ಬೆಳಗಾವಿ -ಕುಡಿದ ಮತ್ತಿನಲ್ಲಿ ಮೂರು ಮಕ್ಕಳ ತಾಯಿ ಬರ್ಬರ ಹತ್ಯೆ ಮಾಡಿದ ಘಟನೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿ ನಡೆದಿದ್ದು, ಚಿಕಿತ್ಸೆ ಫಲಿಸದೆ ಸುಜಾತಾ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾಳೆ.
ಉಂಡು ಮಲಗಿದ ಮೇಲೆ ಮನೆ ಬಾಗಿಲು ಬಡಿದು ಮಲಗಲು ಅಕ್ಕನ ತಂಗಿಯನ್ನು ಕರೆದಿದ್ದ ಈರಯ್ಯಗೆ ನಿರಾಕರಿಸಿದ್ದಕ್ಕೆ ಚಾಕು ಇರಿದಿದ್ದಾನೆ. ಅಕ್ಕ ತಂಗಿ ಇಬ್ಬರನ್ನ ಒಂದೇ ಊರಿನ ಅಕ್ಕಪಕ್ಕದ ಮನೆಯವರಿಗೆ ಮದುವೆ ಮಾಡಿಕೊಟ್ಟಿದ್ದ ಪೋಷಕರು. ಅಕ್ಕ ಸುಜಾತಾ ಮಂಜುನಾಥ ಚತ್ರಕೋಟಿ(24) ಕೊಲೆಯಾದ ದುರ್ದೈವಿಯಾಗಿದ್ದಾಳೆ.
ತಂಗಿ ಗಂಡ ಬಂಗಾರಪ್ಪ ಈರಯ್ಯನ್ನವರ ಕೊಲೆ ಮಾಡಿದ ಆರೋಪಿ. ಖನಗಾಂವ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸವಿದ್ದ ಸುಜಾತಾ ಮತ್ತು ರುಕ್ಮವ್ವಾ ಸಹೋದರಿಯರು. ನಿನ್ನೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಸುಜಾತಾ ಮನೆಗೆ ಹೋಗಿದ್ದ ಬಂಗಾರಪ್ಪ. ಒತ್ತಾಯವಾಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಈ ವೇಳೆ ಆಕೆ ಒಪ್ಪದಿದ್ದಾಗ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಮಾಡಿದ್ದಾನೆ. ತಕ್ಷಣವೇ ಗಂಭೀರ ಗಾಯಗೊಂಡ ಸುಜಾತಾಳನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಸುಜತಾ ಮೃತಪಟ್ಟಿದ್ದು ಬೆಳಗಾವಿ ಬಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಕಣ್ಣೀರು ಹಾಕುತ್ತಿದ್ದಾರೆ. ಚೂರಿ ಚುಚ್ಚಿದ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿದ ನಶೆಯಲ್ಲಿ ನನ್ನ ಎರಡನೇ ಮಗಳಿಗೆ ಬಂಗಾರಪ್ಪ ಜಂಬೆಯಿಂದ ಚುಚ್ವಿ ಕೊಲೆ ಮಾಡಿದ್ದಾನೆ ಎಂದು ಕೊಲೆಯಾದ ಸುಜಾತಾ ತಾಯಿ ಮಲ್ಲವ್ವ ಹೇಳಿದರು.
ಭಾನುವಾರ ಬೆಳಗಾವಿಯ ಜಿಲ್ಲಾಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗೋಕಾಕ ತಾಲೂಕಿನ ಮಾಡಮನಗೇರೆ ಗ್ರಾಮದ ಅಕ್ಕಪಕ್ಕದ ಮನೆಗೆ ನನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದೆ. ಕುಡಿದ ನಶೆಯಲ್ಲಿ ಎರಡನೇ ಮಗಳಿಗೆ ಬಂಗಾರಪ್ಪ ಕೊಲೆ ಮಾಡಿದ್ದಾನೆ ಎಂದರು.