ಬೆಳಗಾವಿ – ಗಂಡನ ಕಿರಿಕಿರಿಯಿಂದ ಬೇಸತ್ತು ಗಂಡ ಮಲಗಿದ ಸಂಧರ್ಭದಲ್ಲಿ ಗಂಡನಿಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿ ಪತ್ನಿ ಗಂಡನ ಎರಡು ತುಂಡು ಮಾಡಿ, ತುಂಡುಗಳನ್ನು ಚಿಕ್ಕ ಬ್ಯಾರಲ್ ನಲ್ಲಿ ಸಾಗಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಉಮರಾಣಿಯಲ್ಲಿ ನಡೆದಿದೆ.
ಪತ್ನಿ ಸಾವಿತ್ರಿ ಇಟ್ನಾಳೆ ಗಂಡ ಶ್ರೀಮಂತ ಇಟ್ನಾಳೆಯ ಕೊಲೆ ಮಾಡಿ ಜೈಲು ಪಾಲಾಗಿದ್ದಾಳೆ.ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೇತ್ನಿಸಿದ ಪಾಪಿ ಗಂಡನ ಮೇಲೆ ಸಿಟ್ಟಿಗೆದ್ದ ಪತ್ನಿ ಸಾವಿತ್ರಿ,ಮಕ್ಕಳು ಮಲಗಿದ ಮೇಲೆ ಕಲ್ಲು ಎತ್ತಿ ಹಾಕಿ ಗಂಡನ ಕೊಲೆ ಮಾಡಿದ್ದಾಳೆ,ಗಂಡನ ಕೊಂದ ಬಳಿಕ ಮನೆಯಲ್ಲಿ ಶವ ಇದ್ರೇ ಅರೆಸ್ಟ್ ಮಾಡ್ತಾರೆ ಅಂತಾ ಕತರ್ನಾಕ್ ಐಡಿಯಾ ಮಾಡಿ,,ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಅಂತಾ ಗಂಡನ ದೇಹವನ್ನೇ ತುಂಡರಿಸಿ,ದೇಹವನ್ನ ಎರಡು ಭಾಗ ತುಂಡರಿಸಿ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ
ಬ್ಯಾರೆಲ್ ಉರುಳಿಸುತ್ತಾ ಶವ ಒಯ್ದು ಪಕ್ಕದ ಗದ್ದೆಗೆ ಹಾಕಿದ್ದಾಳೆ.
ತುಂಡು ಮಾಡಿದ ದೇಹವನ್ನು ಪಕ್ಕದ ಗದ್ದೆಗೆ ಬ್ಯಾರಲ್ ನಲ್ಲಿ ಸಾಗಿಸಿದ ಪತ್ನಿ ಸಾವಿತ್ರಿ ಕಟ್ ಮಾಡಿದ್ದ ಗಂಡನ ದೇಹವನ್ನ ಮತ್ತೆ ಹೊಲದ ಗದ್ದೆಯಲ್ಲಿ ಜೋಡಿಸಿದ್ದಾಳೆ.ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ತೊಳೆದು ಬಾವಿಗೆ ಎಸೆದಿದ್ದಾಳೆ,ಮತ್ತೆ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆ ಒಂದು ಚೀಲದಲ್ಲಿ ಪ್ಯಾಕ್.ಆ ಚೀಲವನ್ನ ಬಾವಿಗೆ ತೆಗೆದುಕೊಂಡು ಹೋಗಿ ಮೇಲೆ ಬರದಂತೆ ಕಲ್ಲು ಕಟ್ಟಿ ಎಸೆದಿದ್ದಾಳೆ.
ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿದ್ದ ಬಟ್ಟೆ ಸುಟ್ಟು ಹಾಕಿ.ಸುಟ್ಟಿದ್ದ ಬೂದಿಯನ್ನ ತಿಪ್ಪೆಗೆ ಎಸೆದಿದ್ದ ಪತ್ನಿ ಸಾವಿತ್ರಿ,ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್ ನಲ್ಲಿ ಬಚ್ಚಿಟ್ಟಿದ್ದಳು.ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು.ಗಂಡನ ಕೊಲೆ ಮಾಡುವ
ವೇಳೆ ನಿದ್ದೆಯಿಂದ ಎಚ್ಚರಗೊಂಡ ಮೊದಲ ಮಗಳಿಗೆ ಎಲ್ಲಿಯೂ ಹೇಳದಂತೆ, ತಾಕೀತು ಮಾಡಿದ್ದಾಳೆ,ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಮಾಡಿದ್ದ ಪತ್ನಿ ಕೊನೆಗೂ ಪೋಲೀಸರ ಬಲೆಗೆ ಬಿದ್ದಿದ್ದಾಳೆ.
ಜಮೀನಿನಲ್ಲಿ ಶವ ಸಿಗ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದ
ಚಿಕ್ಕೋಡಿ ಪೊಲೀಸರು ತನಿಖೆ ವೇಳೆ ಹೆಂಡತಿ ಮೇಲೆ ಅನುಮಾನ ಪಟ್ಟಿದ್ದಾರೆ.ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ತನ್ನಿಂದ ತಪ್ಪಾಗಿದೆ ಕ್ಷಮಿಸಿ ಅಂತಾ ಪತ್ನಿ ಸಾವಿತ್ರಿ ಪೋಲೀಸರ ಎದುರು ಕಣ್ಣೀರು ಹಾಕಿ ಗಂಡನ ಕರಾಳ ಕಹಾನಿಯನ್ನು ಪೋಲೀಸರಿಗೆ ಹೇಳಿದ್ದಾಳೆ.
ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸುವಂತೆ ಗಂಡ ಕಿರುಕುಳ ಕೊಡುತ್ತಿದ್ದ,,ಯಾರ ಜೊತೆಗೆ ಆದ್ರೂ ಮಲಗು ಹಣ ಕೊಡು ಅಂತಾ ಪೀಡಿಸುತ್ತಿದ್ದ,ಎಂದು ಸಾವಿತ್ರಿ ಹೇಳಿದ್ದಾಳೆ.15 ವರ್ಷದ ಹಿಂದೆ ಮದುವೆಯಾಗಿದ್ದ ಸಾವಿತ್ರಿ ಮತ್ತು ಶ್ರೀಮಂತ.,ಮಗಳ ಮೇಲೆ ಎರಗಲೇತ್ನಿಸಿದ್ದನ್ನ ನೋಡಿ ಸಹಿಸಿಕೊಳ್ಳದೇ ಕೊಲೆ ಮಾಡಿದ್ದಾಗಿ ಪತ್ನಿ ಒಪ್ಪಿಕೊಂಡಿದ್ದಾಳೆ