ಬೆಳಗಾವಿ-ಸಾಹುಕಾರ್ ಅತ್ಯಾಪ್ತೆಗೂ ಬೆಳಗಾಗುವಷ್ಟರಲ್ಲಿ ದಿಢೀರ್ ಸಾಹುಕಾರ್ತಿ ಆಗಬೇಕೆಂಬ ಕನಸು,ಕೋಟ್ಯಾಧಿಪತಿ ಆಗಬೇಕೆಂಬ ಕನಸು ಕಂಡಿದ್ದ ಸಾಹುಕಾರ್ ಆಪ್ತೆ ಮಂಜುಳಾ ಹಿಂಡಲಗಾ ಜೈಲುಪಾಲಾದ ಘಟನೆ ನಡೆದಿದೆ
ರಿಯಲ್ ಎಸ್ಟೇಟ್ ಉದ್ಯಮಿ ಅಪಹರಿಸಿ ಐದು ಕೋಟಿಗೆ ಸಾಹುಕಾರ್ ಆಪ್ತೆಯ ಟೀಂ ಡಿಮ್ಯಾಂಡ್ ಮಾಡಿತ್ತು,
ಬೆಳಗಾವಿ ಉದ್ಯಮಿ ಬಸವರಾಜ್ ಅಂಬಿ ಅಪಹರಣ ಮಾಡಿ ಐದು ಕೋಟಿ ಡಿಮ್ಯಾಂಡ್ ಮಾಡಿದ್ದ ಕೇಸ್ ಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಅಪಹರಣ ಕೇಸ್‌ನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆಯ ಹೆಸರು ತಳಕು ಹಾಕಲಾಗಿದೆ.
ಅಪಹರಣ ಪ್ರಕರಣದ ಕಿಂಗ್‌ಪಿನ್ ಮಂಜುಳಾ ರಾಮನಗಟ್ಟಿ ಎಂದು ಗೊತ್ತಾಗಿದೆ ಹೀಗಾಗಿ ಮುಲಾಜಿಲ್ಲದೇ ಮಂಜುಳಾ ಬಂಧಿಸಿರುವ ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದ ನಿವಾಸಿ ಆಗಿರುವ ಮಂಜುಳಾ ರಾಮನಗಟ್ಟಿ.ಘಟನೆ ಬಳಿಕ ನಾಪತ್ತೆ ಆಗಿದ್ದಳು ಕಲಬುರಗಿಯಲ್ಲಿ ತಲೆಮರೆಸಿಕೊಂಡಿದ್ದ ಮಂಜುಳಾ ರಾಮನಗಟ್ಟಿಯನ್ನುಘಟಪ್ರಭಾ ಪೊಲೀಸರು ಪತ್ತೆ ಮಾಡಿದ್ದಾರೆ. ಮಂಜುಳಾ ರಾಮನಗಟ್ಟಿ ಸೇರಿ ಮತ್ತೆ ಮೂವರನ್ನು ಬಂಧಿಸಲಾಗಿದೆ.
ಜಮಖಂಡಿಯ ಪರುಶರಾಮ ಕಾಂಬಳೆ,
ಯಮಕನಮರಡಿಯ ಯಲ್ಲೇಶ ವಾಲೀಕರ ಬಂಧಿತರಾಗಿದ್ದುಉದ್ಯಮಿ ಬಸವರಾಜ್ ಅಂಬಿ ಅಪಹರಣ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆ ಆಗಿದೆ.ಗೋಕಾಕ ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಬ್ಲ್ಯಾಕ್ ಅಧ್ಯಕ್ಷೆ ಆಗಿದ್ದ ಮಂಜುಳಾ.
ಸಚಿವ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಳು ಮಂಜುಳಾ ರಾಮನಗಟ್ಟಿ.
ಪುತ್ರ ಈಶ್ವರ ರಾಮನಗಟ್ಟಿ ಮೂಲಕ ಉದ್ಯಮಿ ಅಪಹರಿಸಿದ್ದ ಮಂಜುಳಾ ರಾಮನಗಟ್ಟಿ ಈಗ ಜೈಲುಪಾಲಾಗಿದ್ದಾಳೆ.ಫೆ. 20 ರಂದು ದಂಡಾಪುರ ಕ್ರಾಸ್ ಬಳಿ ಸಿನಿಮೀಯ ರೀತಿಯಲ್ಲಿ ಬಸವರಾಜ್ ಅಂಬಿ ಅಪಹರಣ ಮಾಡಲಾಗಿತ್ತು,
ಬಳಿಕ ಐದು ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ ಮಂಜುಳಾ ಆ್ಯಂಡ್ ಟೀಂ ಫೋಲೀಸರ ಬಲೆಗೆ ಬಿದ್ದಿದೆ.
ಎಲ್ಲ ಏಳೂ ಆರೋಪಿಗಳನ್ನು ಹೆಡಮುರಿ ಕಟ್ಟಿದ ಘಟಪ್ರಭಾ ಠಾಣೆ ಪೊಲೀಸರು ಕಿಡ್ನ್ಯಾಪ್ ಪ್ರಕರಣಕ್ಕೆ ವಿರಾಮ ನೀಡಿದ್ದಾರೆ.