ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!

ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ ಸಾಲ ಕೊಡಿಸಿ ಐವತ್ತು ಸಾವಿರ ನುಂಗಿ ನೀರು ಕುಡಿದು ಐವತ್ತು ಸಾವಿರ ರೂ ಸಾಲಗಾರರಿಗೆ ಮುಟ್ಟಿಸಿ ಮಹಿಳೆಯೊಬ್ಬಳು ಕೋಟ್ಯಾಂತರ ರೂ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಅವರೆಲ್ಲರೂ ಕೃಷಿ ಮಹಿಳಾ ಕಾರ್ಮಿಕರು, ಕೂಲಿ ಕೆಲಸವನ್ನೇ ನಂಬಿ ಜೀವನ ಮಾಡ್ತಿದ್ದವರು ಅಂತಹ ಮುಗ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ ವಂಚಕ ಮಹಿಳೆಯೊಬ್ಬಳು ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ್ ಹಾಕಿದ್ದಾಳೆ.ಒಂದು ಲಕ್ಷ ರೂ ಸಾಲ ಪಡೆದ ಪಾವತಿ ಕೈ ಸೇರುತ್ತಿದ್ದಂತೆಯೇ ಸಾಲ ಪಡೆದ ಸಾವಿರಾರು ಮಹಿಳೆಯರು ವಂಚಕಿ ಮಹಿಳೆಯ ಮನೆಗೆ ಮುತ್ತಿಗೆ ಹಾಕಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಜಮಾವನೆ ಆಗಿರೋ ಜನ, ಜಮಾವನೆ ಆಗಿರೋ ಮಹಿಳೆಯರನ್ನ ಚದುರಿಸುತ್ತಿರೋ ಪೊಲೀಸರು ಈ ಎಲ್ಲ ದೃಶ್ಯ ಕಂಡುಬಂದಿದ್ದು ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ. ಹೌದು ಈ ಪೋಟೋದಲ್ಲಿ ಕಾಣ್ತಿರುವ ಮಹಿಳೆ ಹೆಸರು ಯಲ್ಲವ್ವ ಬನ್ನಿಬಾಗಿ ಅಂತಾ ಬೆಳಗಾವಿ ತಾಲೂಕಿನ ಹಾಲಾಭಾವಿ ಗ್ರಾಮದ ನಿವಾಸಿ. ಕಳೆದ ಮೂರು ವರ್ಷಗಳಿಂದ ಹಳ್ಳಿ ಹಳ್ಳಿಗಳಿಗೆ ತೆರಳಿ ಸಾಲ ಕೊಡಿಸುವುದಾಗಿ ಮುಗ್ಧ ಬಡ ಮಹಿಳೆಯರಿಗೆ ಪ್ರಚೋದನೆ ಮಾಡಿದ್ದಾಳೆ.ಅಷ್ಟೇ ಅಲ್ಲದೇ ಬೆಳಗಾವಿ ಜಿಲ್ಲೆಯ ಬಹುತೇಕ ತಾಲೂಕಿನ ಸಾವಿರಾರು ಸಂಘಟನೆಗಳನ್ನು ಕಟ್ಟಿದ್ದಾಳೆ.ಆರ್ಥಿಕ ನೆರವು ಸಿಗುತ್ತೆ ಅಂತಾ ನಂಬಿದ ಮಹಿಳೆಯರು ಯಲ್ಲವ್ವನ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ‌. ಪ್ರತಿ ಸಂಘಕ್ಕೂ ಸಂಘದ ಸದಸ್ಯರಿಗೂ ಸ್ಥಳೀಯ ಫೈನಾನ್ಸ್, ಸೊಸೈಟಿ, ಹಣಕಾಸು ನೀಡುವ ಸಂಘದಲ್ಲಿ ತಲಾ 1 ಲಕ್ಷ, ಐವತ್ತು ಸಾವಿರ ಹೀಗೆ ಸಾಲ ತೆಗೆಸಿದ್ದಾಳೆ.ಅದರಲ್ಲಿ ಅರ್ಧ ಹಣವನ್ನು ಯಲ್ಲವ್ವ ಪಡೆದರೆ ಇನ್ನುಳಿ ಅರ್ಧ ಆಕೆ ಪಡೆದು ಸಾಲದ ಆಕೆಯ ಸಾಲದ ಎಲ್ಲವನ್ನೂ ನಾನೇ ತುಂಬುತ್ತೇನೆ ಅಂತಾ ಹೇಳಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾಳೆ.

ಇನ್ನೂ ಹೀಗೆ ತೆಗೆದುಕೊಂಡ ಸಾಲದ ಪಾವತಿಗೆ ಫೈನಾನ್ಸ್ ಮತ್ತು ಸೊಸೈಟಿ ಸಿಬ್ಬಂದಿಗಳು ಮನೆಗೆ ಬರುವಂತೆ ಸಾಲ ಪಡೆದವರು ಶಾಕ್ ಆಗಿದ್ದಾರೆ. ಯಲ್ಲವ್ವ ನಮಗೆ ಆರ್ಥಿಕ ನೆರವು ನೀಡಲು ಬಂದಿಲ್ಲ ಮೋಸ ಮಾಡಲು ಬಂದವಳು‌ ಅಂತಾ ಈಗ ಗೊತ್ತಾಗಿದೆ. ಈ‌ ಕಾರಣಕ್ಕೆ ಹಾಲಭಾವಿ ಗ್ರಾಮದಲ್ಲಿರುವ ಮನೆಗೆ ಹೋಗಿರುವ ಜನರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಕೂಡ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಯಲ್ಲವ್ವ ಮನೆಗೆ ಆಗಮಿಸಿ‌ ಘೇರಾವ ಹಾಕಿದ್ದಾರೆ.ಪಡೆದ ಲೋನ ಮುಟ್ಟಿಸಬೇಕು ಇಲ್ಲವೇ ಹಣ ವಾಪಸ್ ‌ಕೊಡುವಂತೆ ಯಲ್ಲವ್ವಗೆ ಮನವಿ ಮಾಡಿದ್ದಾರೆ. ಇನ್ನೂ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನ ಆಗುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಹಣ ಕಳೆದುಕೊಂಡ ಮಹಿಳೆಯರು ಮನವೊಲಿಕೆಗೆ ಹರಸಾಹಸಪಟ್ಟರು.ಬಳಿಕ ವಂಚಕಿಯನ್ನ ಪೊಲೀಸರು ವಶಕ್ಕೆ ಪಡೆದರು. ಇನ್ನೂ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ರೋಹನ್ ಜಗದೀಶ್, ಈಗಷ್ಟೇ ಮಹಿಳೆಯ ವಂಚನೆ ಪ್ರಕರಣ ಗಮನಕ್ಕೆ ಬಂದಿದ್ದು ಈಗಾಗಲೇ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣದ ತನಿಖೆ ನಡೆಸಿ ಮೋಸ ಹೋದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *