ಬೆಳಗಾವಿ-ಹನಿ ಟ್ರ್ಯಾಪ್ ಮಾಡಿ ಲಕ್ಷ.. ಲಕ್ಷ.. ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ.ಲಾಡ್ಜ್‌ನಲ್ಲಿ ತಂಗಿದ್ದ ಪುರುಷ ಮಹಿಳೆ ರೂಂಗೆ ಹೋಗಿ ವಿಡಿಯೋ ಮಾಡಿಕೊಂಡಿದ್ದ ಕೀಚಕರು,ಲಾಡ್ಜ್ ನಲ್ಲಿ ಮಲಗಿದ್ದ,ಜೋಡಿಯ ಅರೆನಗ್ನ ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದರು
ವಿಡಿಯೋ ಮಾಡಿಟ್ಟುಕೊಂಡು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.9 ಲಕ್ಷ ಹಣ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಕಾಡುತ್ತಿದ್ದರು.ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ ಹಾಕಿದ್ದ ಕೀಚಕರು ಈಗ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಹುಕ್ಕೇರಿಯ ಲಾಡ್ಜ್ ಒಂದರಲ್ಲಿ ತಂಗಿದ್ದ ಮಹಿಳೆ ಹಾಗೂ ಪುರುಷ,ಅಬ್ದುಲ್ ಪೈಲವಾನ್, ಸುಭಾನ್, ಹಾಗೂ ರೇಷ್ಮಾ ಕಡಬಿಶಿವಾಪುರ ಎಂಬುವವರ ವಿರುದ್ಧ ದೂರು ದಾಖಲಾಗಿದೆ.ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಈರಪ್ಪ ಮುನ್ಯಾಳ ಅವರ ದೂರನ್ನು ಆಧರಿಸಿ,ಈರಪ್ಪ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿರುವ ಮೂಡಲಗಿ ಪೊಲೀಸರು.