Breaking News

ಕೃಷಿ ಪದವೀಧರ ಸಂಘ ಉದ್ಘಾಟಿಸಿದ ಗೃಹ ಸಚಿವ ಪರಮೇಶ್ವರ್

ಬೆಳಗಾವಿ-ನಾವು ಎಲ್ಲ ಕ್ಷೇತ್ರಗಳಿಗೂ ಹೊಂದಿಕೊಂಡು ಹೋಗಬೇಕು ರಾಜಕೀಯ ಕ್ಷೇತ್ರಕ್ಕೆ ಬರುವವರು ಬನ್ನಿ ನಾವು ಕೈಲಾದಮಟ್ಟಿಗೆ ಸಹಾಯ ಮಾಡುತ್ತೇವೆ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದರು.

ಬೆಳಗಾವಿಯಲ್ಲಿ ಕೃಷಿ ಪದವೀಧರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘ,ಸಂಸ್ಥೆಗಳು ಅಸ್ತಿತ್ವಕ್ಕೆ ಬಂದ ನಂತರ ಉಪಯುಕ್ತವಾದ ಕಾರ್ಯ ಮಾಡಬೇಕು,ಗ್ರಾಮೀಣ ಅಭಿವೃದ್ಧಿಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರ ಹೊಸ ಆವಿಷ್ಕಾರ ಮಾಡಿದೆ,ಅದನ್ನು ಬೆಳಗಾವಿಯ ಕೃಷಿ ಪದವಿಧರ ಸಂಘಕ್ಕೂ ಕಳಿಸುತ್ತೇನೆ ಅದನ್ನು ತಿಳಿದುಕೊಂಡು ಗ್ರಾಮಮಟ್ಟದಲ್ಲಿಯೂ ಸಂಘ ಕೈಜೋಡಿಸಿ ಕೆಲಸ ಮಾಡಬಹುದು ಎಂದು ಜಿ ಪರಮೇಶ್ವರ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಅವರ ವಾಕ್ ಚಾತುರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಪರಮೇಶ್ವರ ಚಿಕ್ಕ ವಯಸ್ಸಿನಲ್ಲಿ ಪ್ರೀಯಾಂಕಾ ಪ್ರಭುದ್ಧರಾಗಿದ್ದಾರೆ. ಸಂಸತ್ತಿನಲ್ಲಿ ನಿರ್ಭಯವಾಗಿ ಮಾತಾಡುತ್ತಾರೆ ಅವರಿಂದ ಈ ಭಾಗಕ್ಕೆ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ಅಗ್ರಿ ಗ್ರ್ಯಾಜ್ಯುವೇಟ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿರುವದು ಒಳ್ಳೆಯ ಸಂಗತಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಜನ ಕೃಷಿ ಕ್ಷೇತ್ರಕ್ಕೆ ಮರಳಿ ಬರುತ್ತಿದ್ದಾರೆ ದೇಶ ವಿದೇಶ ಸುತ್ತಾಡಿ ಸ್ವದೇಶಕ್ಕೆ ಸ್ವಗ್ರಾಮದಲ್ಲಿ ಕೃಷಿ ಮಾಡಿ ಲಕ್ಷಾಂತರ ರೂ ಲಾಭಗಳಿಸುತ್ತಿದ್ದಾರೆ. ಕೃಷಿ ಪದವೀಧರರು ಈಗ ಸಂಘಟಿತರಾಗಿದ್ದು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ಅಗ್ರಿ ಗ್ರ್ಯಾಜ್ಯುವೇಟ್ ಅಸೋಸಿಯೇಷನ್ ಸಂಘದ ಕಾರ್ಯಾಧ್ಯಕ್ಷ ರಾಜಾಸಲೀಂ ಕಾಶಿಮನವರ ಮಾತನಾಡಿ,ಕೃಷಿ ಪದವೀಧರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ,ಬೇರೆ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರೆಲ್ಲರನ್ನು ಒಂದೇ ವೇದಿಕೆಗೆ ತರಲು ಸಂಘವನ್ನು ಸ್ಥಾಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಕೃಷಿ ಪದವೀಧರರ ಕಲ್ಯಾಣಕ್ಕೆ ಶ್ರಮಿಸುವದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವಿನಯ ಕುಲಕರ್ಣಿ ಸಂಘದ ಗೌರವ ಅಧ್ಯಕ್ಷ ಬಾಬಾಸಾಹೇಬ್ ಪಾಟೀಲ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾಧವ್ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Check Also

ಟ್ರ್ಯಾಕ್ಟರ್ ಹರಿಸಿ, ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ

ಬೆಳಗಾವಿ-ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಪಾಪಿ ಅಣ್ಣಾ, ಹತ್ಯೆ ಮಾಡಿದ ಬಳಿಕ ಠಾಣೆಗೆ ಹಾಜರಾಗಿದ್ದಾನೆ.ಆಸ್ತಿವಿವಾದ, ಕುಡಿತದ ಚಟ, …

Leave a Reply

Your email address will not be published. Required fields are marked *