ಬೆಳಗಾವಿ-ಚಿಕನ್ ಪೀಸ್ ಬಡಿಸುವುದರಲ್ಲಿ ತಾರತಮ್ಯ ಮಾಡಿದಕ್ಕೆ ಸ್ನೇಹಿತರ ಮಧ್ಯೆ ಜಗಳ ವಿಕೋಪಕ್ಕೆ ಹೋಗಿ,ಸಿಟ್ಟಿನಿಂದ ಯುವಕನ ಹೊಟ್ಟೆಗೆ ಚೂರಿ ಇರಿದು ಹತ್ಯೆಗೈದ ಘಟನೆ,ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಸ್ನೇಹಿತನ ಮದುವೆ ಪಾರ್ಟಿ ನಡೆದಿತ್ತು ಚಿಕನ್ ಪೀಸ್ ಹಂಚಿಕೆ ಮಾಡುವಾಗ ಹೆಚ್ಚುಕಮ್ಮಿಯಾಗಿದೆ ಇದಕ್ಕಾಗಿ ಸ್ನೇಹಿತರ ನಡುವೆ ಜಗಳ ಆಗಿದೆ ಈ ಜಗಳದಲ್ಲಿ,ವಿನೋಧ ಮಲಶೆಟ್ಟಿ (30) ಕೊಲೆಯಾಗಿದೆ.
ಕೆಲ ದಿನಗಳ ಹಿಂದೆ ಮದುವೆ ಆಗಿದ್ದ ಅಭಿಷೇಕ ಕೊಪ್ಪದ.ತನ್ನ ಜಮೀನಿನಲ್ಲಿ ಸ್ನೇಹಿತರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದ,ಸ್ನೇಹಿತರಿಗೆ ಚಿಕನ್ ಪೀಸ್ ಬಡಿಸುತ್ತಿದ್ದ ಯರಗಟ್ಟಿ ಪಟ್ಟಣದ ನಿವಾಸಿ ವಿಠ್ಠಲ ಹಾರೂಗೊಪ್ಪ.
ಪೀಸ್ ಕಡಿಮೆ ಹಾಕಿದಕ್ಕೆ ವಿಠ್ಠಲ ಮತ್ತು ವಿನೋದ ಮಧ್ಯೆ ಜಗಳ ವಿಕೋಪಕ್ಕೆ ಹೋಗಿತ್ತು
ವಿನೋದ ಮಲಶೆಟ್ಟಿ ಹೊಟ್ಟೆಗೆ ವಿಠ್ಠಲ ಹಾರೂಗೊಪ್ಪ ಚಾಕುವಿನಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತನಾದ ವಿನೋಧ ಮಲಶೆಟ್ಟಿ .
ಘಟನಾ ಸ್ಥಳಕ್ಕೆ ಮುರಗೋಡ ಠಾಣೆ ಪೊಲೀಸರ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಆರೋಪಿ ವಿಠ್ಠಲ ಹಾರೂಗೊಪ್ಪನನ್ನು ವಶಕ್ಕೆ ಪಡೆದ ಮುರಗೋಡ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.