ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು ಬೆಳಗಾವಿಯಲ್ಲಿ ಪರ,ವಿರೋಧ ಧರಣಿ ನಡೆಯಲಿದೆ.
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಇಂದು ಬೆಳಗ್ಗೆ ಸಮಾವೇಶಗೊಳ್ಳಲಿರುವ ಬಿಜೆಪಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಬಿಜೆಪಿಯ ಶಾಸಕರು ಮಾಜಿ ಶಾಸಕರು ಸೇರಿದಂತೆ ಬಿಜೆಪಿಯ ಎಲ್ಲ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ದಿನವಿಡೀ ಧರಣಿ ನಡೆಸಲಿದ್ದಾರೆ.ಇದು ಬಿಜೆಪಿಯಿಂದ ನಡೆಯಲಿರುವ ವಕ್ಫ್ ಹಠಾವೋ ಧರಣಿಯಾಗಿದೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಇಸ್ಲಾಮೀಯಾ ಹೈಸ್ಕೂಲ್ ಮೈದಾನದಲ್ಲಿ ಇಂದು ವಿವಿಧ ಮುಸ್ಲೀಂಲ ಸಂಘಟನೆಗಳು ಮತ್ತು ಪ್ರಭಾವಿ ಮುಸ್ಲಿಂ ಧರ್ಮಗುರುಗಳ ನೇತ್ರತ್ಬದಲ್ಲಿ ವಕ್ಫ್ ಬಚಾವೋ ಧರಣಿ ಆಂದೋಲನ ನಡೆಯಲಿದೆ.
ಇವತ್ತು ಶುಕ್ರವಾರ ಒಂದೇ ದಿನ ಬೆಳಗಾವಿಯಲ್ಲಿ ಒಂದು ಕಡೆ ವಕ್ಫ್ ಬಚಾವೋ ಧರಣಿ ನಡೆದ್ರೆ ಇನ್ನೊಂದು ಕಡೆ ವಕ್ಫ್ ಹಠಾವೋ ಧರಣಿ ನಡೆಯಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ