Breaking News

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ವಿಶೇಷ ವಿಮಾನ

ಬೆಳಗಾವಿಯ ಸುವರ್ಣಸೌಧದಲ್ಲಿ ಜರುಗಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯು ಡಿಸೆಂಬರ್ 9 ರಿಂದ 19 ರ ವರೆಗೆ ವಿಶೇಷ ಏರ್ ಬಸ್ A320 ಹಾರಾಟವನ್ನು ಬೆಂಗಳೂರು – ಬೆಳಗಾವಿಯ ನಡುವೆ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ  ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.

ಈ ವಿಮಾನವು ಬೆಳಗ್ಗೆ 06:00 ಗಂಟೆಗೆ ಬೆಂಗಳೂರಿನಿಂದ ಹೊರಟು 07:00 ಗಂಟೆಗೆ ಬೆಳಗಾವಿಯನ್ನು ತಲುಪಿ, ಪುನಃ 7:30ಕ್ಕೆ ಬೆಳಗಾವಿಯಿಂದ ಹೊರಟು 8:30ಕ್ಕೆ ಬೆಂಗಳೂರನ್ನು ತಲುಪುತ್ತದೆ. ಈ ವಿಶೇಷ ಏರ್ ಬಸ್ 189 ಆಸನಗಳನ್ನು ಹೊಂದಿದೆ.

ಡಿಸೆಂಬರ್ 20 ರಿಂದ ATR72 ವಿಮಾನ ಸೇವೆಗಳು ಯಥಾ ಸ್ಥಿತಿ ಮುಂದುವರೆಯುವವು. ನಮ್ಮ ಬೇಡಿಕೆಗೆ ಅನುಗುಣವಾಗಿ ಈ ವಿಶೇಷ ಅನುಕೂಲ ಕಲ್ಪಿಸಿದ ಇಂಡಿಗೋ ಏರ್ ಲೈನ್ಸ್ ಸಂಸ್ಥೆಗೆ ಸಂಸದರಾದ  ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *