ಬೆಳಗಾವಿ- ಇದೆಂತಾ ಕಾಲ ಬಂತ್ರಪ್ಪೋ..ಜೈ ಜವಾನ ಜೈ ಕಿಸಾನ ಜೈ ವಿಜ್ಞಾನ ಅನ್ನೋ ಇಂದಿನ ಯುಗದಲ್ಲಿಯೂ
ದೇಶ ಕಾಯೋ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದ್ದು ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವಂಥ ಅಮಾನವೀಯ ಘಟನೆ ನಡೆದಿದೆ. ಗ್ರಾಮಸ್ಥರ ಈ ಕೃತ್ಯದಿಂದ ಆ ಕುಟುಂಬ ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇವತ್ತೆ ದೇಶದಲ್ಲಿ ಯುದ್ದ ನಡೆದು ನಾನು ಸತ್ತರೆ ನನ್ನ ಕುಟುಂಬದ ಹೋಣೆ ಯಾರು ಹೊರುತ್ತಾರೆ ಎಂದು ಯೋದ ಚಿಂತೆಗಿಡಾಗಿದ್ದಾನೆ.
ಹೌದು.. ಇಂದಿನ ಆಧುನಿಕ ಯುಗದಲ್ಲೂ ಬಹಿಷ್ಕಾರದಂತ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದೆ. ದೇಶದ ಗಡಿ ಕಾಯುವ ಯೋಧನೋರ್ವನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆಗೆ ಸಾಕ್ಷಿಯಾಗಿರೋದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತೋಟಗಟ್ಟಿ ಗ್ರಾಮ. ಜಮ್ಮುಕಾಶ್ಮೀರಲ್ಲಿ ಯೋಧನಾಗಿರುವ ವಿಠಲ್ ಕಡಕೋಳ ಎಂಬ ಯೋಧನಿಗೆ ಸೇರಿದ ಜಮೀನಿನಲ್ಲಿ ದೇವಸ್ಥಾನಕ್ಕೆ ಹೋಗಲು ಅರ್ಧ ಎಕರೆ ಜಾಗ ಹಾಗೂ ಅಂಗನವಾಡಿ ನಿರ್ಮಿಸಲು ಎರಡು ಗುಂಟೆ ಜಾಗ ನೀಡಲಿಲ್ಲವೆಂಬ ಕಾರಣಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ಯೋಧನ ಕುಟುಂಬದವರ ಜೊತೆ ಮಾತನಾಡಿದವರಿಗೆ ದಂಡದೊಂದಿಗೆ, ಅವಾಜ್ ಕೂಡ ಹಾಕಲಾಗುತ್ತದೆ. ಗ್ರಾಮದ ಜನ ಅಸಹ್ಯವಾಗಿ ಚುಚ್ಚಿ ಮಾತನಾಡುತ್ತಿದ್ದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಯೋಧ ವಿಠಲ್ ಹಾಗೂ ಆತನ ತಂದೆ ತಾಯಿ ಆರೋಪಿಸಿದ್ದಾರೆ. ನಮ್ಮ ತಂದೆ ತಾಯಿಗೆ ಗ್ರಾಮದ ಕೆಲವು ಮುಖಂಡರು ಕಿರುಕುಳ ನೀಡುತ್ತಿದ್ದು ನನಗೆ ಸೇನೆಯಲ್ಲಿ ನೆಮ್ಮದಿಯಿಂದ ಕಾರ್ಯನಿರ್ವಹಿಸಲಾಗುತ್ತಿಲ್ಲ. ಇಂದೆ ಯುದ್ದ ನಡೆದು ನಾನು ಸಾವನ್ನ್ಪ್ಪಿದರೆ ನಮ್ಮ ತಂದೆ ತಾಯಿ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಯೋಧ ಮನವಿ ಮಾಡಿದ್ದಾನೆ.
ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆಂದು ಗೊತ್ತಾಗಿ ತಹಶೀಲ್ದಾರ ಹಾಗೂ ಪೋಲಿಸರು ಗ್ರಾಮದಲ್ಲಿ ಸಭೆ ನಡೆಸಿ ಎಚ್ಚರಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಯೋಧನ ಕುಟುಂಬಕ್ಕೆ ನಾವೇನು ಬಹಿಷ್ಕಾರ ಹಾಕಿಲ್ಲ. ಅವರೇ ಗ್ರಾಮ ಪಂಚಾಯತ್ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಜಾಗದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಅಂಗನವಾಡಿ ನಿರ್ಮಿಸಲು ಜಾಗ ನೀಡುವಂತೆ ಕೇಳಿದ್ದೇವು. ಅದಕ್ಕೆ ಅವರು ಇಲ್ಲಸಲಳದ ಆರೋಪ ಮಾಡುತ್ತಾರೆ ಎಂದು ಗ್ರಾಮಸ್ಥರ ಆಗ್ರಹ. ಆದ್ರೆ ಯೋದ ವಿಠ್ಠಲ್ ತಂದೆ ತಾಯಿ ಮಾತ್ರ ನಮಗೆ ಒಬ್ಬನೆ ಮಗ ಆತ ದೇಶ ಕಾಯೋ ಕೆಲಸಕ್ಕೆ ಹೋಗಿದ್ದಾನೆ. ಆದ್ರೆ ನಮ್ಮ ಆಸ್ತಿ ಅಂಗನವಾಡಿ ಕಟ್ಟಡ ಕಟ್ಟಲು ಕೊಡಬೇಕೆ ಎಂದು ನಮ್ಮನ್ನು ನಮ್ಮ ಗ್ರಾಮದ ಹಿರಿಯರು ಬಹಿಷ್ಕಾರ ಹಾಕಿದ್ದಾರೆ ನಮಗೆ ರಕ್ಷಣೆ ಇಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯೆಕ್ತಪಡಿಸುತ್ತಾರೆ.
ಒಟ್ನಲ್ಲಿ ದೇಶ ಕಾಯೋ ಯೋದನಿಗೆ ಇಲ್ಲಿ ರಕ್ಷಣೆ ಇಲ್ಲಾ. ಬಹಿಷ್ಕಾರ ಎಂಬ ಭೂತಕ್ಕೆ ಈ ಕುಟುಂಬ ಬಲಿಯಾಗಿದೆ. ಇನ್ನಾದರೂ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪ್ರಕರಣದ ಸತ್ಯಾಸತ್ಯತೇನ ಪರಿಶೀಲಿಸಿ ಯೋಧನ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ.