ಬೆಳಗಾವಿ-ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ,ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.ಸಿಎಂ ಮನೆಗೆ ಬಂದಿದ್ದು ಹೊಸದೇನೂ ಅಲ್ಲಾ,ಸುಮಾರು ಬಾರಿ ನಮ್ಮ ಮನೆಗೆ ಬಂದಿದ್ದಾರೆ.ನಾವು ಬೇರೆ ಬೇರೆ ಕಡೆ ಹೋಗಿದ್ದೇವೆ ಇದರಲ್ಲಿ ಎನೂ ಹೊಸದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹೊಸ ವರ್ಷ, ಬಹಳಷ್ಟು ಜನರು ಎಲ್ಲರೂ ಸೇರಬೇಕು ಅಂತಾ ಸೇರಿದ್ದೇವೆ,ಅಧ್ಯಕ್ಷರನ್ನ, ಸಿಎಂ ಅವರನ್ನ ಯಾರು ಚೇಂಜ್ ಮಾಡ್ತಾರೆ ನಮಗೆ ಗೊತ್ತಿಲ್ಲ,ರಾಜಕೀಯ ಬಗ್ಗೆ, ಸಂಘಟನೆ ಬಗ್ಗೆ ಸ್ವಾಭಾವಿಕವಾಗಿ ಚರ್ಚೆ ಆಗುತ್ತೆ,ಸಿಎಂ ಬದಲಾವಣೆ ಕುರಿತು ನಮಗೆ ಮಾಹಿತಿ ಇಲ್ಲಾ ಅಂತಾ ಹೇಳಿದ್ದೇವೆ.
ಮುಂದಿನ ಬಾರಿ ಮತ್ತೆ ನಮ್ಮ ಸರ್ಕಾರ ಬರಬೇಕು ಅಂತಾ ಚರ್ಚೆ ಮಾಡಿದ್ದೇವೆ.ಒಂದೇ ಹುದ್ದೆ ಇರಬೇಕು ಅಂತೇನಿಲ್ಲ ಅವರಿಗೆ ಸಾಮರ್ಥ್ಯ ಇದ್ರೇ ಕೊಡಬಹುದು,ಈಗಾಗಲೇ ಡಿಕೆ ಶಿವಕುಮಾರ್ ಇದಾರೆ ಬೇರೆ ಬೇರೆ ರಾಜ್ಯದಲ್ಲಿ ಈ ರೀತಿ ಇವೆ.ಈಗ ಒಬ್ಬರಿಗೆ ಒಂದೇ ಹುದ್ದೆ ಅಂತಾ ಮಾಡಿದ್ದಾರೆ.ಬದಲಾವಣೆ ಏನೂ ಇಲ್ಲ ಇರೋದನ್ನ ಸರಿ ಮಾಡಬೇಕು ಅಂತಿದೆ ಎಂದರು
ನಮ್ಮ ಹಂತದಲ್ಲಿ ಎನಿಲ್ಲ ಪಕ್ಷದ ನಿರ್ಧಾರವೇ ಅಂತಿಮ,ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಬಂದಿಲ್ಲ.
ನಮ್ಮನ್ನ ಹೈಕಮಾಂಡ್ ಕರೆದಾಗೂ ಚರ್ಚೆ ಮಾಡಬೇಕು ಆಗುತ್ತೆ.ಚರ್ಚೆ ಮಾಡಿ ನಿರ್ಧಾರ ಮಾಡಬೇಕಾಗುತ್ತೆ.
ಈಗ ಸದ್ಯ ಡಿಕೆ ಶಿವಕುಮಾರ್ ಅಧ್ಯಕ್ಷ ಇದಾರೆ.ಈಗ ಅಧ್ಯಕ್ಷ ಇದ್ದಾಗ ನಾವು ಆಗ್ತೇವಿ ಅಂತಾ ಹೇಳುವುದು ತಪ್ಪಾಗುತ್ತೆ.ಬದಲಾವಣೆ ವಿಚಾರ ಅಧ್ಯಕ್ಷರು, ಸಿಎಂ ಹೈಕಮಾಂಡ್ ಬಳಿ ಪ್ರಸ್ತಾಪ ಮಾಡಬೇಕು ಅವರ ಜವಾಬ್ದಾರಿ.ಇದ್ದವರು ತೀರ್ಮಾನ ಮಾಡಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅಹಿಂದ ನಾಯಕರು ಅಂತೇನಿಲ್ಲ ನಿನ್ನೆ ಕ್ಯಾಬಿನೆಟ್ ಬಳಿಕ ಸಡನ್ ಆಗಿ ಮೀಟಿಂಗ್ ಫಿಕ್ಸ್ ಆಯ್ತು ಕೆಲವರು ವಿದೇಶಿ ಟೂರ್ ಗೆ ಹೋಗಿದ್ದಾರೆ ಬರಲು ಆಗಿಲ್ಲ.ಈ ರೀತಿ ಏಳೆಂಟು ಬಾರಿ ಊಟಕ್ಕೆ ಸೇರಿದ್ದೇವು,ಇದರಲ್ಲಿ ಹೊಸದೇನು ಇಲ್ಲ, ಸಂಪುಟ ಪುನರ್ ರಚನೆ ವಿಚಾರ.ಕೆಲವರು ಮುಂದೆ ಹೋಗಲಿ ಅಂತಾ ಹೇಳ್ತಿದ್ದಾರೆ.
ಕೆಲವರು ಹೊಸದಾಗಿ ಕೊಡಬೇಕು, ಹಿರಿಯರಿಗೆ ಅವಕಾಶ ನೀಡಿ ಅಂತಿದ್ದಾರೆ.ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಅಂತಿಮವಾಗಿ ಸಿಎಂ, ಅಧ್ಯಕ್ಷರು ತೀರ್ಮಾನ ಮಾಡ್ತಾರೆ.ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ.
ಬಿಜೆಪಿಯವರು ಪ್ರತಿಭಟನೆ ಮಾಡಲಿ ಬೇಡ ಅಂದವರಾರು.ಡೆತ್ ನೋಟ್ ನಲ್ಲಿ ಖರ್ಗೆ ಅವರ ಹೆಸರು ಬರೆದಿಲ್ಲ.ಅವರ ಆಪ್ತ ಹೆಸರು ಇರೋದು ಇದೆ.
ಆಪ್ತರು ಮಾಡಿದ್ದಕ್ಕೆ ಸಚಿವರು ರಾಜೀನಾಮೆ ಕೊಡುವುದು ಹೇಗೆ ಸಾಧ್ಯ ಎಂದು ಸತೀಶ್ ಪ್ರಶ್ನಿಸಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ