ಬೆಳಗಾವಿ- ಮರಕ್ಕೆ ಸೀಲೀಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ್ದೇವೆ.ಕೇಳಿದ್ದೇವೆ.ಆದ್ರೆ ಪ್ರೇಮಿಗಳ ಜೋಡಿ ಅಟೋದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ನಂಬಲು ಆಗುತ್ತಿಲ್ಲ.
ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾನು ಓಡಿಸುತ್ತಿದ್ದ ಆಟೋದಲ್ಲೇ ಪ್ರಿಯತಮೆ ಜೊತೆ ಸೇರಿ ಆತ್ಮಹತ್ಯೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ.
ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್(28), ರಂಜೀತಾ ಚೋಬರಿ(26) ಆತ್ಮಹತ್ಯೆ ಮಾಡಿಕೊಂಡಿದ್ದು,ರಾಘವೇಂದ್ರ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ನಿವಾಸಿಯಾಗಿದ್ದಾನೆ.
ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ರಾಘವೇಂದ್ರ ಮತ್ತು, ರಂಜೀತಾ.
ಹದಿನೈದು ದಿನದ ಹಿಂದೆ ರಂಜೀತಾ ನಿಶ್ಚಿತಾರ್ಥವಾಗಿತ್ತು.
ಮನೆಯಲ್ಲಿ ಮದುವೆ ಒಪ್ಪದೇ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಿಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು.
ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ