ಬ್ಯಾಂಕ್ ಸಿಬ್ಬಂಧಿಯಿಂದಲೇ ಎಟಿಎಂ ಕಳ್ಳತನ, ಶಾಕ್ ಆದ ಪೋಲೀಸರು

ಬೆಳಗಾವಿ–ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿಯಿಂದಲೇ ಎಟಿಎಂ ಕಳ್ಳತನ ಮಾಡಿರುವ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.

HDFC ಎಟಿಎಂ ನಲ್ಲಿ ಹಣ ಎಗರಿಸಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.ಎಂಟು ಲಕ್ಷ ಹಣ ಎಟಿಎಂ ನಿಂದ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ.ಬೆಳಗಾವಿ ನಗರದ ಆರೋಪಿ ಕೃಷ್ಣಾ ಸುರೇಶ್ ದೇಸಾಯಿ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.

ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ‌.ತನ್ನ ಬಳಿಯೇ ಇರ್ತಿದ್ದ ಎಟಿಎಂ ಮಷೀನ್ ಕೀಯನ್ನು ದುರುಪಯೋಗ ಮಾಡಿಕೊಂಡಿದ್ದ,ಟೀಮ್ ಜೊತೆಗೆ ಬಂದು ಹಣ ಹಾಕಿ ಬಳಿಕ ಸಂಜೆ ಒಬ್ಬನೇ ಬಂದು ಕಳ್ಳತನ ಮಾಡ್ತಿದ್ದ,ಹಣ ಹಾಕಲು ಇರ್ತೀದ್ದ ಎಟಿಎಂ ಮಷೀನ್ ಕೀ ಬಳಸಿಯೇ ಎಂಟು ಲಕ್ಷ ಹಣ ಕಳ್ಳತನ ಮಾಡಿ ಈಗ ಪೋಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಷೀನ್ ಓಪನ್ ಮಾಡಿ ಬಿಂದಾಸ್ ಆಗಿ ಕಳ್ಳತನ ಮಾಡಿದ್ದ,ಎರಡು ದಿನದ ಬಳಿಕ ಈತನ ಕೃತ್ಯ ಬೆಳಕಿಗೆ ಬಂದಿತ್ತು.ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದಾಗ ಎಟಿಎಂ ನಿಂದ ತಮ್ಮ‌ ಸಿಬ್ಬಂದಿ ಹಣ ಕದ್ದಿದ್ದು ಕಂಡು ಬ್ಯಾಂಕಿನ ಅಧಿಕಾರಿಗಳು ಶಾಕ್ ಆಗಿದ್ದರು.ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತಲೆ ಮರೆಸಿಕೊಂಡಿದ್ದ ಆರೋಪಿ ಕೃಷ್ಣಾ ದೇಸಾಯಿಯನ್ನು ಪೋಲೀಸರು ಬಂಧಿಸಿದ್ದಾರೆ.ಬಂಧಿತನಿಂದ ಒಂದು ಮಂಗಲ ಸೂತ್ರ, 7 ಲಕ್ಷ ರೂಪಾಯಿ ‌ನಗದು ಜಪ್ತಿ ಮಾಡಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *