ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನಿರಂತರವಾಗಿ ಕಾಲು ಕೆದರಿ ಜಗಳ ತೆಗೆಯುವ ಉದ್ಧವ ಠಾಕ್ರೆ ನೇತ್ರತ್ವದ ಶಿವಸೇನೆ,ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪ್ರಸ್ತಾಪಿಸಿ ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಹೇಳುವ ಮೂಲಕ ಮತ್ತೆ ಕ್ಯಾತೆ ತೆಗೆದಿದೆ.
ಬೆಳಗಾವಿ ಸೇರಿ ಗಡಿ ವಿವಾದ ಇರೋ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಆಗಬೇಕು ಎಂದು ಹೇಳಿ,ಲೋಕಸಭೆಯಲ್ಲಿ,ಗಡಿ ವಿವಾದ ಕೆದಕಿದ ಮಹಾರಾಷ್ಟ್ರ ಉದ್ಧವ ಠಾಕ್ರೆ ಬಣದ ಶಿವಸೇನೆ ಸಂಸದ ಪುಂಡಾಟಿಕೆ ಪ್ರದರ್ಶಿಸಿದ್ದಾರೆ.
ಉದ್ಧವ ಠಾಕ್ರೆ ಬಣದ ಶಿವಸೇನೆ ಸಂಸದ ಅರವಿಂದ ಸಾವಂತ ಲೋಕಸಭೆಯಲ್ಲಿ ಉದ್ಧಟತನ ಹೇಳಿಕೆ ನೀಡಿದ್ದಾರೆ.ಲೋಕಸಭೆಯಲ್ಲೂ ಶಿವಸೇನೆ ಬಾಲಬಿಚ್ಚಿದ್ದರೂ ಕರ್ನಾಟಕದ ಸಂಸದರು ಗಪ್ ಚುಪ್ ಆಗಿದ್ದು ದುರ್ದೈವದ ಸಂಗತಿಯಾಗಿದೆ.ಶಿವಸೇನೆ ಸಂಸದ ಸಾವಂತ ಉದ್ಧಟತನದ ಹೇಳಿಕೆ ನೀಡುವ ವೇಳೆ ರಾಜ್ಯದ ಸಂಸದರು,ಹಾಗೂ ಕೇಂದ್ರ ಸಚಿವರು ತುಟಿ ಬಿಚ್ಚಲಿಲ್ಲ.
ಮಹಾರಾಷ್ಟ್ರ ರಾಜ್ಯದ ನಿರ್ಮಾಣ ಮೇ 1 1960 ರಲ್ಲಿ ಆಗಿದೆ.ಆಗಿನಿಂದಲೂ ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿ,ಬೀದರನ ಬಹು ಭಾಷಿಕ ಮರಾಠಿ ಭಾಷಿಕರು ಮಹಾರಾಷ್ಟ್ರ ಸೇರ್ಪಡೆ ಗೆ ಹೋರಾಟ ಮಾಡ್ತಿದ್ದಾರೆ.ಈಗಲೂ ಮಹಾರಾಷ್ಟ್ರ ಸೇರಿಸುವಂತೆ ಹೋರಾಟ ಜೀವಂತವಿದೆ.ಆದ್ರು ಅಲ್ಲಿನ ಮರಾಠಿ ಭಾಷಿಕರ ಮೇಲೆ ಅನ್ಯಾಯ ಆಗುತ್ತಿದೆ.ಬಾಳಾಸಾಹೇಬ್ ಠಾಕ್ರೆ ದಿವಂಗತರಾದ್ರು ಗಡಿ ವಿವಾದ ಇತ್ಯರ್ಥವಾಗಿಲ್ಲ.ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ರಾಜ್ಯದ ಮುಖ್ಯಮಂತ್ರಿಗಳನ್ನ ಆಹ್ವಾನಿಸಿದ್ರು,ಆಗ ಕರ್ನಾಟಕ ಮುಖ್ಯಮಂತ್ರಿ ಬರಲಿಲ್ಲ,2004 ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಹೋದ್ರು ನ್ಯಾಯ ಸಿಕ್ಕಿಲ್ಲ,ಬೆಳಗಾವಿಯಲ್ಲಿ ಇರೋ ಮರಾಠಿ ಭಾಷಿಕರ ಪರ ಹೋರಾಟ ಮಾಡುವವರನ್ನ ಗಡಿ ಪಾರು ಮಾಡಲಾಗುತ್ತಿದೆ. ಎಂಇಎಸ ಮುಖಂಡ ಶುಭಂ ಶಳಕೆಯನ್ನ ಗಡಿ ಪಾರು ಮಾಡಲಾಗಿದೆ.ಹೀಗಾಗಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹಾಕುವಂತೆ ಶಿವಸೇನೆ ಸಂಸದ ಸಾವಂತ ಸುಳ್ಳು ಹೇಳಿಕೆ ನೀಡುವಾಗ ಕರ್ನಾಟಕದ ಸಂಸದರು ಅದಕ್ಕೆ ಪ್ರತ್ಯುತ್ತರ ಕೊಡಲಿಲ್ಲ
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಬಾಲ್ಕಿಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿವಸೇನೆ ಲೋಕಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಮತ್ತೆ ಕ್ಯಾತೆ ತೆಗೆದಿದೆ.