ಬೆಳಗಾವಿ -ಕೆರೆಗೆ ಹಾರಿ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾದ ಘಟನೆ,ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕು ಪರಸನಟ್ಟಿ ಗ್ರಾಮದಲ್ಲಿ ನಡೆದಿದೆ.
ದೇಗಾಂವ ಗ್ರಾಮದ ಯೋಧ ನರೇಶ ಯಲ್ಲಪ್ಪ ಆಗಸರ(28) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನೂವ ಶಂಕೆ ವ್ಯಕ್ತವಾಗಿದೆ ಐದು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ,ನಿನ್ನೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದ ಯೋಧ ನರೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.
ವೈವಾಹಿಕ ಜೀವನದಲ್ಲಿ ಏರುಪೇರಿಂದ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.20 ದಿನಗಳ ಹಿಂದೆ ರಜೆ ಮೇಲೆ ದೇಗಾಂವ ಗ್ರಾಮಕ್ಕೆ ಬಂದಿದ್ದ ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು,ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸರ ಭೇಟಿ ನೀಡಿದ್ದು,ಅಗ್ನಿಶಾಮಕ ಸಿಬ್ಬಂದಿಗಳಿಂದ ಯೋಧನ ಮೃತದೇಹ ಹುಡುಕಾಟ ನಡೆದಿದೆ.ನಿನ್ನೆ ಸಂಜೆಯಿಂದಲೂ ಕೆರೆಯಲ್ಲಿ ಹುಡುಕಾಟ ನಡೆಸ್ತಿರೋ ಅಗ್ನಿಶಾಮಕ ಸಿಬ್ಬಂದಿ ಯೋಧನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ