Breaking News

ಪಾರಿವಾಳ ದುಡ್ಡಿಗಾಗಿ ಸೆಡ್ಡು,ಟಿವ್ಹಿ ಕಿಡಕಿ ಪೀಸ್ ಪೀಸ್….!!!

ಬೆಳಗಾವಿ-ಪಾರಿವಾಳದ ವಿಚಾರವಾಗಿ ಇಬ್ಬರು ಯುವಕರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ,ಪಾರಿವಾಳದ ಹಣ ಕೇಳಿದಕ್ಕೆ ಸ್ನೇಹಿತರ ಜೊತೆಗೂಡಿ ದರ್ಶನ್ ಎಂಬಾತನ ಮೇಲೆ ಅಪ್ರಾಪ್ತನು ಹಲ್ಲೆ ಮಾಡಿದ ಘಟನೆ ನಡೆದಿದೆಬೆಳಗಾವಿ ತಾಲೂಕಿನ ‌ಬಸ್ತವಾಡ ಗ್ರಾಮದಲ್ಲಿ ಪಾರಿವಾಳ ದುಡ್ಡಿಗಾಗಿ ‌ ಗಲಾಟೆಯಾಗಿದೆ.

ಇದೇ ಸಿಟ್ಟಿಗೆ ಬಸವನಕುಡಚಿ ಗ್ರಾಮದ ದಲ್ಲಿರುವ ಅಪ್ರಾಪ್ತ ಮನೆ ದ್ವಂಸಕ್ಕೆ ಯತ್ನಿಸಲಾಗಿದೆ.
15 ಕ್ಕೂ ಅಧಿಕ ದರ್ಶನ ಸ್ನೇಹಿತರು ರಾತ್ರೋರಾತ್ರಿ ರಾಡ್, ಪೆಟ್ರೋಲ್, ಕಲ್ಲುಗಳ ಸಮೇತ ಆಗಮಿಸಿ ಮನೆ ದ್ವಂಸಕ್ಕೆ ಯತ್ನಿಸಿದ್ದಾರೆ.ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ದ್ವಂಸಗೊಳಿಸಿ ಪಾತ್ರೆಗಳನ್ನು ಚಿಲ್ಲಾಪಿಲ್ಲಿ ಮಾಡಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.

ಬಳಿಕ ಅಪ್ರಾಪ್ತನ ತಂದೆ ಬೆದರಿಸಿ ಕೈಗೆ ಹಗ್ಗದಿಂದ ಕಟ್ಟಿ ಕರೆದೊಯ್ಯುವ ಯತ್ನವೂ ನಡೆದಿದೆ.
ನಮ್ಮ ಜೊತೆಗೆ ಬಾರದಿದ್ದರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ.

ದರ್ಶನ ಎಂಬಾತನಿಂದ 2 ಸಾವಿರಕ್ಕೆ ಪಾರಿವಾಳ ಖರೀದಿಸಿ ಹಣ ನೀಡದೇ ಸತಾಯಿಸ್ತಿದ್ದ ಅಪ್ರಾಪ್ತ.
ಪದೆ ಪದೇ ಹಣ ಕೇಳ್ತಿರುವುದಕ್ಕೆ ಸ್ನೇಹಿತರ ಜೊತೆಗೂಡಿ ದರ್ಶನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಸಿಟ್ಟಿನಿಂದ ರಾತ್ರೋರಾತ್ರಿ ಅಪ್ರಾಪ್ತನ ಮನೆಗೆ ನುಗ್ಗಿ ದ್ವಂಸಕ್ಕೆ ಯತ್ನಿಸಿರುವ ದರ್ಶನ ಸ್ನೇಹಿತರು.ಪ್ರಕರಣ ಸಂಬಂಧ ಹಿರೇಬಾಗೇವಾಡಿ, ಮಾಳಮಾರುತಿ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದುಅಪ್ರಾಪ್ತ ಸೇರಿ ಮೂವರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮನೆ ದ್ವಂಸಕ್ಕೆ ಯತ್ನಿಸಿದಕ್ಕೆ 7 ಜನರನ್ನು ಬಂಧಿಸಿ ಜೈಲಿಗಟ್ಟಿರುವ ಮಾಳಮಾರುತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಈಗ ಸದ್ಯ ಪಾರಿವಾಳ ಹಾರಿ ಹೋಗಿದೆ.ಅದಕ್ಕಾಗಿ ಗಲಾಟೆ ಮಾಡಿದವರು ಜೈಲಿಗೆ ಹೋಗಿದ್ದಾರೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *