ಬೆಳಗಾವಿ-ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಭಂದಿಸಿದಂತೆ,ಕರ್ತವ್ಯಲೋಪದಡಿ ಖಾನಾಪುರ ಸಿಪಿಐಅಮಾನತುಗೋಳಿಸಿ ಆದೇಶ ಹೊರಬಿದ್ದಿದೆ.
ಖಾನಾಪುರ ಪೊಲೀಸ ಠಾಣೆಯ ಸಿಪಿಐ ಮಂಜುನಾಥ ನಾಯಕ ಅಮಾನತುಗೊಂಡಿದ್ದಾಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಸಿಟಿ ರವಿ ಖಾನಾಪುರ ಠಾಣೆಗೆ ಕರೆತಂದ ವೇಳೆ ಕರ್ತವ್ಯ ಲೋಪ, ನಿಷ್ಕಾಳಜಿತನ, ಬೇಜಬ್ದಾರಿತನ ಪ್ರದರ್ಶಿಸಿ,ಅಪಾಧಿತನರನ್ನ ಹೊರತುಪಡಿಸಿ ಠಾಣೆ ಒಳಗಡೆ ಯಾರನ್ನು ಬಿಡದಂತೆ ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ ಕಾರಣ ಖಾನಾಪೂರ ಸಿಪಿಐ ಅಮಾನತುಗೊಂಡಿದ್ದಾರೆ.
ಆದರೂ ಬಿಜೆಪಿ ನಾಯಕರನ್ನು, ಕಾರ್ಯಕರ್ತರನ್ನು ಠಾಣೆ ಒಳಗಡೆ ಬಿಟ್ಟು ಠಾಣೆಯಲ್ಲಿ ಬಿಜೆಪಿ ನಾಯಕರು ಮೀಟೀಂಗ್ ಮಾಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ,ಮೇಲಾಧಿಕಾರಿಗಳ ಆದೇಶ ಉಲ್ಲಂಘನೆ ಆರೋಪದಡಿ ಇನ್ಸ್ಪೆಕ್ಟರ್ ಅಮಾನತಗೊಂಡಿದ್ದಾರೆ.