Breaking News

ಶೆಟ್ಟರ್ ಶ್ರಮದಾನ ಬೆಳಗಾವಿಗೆ 100 ಕೋಟಿ ಅನುದಾನ….!!!

ಬೆಳಗಾವಿ -ಬೆಳಗಾವಿ ಮಹಾನಗರಕ್ಕೆ ವಂದೇ ಭಾರತ್ ರೈಲು ಬಿಡುವದು,ಸವದತ್ತಿ ಯಲ್ಲಮ್ಮ ದೇವಿಯ ಪುಣ್ಯಕ್ಷೇತ್ರಕ್ಕೆ ರೈಲು ಮಾರ್ಗ ನಿರ್ಮಿಸುವದು ಸೇರಿದಂತೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ರಾಜಧಾನಿ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡುತ್ತಲೇ ಇದ್ದು, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸುವಲ್ಲಿ ಶೆಟ್ಟರ್ ಯಶಸ್ವಿ ಆಗಿದ್ದಾರೆ.ಸುಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ರೂ. 100 ಕೋಟಿ ಅನುದಾನವನ್ನು ಮಂಜೂರು ಮಾಡಿದೆ, ಎಂದು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಈ ಅನುದಾನ ಕೇಂದ್ರ ಪ್ರವಾಸೋದ್ಯಮ ಇಲಾಖೆ “Approval of capital expenditure under part -3 ( Development of lconic tourist centres of global scale ) of the scheme of special assistance to States for capital investment -2024-25 ಈ ಯೋಜನೆ ಅಡಿ ಮಂಜೂರು ಮಾಡಿದ್ದು, ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾದ ಎರಡು ದೇವಸ್ಥಾನಗಳಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವೂ ಒಂದಾಗಿದೆ ಎಂದು ಸಂಸದರಾದ ಶ್ರೀ ಜಗದೀಶ ಶೆಟ್ಟರ ಇವರು ತಿಳಿಸಿದ್ದಾರೆ.

ಪ್ರಸ್ತಾಪಿತ ಯೋಜನೆಯ ಅನುಮೋದನೆಯ ಕುರಿತು ಹಿಂದಿನ ತಿಂಗಳಷ್ಟೆ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಇವರನ್ನು ಭೇಟಿ ಮಾಡಿದ ಸಂಸದರು ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಮಹತ್ವತೆಯ ಕುರಿತು ಹಾಗೂ ಇಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕೆ ಮೂಲಭೂತ ಸೌಕರ್ಯದ ಅವಶ್ಯಕತೆಯ ಬಗ್ಗೆ ತಿಳಿಸಿ, ಯೋಜನೆಯ ಒಪ್ಪಿಗೆಗಾಗಿ ವಿನಂತಿಸಿದ್ದರು. ಬೇಡಿಕೆಗೆ ಸ್ಪಂದಿಸಿ ಅದರಂತೆ ಒಪ್ಪಿಗೆ ನೀಡಿರುವುದಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಯೋಜನೆಯ ಅನುದಾನದಿಂದ ಪ್ರಸ್ತಾಪಿತ ದೇವಸ್ಥಾನದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ನಿರ್ಮಾಣವಾಗಲಿದ್ದು ಇದರಿಂದ ಭಕ್ತಾದಿಗಳಿಗೆ ಖಂಡಿತವಾಗಿಯೂ ಹೆಚ್ಚಿನ ಅನುಕೂಲತೆ ಆಗಲಿದೆ ಎಂದು ಸಂಸದರಾದ ಶ್ರೀ ಜಗದೀಶ ಶೆಟ್ಟರ ಅವರು ಪ್ರಸ್ತಾಪಿಸಿದ್ದಾರೆ.

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *