ಬೆಳಗಾವಿ-ಇದು ಪವಾಡವೋ? ಕಾಕತಾಳೀಯವೋ? ಗೊತ್ತಿಲ್ಲ ಆದ್ರೆ ಈ ರೀತಿಯ ಘಟನೆ ನಡೆದಿದ್ದು ಸತ್ಯ ಹಾವಿನ ದ್ವೇಷ 12 ವರ್ಷ ಎಂಬ ನಾಣ್ಣುಡಿಯೇ ಇದೆ.ಆದರೆ ಈ ಹಾವಿನದು ದ್ವೇಷವೋ? ಜನರ ಮೇಲಿನ ಪ್ರೀತಿಯೋ? ಗೊತ್ತಿಲ್ಲ, ಬೆಳಗಾವಿಯ ಜನರಿಗೆ ಈ ಹಾವು ಹಲವಾರು ವರ್ಷಗಳಿಂದ ಪ್ರತ್ಯಕ್ಷವಾಗಿ ಉರಗತಜ್ಞ ಆ ಹಾವನ್ನು ಹಿಡಿದ ಬಳಿಕ ಆತನ ಡಬ್ಬಿಯಿಂದಲೂ ಮಾಯವಾಗುತ್ತಿದೆ.ನಂತರ ಮತ್ತೆ ಪ್ರತ್ಯಕ್ಷ್ಯವಾಗುತ್ತಿದೆ.
ಕುಂದಾನಗರಿ ಬೆಳಗಾವಿ ಜನರಲ್ಲಿ ಭೀತಿ ಹುಟ್ಟಿಸಿದ ನಾಗರಹಾವು,ಕಳೆದ 15 ದಿನಗಳಿಂದ ಬೇರೆ ಬೇರೆ ಮನೆಗಳಲ್ಲಿ ಪ್ರತ್ಯೇಕ್ಷವಾಗಿ ದಿಢೀರ್ ಮಾಯವಾಗಿದೆ. ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದ ಪೇಟ್‌ಗಲ್ಲಿಯಲ್ಲಿ ಪವಾಡದೃಶ್ಯ ಘಟನೆ ನಡೆದಿದೆ.
ಹಾವಿನ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಉರಗ ತಜ್ಞರಿಗೆ ಸ್ಥಳೀಯರ ಮಾಹಿತಿ ನೀಡಿದ್ದಾರೆ.ಎರಡ್ಮೂರು ಭಾರೀಯ ಪ್ರಯತ್ನದ ಫಲವಾಗಿ ಉರಗ ತಜ್ಞರ ಕೈಗೆ ಸಿಕ್ಕ ನಾಗರ ಹಾವು,ಎರಡು ದಿನಗಳ ಹಿಂದೆ ನಾಗರಹಾವು ಹಿಡಿದಿದ್ದ ಉರಗ ತಜ್ಞ ಸಚಿನ್ ಚಿಂಗಳೆ ಈ ಹಾವನ್ನು,ರಾತ್ರಿ ವೇಳೆ ರಕ್ಷಣೆ ಮಾಡಿದ ಕಾರಣಕ್ಕೆ ಹಾವನ್ನು ಡಬ್ಬಿಯಲ್ಲಿಟ್ಟು ಮೇಲೆ ಹ್ಯಾಂಡ ಬ್ರೇಕ್ ಕೆಳಗೆ ಆ ಡಬ್ಬಿಯನ್ನಿಟ್ಟಿದ್ದ, ನಾಗರ ಹಾವು ಇದ್ದ ಡಬ್ಬಿಯನ್ನು ತನ್ನ ಕಾರಲ್ಲಿಟ್ಟಿದ್ದ ಸಚಿನ್ ಗೆ ಬೆಳಗಾಗುವಷ್ಟರಲ್ಲಿ ಶಾಕ್ ಆಗಿತ್ತು.
ಹಾವನ್ನು ಬೆಳಗ್ಗೆ ಕಾಡಿಗೆ ಬಿಟ್ಟರಾಯ್ತೆಂದು ಕಾರಲ್ಲೇ ಹಾವಿದ್ದ ಡಬ್ಬಿ ಇಟ್ಟಿದ್ದ ಸಚಿನ್,ಬೆಳಗ್ಗೆ ನೋಡುವಷ್ಟರಲ್ಲಿ ಡಬ್ಬಿಯಲ್ಲಿದ್ದ ನಾಗರ ಹಾವು ಮಾಯವಾಗಿತ್ತು.
ಕಾರು ಡೋರ್ ಓಪನ್ ಮಾಡಿದಾಗ ಡಬ್ಬಿಯಲ್ಲಿದ್ದ ಹಾವು ಮಾಯವಾಗಿದ್ದನ್ನು ಕಂಡು ಉರಗ ತಜ್ಞ ಸಚೀನ್ ಶಾಕ್ ಆಗಿದ್ದ.
ಇಡೀ ಕಾರು ತಡಕಾಡಿದರೂ ಸಿಗದ ನಾಲ್ಕು ಅಡಿ ಉದ್ಧದ ನಾಗರ ಹಾವು,ಒಂದೂವರೆ ವರ್ಷದ ಹಿಂದೆಯೂ ಸ್ಥಳೀಯರಿಗೆ ಎದುರಾಗಿತ್ತು ಈ ರೀತಿಯ ಸನ್ನಿವೇಶ,ಆಗಲೂ ಮನೆ, ಗಾರ್ಡನ್‌ಗಳಲ್ಲಿ ಪ್ರತ್ಯಕ್ಷವಾಗಿ ಮಾಯವಾಗ್ತಿದ್ದ ನಾಗರಹಾವು,ದೇವರ ಹಾವು ಇರಬಹುದು ಎಂದು ಸುಮ್ಮನಾಗಿದ್ದ ಸ್ಥಳೀಯರು.ಇದೀಗ ಮತ್ತೆ ಅಂಥದೇ ಸನ್ನಿವೇಶ ಸೃಷ್ಟಿಯಾಗಿದ್ದು ಪವಾಡ.ಮತ್ತೆ ಇದೇ ಹಾವು ಪ್ರತ್ಯಕ್ಷ ಆಗಬಹುದು ಎನ್ನುವ ಭೀತಿ ಈಗ ಬಾಳೆಕುಂದ್ರಿ ಜನರನ್ನು ಕಾಡುತ್ತಿದೆ.