ಬೆಳಗಾವಿ -ಬೆಳಗಾವಿಯಲ್ಲಿ ಸುವರ್ಣಸೌಧ ಆದಾಗಿನಿಂದ ಬೆಳಗಾವಿಗೆ ಅನ್ಯಾಯ ಆಗುತ್ತಲೇ ಇದೆ.ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುವ ಬದಲು ಜಿಲ್ಲಾ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಿ ಇದನ್ನು ಮಿನಿ ವಿಧಾಸೌದ ಮಾಡಿದ್ದಾರೆ. ಬೆಳಗಾವಿಯ ಸುವರ್ಣಸೌಧ ಭೂತ ಬಂಗಲೆಯಾಗಿದೆ.ಇದೊಂದು ಟೂರೀಂಗ್ ಟಾಕೀಸ್ ಆಗಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ವಿಧಾನಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಯ ಕುರಿತು ನಡೆದ ಚಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಭಯ ಪಾಟೀಲ, ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸಮ್ಮೇಳನಗಳು ಬೆಳಗಾವಿಯಲ್ಲಿ ನಡೆಯಬೇಕು ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು,ಇಲ್ಲಿ ಸಮೀತಿಗಳ ಸಭೆಗಳು ನಡೆಯಬೇಕು, ಸಚಿವ ಸಂಪುಟದ ಸಭೆಗಳನ್ನು ಆಗಾಗ್ಗೆ ಇಲ್ಲಿ ನಡೆಸಿ ಈ ಭಾಗದ ಜನರ ಭಾವನೆಗಳಿಗೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು,ಸುವರ್ಣಸೌಧ ನಿರಂತರವಾಗಿ ಕ್ರೀಯಾಶೀಲ ವಾಗಬೇಕು ಎಂದು ಅಭಯ ಪಾಟೀಲ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ದಕ್ಷಿಣ ಕರ್ನಾಟಕದ ಶೇ 60 % ರಷ್ಟು ಶಾಸಕರು ಮಾತ್ರ ಭಾಗವಹಿಸುತ್ತಾರೆ.ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದೆ.ನಾಲ್ಕು ಜನ ಮಂತ್ರಿಗಳನ್ನು ಬಿಟ್ಟರೆ ಉಳಿದವರು ಗೈರಾಗಿದ್ದಾರೆ. ಉತ್ತರ ಕರ್ನಾಟಕದ ಇವರಿಗೆ ಎಷ್ಡು ಕಾಳಜಿ ಇದೆ ನೋಡಿ,ಕಾಟಾಚಾರಕ್ಕೆ ಚರ್ಚೆ ಮಾಡಿ ನಮಗೆ ಲಾಲಿಪಾಪ್ ಕೊಡಬೇಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ ಎಂದು ಅಭಯ ಪಾಟೀಲ ಒತ್ತಾಯಿಸಿದರು.
ಬೆಳಗಾವಿಯಲ್ಲಿ ಇಂಡಸ್ಟ್ರಿ ಬೆಳೆಯಬೇಕು, ಬೆಳಗಾವಿಯಲ್ಲಿ ಐಟಿ ಪಾರ್ಕ್ ನಿರ್ಮಾಣ ಆಗಬೇಕು, ಮಂಜೂರಾಗಿರುವ ಕಿದ್ವಾಯಿ ಆಸ್ಪತ್ರೆಯ ಕಾಮಗಾರಿ ಆರಂಭಿಸಬೇಕು, ಬೆಳಗಾವಿಯ ಕ್ರಿಕೆಟ್ ಸ್ಟೇಡಿಯಂ ಮೇಲ್ದರ್ಜೆರಿಸಿ ಇಲ್ಲಿ IPL ಮ್ಯಾಚ್ ಗಳು ನಡೆಯುವಂತೆ ಅಭಿವೃದ್ಧಿ ಪಡಿಸಬೇಕು, ಬಳ್ಳಾರಿ ನಾಲೆಯ ಸಮಸ್ಯೆ ಬಗೆಹರಿಸಬೇಕು,ಬೆಖಗಾವಿಯ ಡ್ರಿನೇಜ್ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು, ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು, ಬೆಳಗಾವಿಯಲ್ಲಿ ಸ್ಪೋರ್ಟ್ಸ್ ಕ್ಲಬ್ ನಿರ್ಮಾಣಕ್ಕೆ 60 ಎಕರೆ ಭೂಮಿ ಗುರುತಿಸಲಾಗಿದ್ದು ಸರ್ಕಾರ ಇದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಅಭಯ ಪಾಟೀಲ ಬೆಳಗಾವಿಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಬೆಳಗಾವಿಯ ಫೌಂಡ್ರಿ ಉದ್ಯಮ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.ಇದನ್ನು ಇನ್ನಷ್ಟು ಅಭಿವೃದ್ಧಿ ಆಗಬೇಕು ಎನ್ನುವದು ಸರ್ಕಾರದ ಆಶಯ ಆಗಿದೆ.ಅದಕ್ಕಾಗಿ ಸೂಕ್ತ ಜಾಗೆಯನ್ನು ಗುರುತಿಸುವಂತೆ ನಾನು ಅಭಯ ಪಾಟೀಲ ಅವರಿಗೆ ಮನವಿ ಮಾಡಿದ್ದೆ ಕಣಗಲಾ ಹತ್ತಿರ ನಾವು ನಿರ್ಮಿಸಿದ ಕೈಗಾರಿಕಾ ಪ್ರದೇಶಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.ಕಣಗಲಾದಲ್ಲಿ ಎರಡನೇಯ ಕೈಗಾರಿಕಾ ಪ್ರದೇಶ ನಿರ್ಮಿಸಲು ನಿರ್ಧರಿಸಿದ್ದೇವೆ.ಬೆಳಗಾವಿಯಲ್ಲಿ ಸ್ಟಾಟಪ್ ಪಾರ್ಕ ನಿರ್ಮಿಸುತ್ತೇವೆ. ಬೆಳಗಾವಿಯ ಉದ್ಯಮ ವಲಯ ಬೆಳೆಯಬೇಕು ಎನ್ನುವದು ನಮ್ಮ ಆಶಯವಾಗಿದೆ ಎಂದು ಎಂ.ಬಿ ಪಾಟೀಲ ಹೇಳಿದರು