ ಪತ್ರವೊಂದು ಪೋಲೀಸರ ಕೈಸೇರಿದೆ.ಈ ಅನಾಮಧೇಯ ಪತ್ರದ ಪ್ರಕಾರ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ ಆತನ ಕೊಲೆಯಾಗಿದೆ ಎಂದು ಈ ಪತ್ರದಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕೊಲೆಯ ಸೂತ್ರದಾರಿ ಬೆಳಗಾವಿ ತಹಶೀಲ್ದಾರ್ ಅವರ ವಾಹನ ಚಾಲಕ ಎಂಬುವ ಗಂಭೀರ ಆರೋಪವನ್ನು ಈ ಪತ್ರದಲ್ಲಿ ಮಾಡಲಾಗಿದೆ ಜೊತೆಗೆ ಕೆಲವು ಪರ್ಸನಲ್ ವಿಚಾರಗಳನ್ನು ಸಹ ಈ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ತನಿಖೆಯ ದಿಕ್ಕು ತಪ್ಪಿಸುವದಕ್ಕಾಗಿ ಈ ಗುಪ್ತ ಪತ್ರ ಬರೆಯಲಾಗಿದೆಯೋ ? ಅಥವಾ ಸತ್ಯಾಂಶ ತಿಳಿಸುವದಕ್ಕಾಗಿ ಪತ್ರ ಬರೆಯಲಾಗಿದೆಯೋ ಎಂಬುವದನ್ನು ಪೋಲೀಸರು ತನಿಖೆ ಮಾಡುವದು ಅತ್ಯಗತ್ಯವಾಗಿದೆ. ಆದ್ರೆ ಈ ಅನಾಮಧೇಯ ಪತ್ರದಲ್ಲಿ ಇರುವ ಅಂಶಗಳನ್ನು ಗಮನಿಸಿದ್ರೆ ಹಲವಾರು ಅನುಮಾನಗಳು ಎದುರಾಗುತ್ತವೆ.ನೀರೀಕ್ಷಣಾ ಜಾಮೀನು ಪಡೆದಿರುವ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ಕರ್ತವ್ಯಕ್ಕೆ ಹಾಜರಾದ ಬಳಿಕ ಗುಪ್ತ ಪತ್ರ ಹಿರಿಯ ಪೋಲೀಸ್ ಅಧಿಕಾರಿಗಳಿಗೆ ಮುಟ್ಟಿದ್ದು ರುದ್ರಣ್ಣ ಯಡವಣ್ಣವರ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಗುಪ್ತ ಪತ್ರದಲ್ಲಿ ಇದು ಆತ್ಮಹತ್ಯೆ ಅಲ್ಲ ಇದೊಂದು ಕೊಲೆ, ಈ ಕೊಲೆಯನ್ನು ಮುಚ್ಚಿ ಹಾಕಬಾರ್ದು ಎನ್ನುವ ಕಳಕಳಿಯ ಮನವಿಯೂ ಈ ಪತ್ರದಲ್ಲಿ ಇರುವದರಿಂದ ಈ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಆಗಬೇಕು, ಈ ಪ್ರಕರಣದ ತನಿಖೆ ಉನ್ನತ ಮಟ್ಟದಲ್ಲಿ ನಡೆಯಬೇಕು,ನಂಬಿಕೆಗೆ ಅರ್ಹವಾದ ಸಂಸ್ಥೆಯ ಮೂಲಕ ಯಡವಣ್ಣವರ ಸಾವಿನ ತನಿಖೆ ನಡೆಸಬೇಕು ಎನ್ನುವದು ಸಾರ್ವಜನಿಕರ ಬೇಡಿಕೆಯಾಗಿದೆ.

ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ್ ನೀರೀಕ್ಷಣಾ ಜಾಮೀನು ಪಡೆದರೂ ಸಹ ಆರೋಪಿಯಾಗಿದ್ದು ಅವರನ್ನು ತನಿಖೆ ಮುಗಿಯುವವರೆಗೂ ಕರ್ತವ್ಯಕ್ಕೆ ನಿಯೋಜಿಸುವದು ಎಷ್ಟರಮಟ್ಟಿಗೆ ಸರಿ ಎನ್ನುವ ವಿಚಾರವೂ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.ಗುಪ್ತ ಪತ್ರ ಸಾವಿನ ರಹಸ್ಯ ಹೇಳುವ ಪ್ರಯತ್ನ ಮಾಡಿದೆ ಈ ವಿಚಾರವನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುವದು ಅತ್ಯಂತ ಅಗತ್ಯವಾಗಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *