ಬೆಳಗಾವಿ- ಖಾನಾವಳಿಯಲ್ಲಿ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಬೆಳಗಾವಿಯ ಲಕ್ಷ್ಮೀ ಕಾಂಪ್ಲೆಕ್ಸ್ ಹತ್ತಿರ ಒಂಟಿ ಮಹಿಳೆ ಬರ್ಬರ ಹತ್ಯೆ ನಡೆದಿದೆ.
ತಡರಾತ್ರಿ ಕೊಲೆಯಾದ
ಮಹಿಳೆ, ಮಹಾದೇವಿ ಕಾರೆಣ್ಣವರ್ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಬಿಮ್ಸ್ ಶವಾಗರದ ಮುಂದೆ ಕುಟುಂಬಸ್ಥರ ಕಣ್ಣೀರು ಹಾಕಿದ್ದಾರೆ.ಹಣಕಾಸಿನ ವಿಚಾರದಲ್ಲಿ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ.ಸಾಗರ್ ಜಾಧವ್ ಎಂಬಾತನಿಗೆ 30ಸಾವಿರ ಹಣ ನೀಡಿದ್ದ ಮಹಾದೇವಿ, ಹಣ ವಾಪಾಸ್ ಕೇಳಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ ಮಹಾದೇವಿ ಪುತ್ರ ಮನೋಜ್.
ಸ್ಥಳದಲ್ಲಿ ಬಿಡು ಬಿಟ್ಟಿರುವ ಎಪಿಎಂಸಿ ಪೊಲೀಸರು.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.