ಬೆಳಗಾವಿ-ಎತ್ತಿನಬಂಡಿ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಯುವಕ ಇಂದು ಸಾವನ್ನೊಪ್ಪಿದ್ದಾನೆ.ಬೆಳಗಾವಿ ತಾಲೂಕಿನ ಬಸವನ ಕುಡಚಿ ಗ್ರಾಮದ ಜಾತ್ರೆಯಲ್ಲಿ ಈ ಘಟನೆ ಸಂಭವಿಸಿದೆ.
ಅಪ್ಪಣ್ಣ ಪಾರೀಶ ಪಾಟೀಲ್ ( 27) ಮೃತ ಯುವಕನಾಗಿದ್ದಾನೆ.ಬಸವನ ಕುಡಚಿ ಗ್ರಾಮದ ಜಾತ್ರೆ ನಿಮಿತ್ತ ಎತ್ತಿನಬಂಡೆ ಸ್ಪರ್ಧೆಯನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದರು,ಈ ವೇಳೆ ಓಡುತ್ತಿದ್ದ ಎತ್ತಿನಬಂಡಿ ಚಕ್ರದಡಿ ಸಿಲುಕಿದ್ದ ಅಪ್ಪಣ್ಣ ಗಂಭೀರವಾಗಿ ಗಾಯಗೊಂಡಿದ್ದ,ಗಾಯಗೊಂಡಿದ್ದ ಅಪ್ಪಣ್ಣನನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಫಲಿಸದೇ ಇಂದು ಖಾಸಗಿ ಆಸ್ಪತ್ರೆಯಲ್ಲಿ ಅಪ್ಪಣ್ಣ ಮೃತಪಟ್ಟಿದ್ದಾನೆ.
ಮಾಳಮಾರುತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.