ಬೆಳಗಾವಿ ಗೋವಾದಿಂದ ಟ್ರಕಿಂಗ್ ಎಂದು ಕಾಡಿಗೆ ಬಂದು ೮ ಜನ ನಿನ್ನೆ ನಾಪತ್ತೆ ಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೌದು ನಿನ್ನೆ ಗೋವಾದ ಚರ್ಚ ಪಾದರ್ ಮಿಲಾನಿ ಮಾರಿಯಾನೋ ಪಿಂಟೋ ಎಂಬವರ ಜತೆ ಕಣಕುಂಬಿ ವಲಯದ ಚೋರ್ಲಾ ಅಭಯಾರಣ್ಯದಲ್ಲಿ ಟ್ರಕಿಂಗ್ ಎಂದ ಬಂದ ಎಂಟು ಜನ ೧೨ ರಿಂದ ೧೩ ವರುಷದ ಬಾಲಕಿಯರು ನಾಪತ್ತೆಯಾಗಿದ್ದ ಪದರಕರಣ ಸುಖಾಂತ್ಯ ಕಂಡಿದೆ. ನಿನ್ನೆ ಮದ್ಯಾಹ್ನ ೧೨ ಗಂಟೆಗೆ ಗೋವಾದ ಕರ್ನಾಟಕ ಅರಣ್ಯದ ಗಡಿಯಲ್ಲಿ ಟ್ರಕಿಂಗ್ ಎಂದು ಬಾಲಕಿಯರನ್ನಿ ಕರದುಕೊಂಡು ಹೋಗಿ ಮಂಜಿನಿಂದ ಕೋಡಿದ ವಾತರಣದಲ್ಲಿ ಹಾದಿ ಕಾಣದೆ ಪಾದರ್ ಸೇರಿ ೮ ಜನರು ನಿನ್ನೆ ನಾಪತ್ತೆಯಾಗಿದ್ದರು. ಇದರಿಂದ
ಆತಂಕ ಗೊಳಗಾದ ಬಾಲಕಿಯರ ಪೋಷಕರು ಗೋವಾ ಪಂಜಿಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕರ್ನಾಟಕದ ಬೆಳಗಾವಿ ಜಿಲ್ಲೆ ಖಾನಾಪೂರ್ ಪೊಲೀಸರಿಗೆ ಕಂಟ್ರೋಲ್ ರೂಂ ಗೆ ಕರೆ ಮಾಡಿ
ಮಾಹಿತಿ ನೀಡಿದಾಗ, ಮಾಹಿತಿ ಪಡೆದ ಖಾನಾಪೂರ್ ಪೋಲೀಸರು ಮತ್ತು ಗೋವಾ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡಿಸಿ ನಾಪತ್ತೆಯಾದ ಎಲ್ಲ ೮ ಜನರನ್ನು ರಕ್ಷಣೆ ಮಾಡಿದ್ದಾರೆ. ನಾಪತ್ತೆಯಾದ
ಮಿಲಾನಿ ಮಾರಿಯಾನೋ ಪಿಂಟೊ(ಚಚ೯ ಫಾದರ್)
೧.ಬೆಂಬರಾ ಗೊನಸಾಲ್ವಿಸ್(೧೨)
೨.ಸೆನ್ನಸಾ ಸಂಪಾಯಿ(೧೧)
೩.ಪಾಲ್ ಫನಾ೯ಂಡಿಸ್(೧೨)
೪.ಸ್ವಿಟ್ನಾಲಾ ಗೋಮ(೧೨)
೫.ಜಿಯಾರಾ ಫನಾ೯ಂಡಿಸ್(೧೨)
೬.ಸೆನಾ ಡಿಸೋಜ (೧೨)
೭.ಜಿನಯಾ ಡಿಸೋಜ (೧೨) ಸಹಾಯದಿಂದ ೮ ಜನರ ರಕ್ಷಣೆ ಮಾಡಿದ್ದು ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದು ನಿನ್ನೆಯಿಂದ ಇವತ್ತು ಸಂಜೆ ನಾಲ್ಕು ಗಂಟೆವರೆಗೆ ದಟ್ಟಕಾನನದ ನಡುವೆ ಇದ್ದರಿಂದ ಬಾಲಕಿಯರುತೀವ್ರ ಅಸ್ವಸ್ಥಗೊಂಡಿದ್ದು ಬಾಲಕಿಯರನ್ನು ಪಂಜಿಮ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …