Breaking News

20 ವರ್ಷದ ನಂತರ ಆರೋಪಿಯನ್ನು ಪತ್ತೆ ಮಾಡಿದ ಪೋಲೀಸರು.

ಬೆಳಗಾವಿ : ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ 20 ವರ್ಷಗಳ ಹಿಂದೆ ಸಿಲಿಂಡರ್ ಕಳ್ಳತನ ಮಾಡಿದ್ದ ಆರೋಪಿ ರಾಜು ಪ್ರತಾಪರಾವ್ ಚಂದವಾನಿ (65) ( ಸಾ : ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ) ಈತನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೋಗಿ ಮರಳಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 2005 ರಿಂದ ತಲೆಮರೆಸಿಕೊಂಡಿದ್ದ.

ಆರೋಪಿತನ ಪತ್ತೆಗಾಗಿ ಬೆಳಗಾವಿ ಎಸ್ ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಂತೆ ಗೋಕಾಕ ಡಿಎಸ್.ಪಿ ಡಿ.ಹೆಚ್.ಮುಲ್ಲಾ ಹಾಗೂ ಸಂಕೇಶ್ವರ ಸಿಪಿಐ ಎಸ್.ಎಂ.ಅವಜಿ ಅವರ ನೇತ್ರತ್ವದಲ್ಲಿ ಠಾಣೆಯ ಸಿಬ್ಬಂದಿರವರಾದ ಎಸ್.ಆರ್.ಬೇವಿನಕಟ್ಟಿ ಮತ್ತು ಯು.ಎಂ. ಕಾಂಬಳೆ ಅವರಿಗೆ ನೇಮಕ ಮಾಡಲಾಗಿತ್ತು. ಇವರ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ತಲೆ ಮರೆಸಿಕೊಂಡಿದ್ದ ಆರೋಪಿತನಿಗೆ 01-05-2025 ರಂದು ಕೊಲ್ಲಾಪುರದ ನ್ಯೂ ಶಾಹುಪುರಿಯಲ್ಲಿ ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದಿದ್ದು, ನಂತರ ಆರೋಪಿತನಿಗೆ ಮಾನ್ಯ ಸಂಕೇಶ್ವರ ಜೆ ಎಂ ಎಫ್ ಸಿ ನ್ಯಾಯಾಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪತ್ತೆ ಕಾರ್ಯ ಕೈಗೊಂಡ ಅಧಿಕಾರಿ ಸಿಬ್ಬಂದಿಯವರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕ್ಷಕ ಭೀಮಾಶಂಕರ್ ಗುಳೇದ ಅವರು ಶ್ಲಾಘಿಸಿ ಪ್ರಶಂಶೆ ವ್ಯಕ್ತಪಡಿಸಿರುತ್ತಾರೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *