ಬೆಳಗಾವಿ-ಮನೆ ಮುಂದೆ ಕೂಗು ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿಯ ಮಾರಿಹಾಳ ಠಾಣಾ ವ್ಯಾಪ್ತಿಯ ಹುದಲಿ ಗ್ರಾಮದಲ್ಲಿ ನಡೆದಿದೆ.
ಮುತ್ತಣ್ಣ ಗುಡಬಲಿ(22) ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.ನಿನ್ನೆ ಸ್ನೇಹಿತನ ಬರ್ತಡೆ ಮುಗಿಸಿಕೊಂಡು ಮನೆಗೆ ವಾಪಾಸ್ ಆಗ್ತಿದ್ದ ಮುತ್ತಣ್ಣ.ಬೈಕ್ ಮೇಲೆ ತೆರಳುವಾಗ ಆರೋಪಿಗಳ ಮನೆ ಮುಂದೆ ಕೂಗು ಹಾಕಿದ್ದ ಕಾರಣ ಇದೇ ವಿಚಾರ ವಿವಾದವಾಗಿದೆ.ಈ ವೇಳೆ ಹದಿನೈದು ಜನರು ಕೂಡಿಕೊಂಡು ರಾತ್ರಿ ಹಲ್ಲೆ ಮಾಡಿದ್ದಾರೆ,ಇಂದು ಬೆಳಗ್ಗೆ ಮತ್ತೆ ನಾಲ್ವರು ಮನೆಗೆ ಬಂದು ಏಕಾಏಕಿ ಹಲ್ಲೆ ಮಾಡಿ,ಚಾಕುವಿನಿಂದ ಎರಡು ಹೊಟ್ಟೆ, ಎದೆ ಭಾಗಕ್ಕೆ ಇರಿದು ಹತ್ಯೆಗೆ ಯತ್ನಿಸಿದ್ದಾರೆ.
ಗಾಯಗೊಂಡ ಮುತ್ತಣ್ಣನಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಿತಿ ಗಂಭೀರ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಹಲ್ಲೆ ಮಾಡಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ ಈ ಕುರಿತು ಮಾರಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.