ಬೆಳಗಾವಿ – ಐಪಿಎಲ್ ಟೂರ್ನಮೆಂಟ್ ನಲ್ಲಿ ಭರ್ಜರಿ ಬೆಟ್ಟಿಂಗ್ ದಂಧೆ,ನಡೆಸಿದ್ದ ಜಾಲವನ್ನು ಬೆಳಗಾವಿ ಮಹಾನಗರದ ಸೈಬರ್ ಕ್ರೈಮ್ (CEN) ಪೋಲೀಸರು ಪತ್ತೆ ಮಾಡಿದ್ದು ಬೆಟ್ಟಿಂಗ್ ದಂಧೆಯ ಮುಖ್ಯ ರೂವಾರಿಯನ್ನು ಅರೆಸ್ಟ್ ಮಾಡಿದ್ದಾರೆ.
ಐಪಿಎಲ್ ಮ್ಯಾಚಗಳಲ್ಲಿ ಲಕ್ಷಾಂತರ ರೂ ಗಳ ಬೆಟ್ಟಿಂಗ್ ವ್ಯವಹಾರ ನಡೆಸಿದ್ದ ಅಡ್ಡೆಯ ಮೇಲೆ ಸಿಇಎನ್ ಪೋಲೀಸರು ಸಿಪಿಐ ಗಡ್ಡೇಕರ್ ನೇತ್ರತ್ವದಲ್ಲಿ ದಾಳಿ ಮಾಡಿದ್ದು ಬೆಟ್ಟಿಂಗ್ ಬಾಸ್ ಉದ್ದವ ಜಯರಾಮದಾಸ್ ರೋಚಲಾನಿ( 61) ಎಂಬಾತನನ್ನು ಅರೆಸ್ಟ್ ಮಾಡಲಾಗಿದ್ದು ಕರಣ್ ರೋಚಲಾನಿ ಎಂಬಾತ ಪರಾರಿಯಾಗಿದ್ದಾನೆ.
ಬಂಧಿತ ಉದ್ದವ ಜಯರಾಮದಾಸ ರೋಚಲಾನಿ ಬೆಟ್ಟಿಂಗ್ ದಂಧೆಯ ಮುಖ್ಯ ರೂವಾರಿಯಾಗಿದ್ದು ಈತನು ದಂಧೆಗೆ ಬಳಿಸುತ್ತಿದ್ದ 12 ಮೋಬೈಲ್, ಬೇಸಿಕ್ ಹ್ಯಾಂಡಸೆಟ್ 13 ಹಾಟ್ ಲೈನ್ ವಿಡಿಯೋ ಮಿಕ್ಸರ್ 1, ಸ್ಮಾರ್ಟ್ ಟಿವ್ಹಿ 1 ಹಾಗು ಎರಡು ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಜಾಲ ಪತ್ತೆಯಾದ ಬಳಿಕ ಇವರ ನೆಟವರ್ಕ್ ಮತ್ತು ಮರಿ ಬುಕ್ಕಿಗಳ ಜಾಲವನ್ನು ಪೋಲೀಸರು ಜಾಲಾಡುತ್ತಿದ್ದು ಕ್ರಿಕೆಟ್ ಬೆಟ್ಟಿಂಗ್ ಮರಿ ಬುಕ್ಕಿಗಳಿಗೆ ಈಗ ಢವ,ಢವ ಶುರುವಾಗಿದೆ.