ಬೆಳಗಾವಿ – ಮಾಜಿ ಸಚಿವ ಹಾಲಿ ವಿಧಾನಪರಿಷತ್ತ್ ಸದಸ್ಯ ಸಿಟಿ ರವಿ ಇಂದು ಸಂಜೆ ಸವದತ್ತಿ ಯಲ್ಲಮ್ಮದೇವಿಯ ದರ್ಶನ ಪಡೆದು ನಾಳೆ ಬೆಳಗಾವಿ ದರ್ಶನ ಮಾಡಲಿದ್ದಾರೆ.
ಇಂದು ಹುಬ್ಬಳ್ಳಿಗೆ ಆಗಮಿಸಿರುವ ಸಿಟಿ ರವಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಜೊತೆ ಸವದತ್ತಿಗೆ ತೆರಳಿ ದೇವಿಯ ದರ್ಶನ ಪಡೆದು ರಾತ್ರಿ ಬೆಳಗಾವಿಗೆ ಆಗಮಿಸಲಿದ್ದಾರೆ. ರಾತ್ರಿ ಜೊಲ್ಲೆ ಒಡೆತನದ ವೆಲ್ ಕಮ್ ಹೊಟೇಲ್ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ನಾಳೆ ಬೆಳಗ್ಗೆ ಕಪಿಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ನಂತರ ವೆಲ್ ಕಮ್ ಹೊಟೇಲ್ ನಲ್ಲಿ ಚಿಂತಕರ ಜೊತೆ ಸಂವಾದ ಕಾರ್ಯಕ್ರಮ ಮಾಡಿ ನಂತರ ಖಾನಾಪೂರ ತಾಲ್ಲೂಕಿನ ನಂದಗಡ ಗ್ರಾಮಕ್ಕೆ ತೆರಳಿ ಕ್ರಾಂತವೀರ ಸಂಗೊಳ್ಳಿ ರಾಯಣ್ಣನ ಸಮಾಧಿಗೆ ಪುಷ್ಪಗೌರವ ಸಮರ್ಪಿಸಿ ನಂತರ ಚನ್ನಮ್ಮಾಜಿಯ ಕಿತ್ತೂರಿಗೆ ತೆರಳಿ ವೀರಮಾತೆಗೆ ಗೌರವ ಸಮರ್ಪಿಸಲಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂಧರ್ಭದಲ್ಲಿ ನಡೆದ ಘಟನೆಯ ಬಳಿಕ ಸಿಟಿ ರವಿ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸುತ್ತಿದ್ದಾರೆ.