ಬೆಳಗಾವಿ- ಪಕ್ಕದ ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದು ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಜಿಲ್ಲೆಯ ಜಲಾಶಯಗಳು ಭರ್ತಿಯಾಗಿ,ಜಲಾಶಯಗಳಿಂದ ಬಿಡುಗಡೆಯಾದ ನೀರು ಬೆಳಗಾವಿ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿ ಮಾಡಿದೆ.
ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿದ ಪರಿಣಾಮ ಗೋಕಾಕಿನಲ್ಲಿ ಮತ್ತೆ ಜಲ ಕಂಟಕ ಎದುರಾಗಿದ್ದು ಗೋಕಾಕಿನಲ್ಲಿ ಹಲವಾರು ಬಡಾವಣೆಗಳು ಮುಳುಗಡೆ ಯಾಗಿದ್ದು,ಗೋಕಾಕಿನ ಜನ ಸಾಕಪ್ಪಾ ಸಾಕು ಎನ್ನುವಂತಾಗಿದೆ.
ವಿಪರೀತ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ.ನೂರಾರು ಜನ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು,ಮಳೆಯ ಹೊಡೆತ್ತಕ್ಕೆ ಎಲ್ಲವನ್ನೂ ಕಳೆದುಕೊಂಡು ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಆಶ್ರಯ ಪಡೆದಿರುವ ಹಿರೇ ಹಂಪಿಹೊಳಿಯ ಗ್ರಾಮದ ಹಿರಿಯ ಜೀವಿಗಳ ಪರಿಸ್ಥಿತಿ ನೋಡಿದ್ರೆ ಕರುಳು ಚುರ್ ಎನ್ನುತ್ತೆ.
ಮಗಳ ಮಡಿಲಲ್ಲಿ ಮಗುವಿನಂತೆ ಮಲಗಿದ 90 ರ ಇಳೆ ವಯಸ್ಸಿನ ಅಮ್ಮ. ಅಮ್ಮನ ಆರೋಗ್ಯಕ್ಕೆ ಚಿಕಿಸ್ಥೆ ಕೊಡಿಸೊದಿರಲಿ ಒಂದು ಹೊತ್ತು ಊಟ ಮಾಡಿಸಲು ಆಗದ ಪರಿಸ್ಥಿತಿಯಲ್ಲಿ ಮಗಳು.ಇದೆಕ್ಕೆಲ್ಲಾ ಕಾರಣ ಕಳೆದ ಮತ್ತು ಈ ವರ್ಷ ಬಂದ ಯಮಸ್ವರೂಪಿ ಪ್ರವಾಹ. ಹಿರೇ ಹಂಪಿಹೊಳಿಯ ಗಂಗಮ್ಮ ಕುಟುಂಬದ ಕಥೆಯನ್ನು ಕೇಳಿದರೆ ಕಣ್ಣೀರು ಬರುವದು ಗ್ಯಾರಂಟಿ.
ರಾಮದುರ್ಗ ತಾಲ್ಲೂಕಿನ ಹಿರೇಹಂಪಿಹೊಳಿ ಗ್ರಾಮದಲ್ಲಿ ಚಿಕ್ಕ ಮತ್ತು ಚೊಕ್ಕ ಸಂಸಾರ ಮಾಟಿಕೊಂಡಿದ್ದರು ಮನೆ ಯಜಮಾನ ಗ್ರಾಮದ ಮನೆ ಮನೆಗೆ ಹೋಗಿ ಭಿಕ್ಷಾಂಧೆಹಿ ಎಂದು ಹಿಟ್ಟು ತಂದು ಹೊಟ್ಟೆ ತುಂಬಿಕೊಳ್ಳುತ್ತಿದ್ದರು. ಈ ಕುಟುಂಬದ ಮೇಲೆ ಅದೇಕೊ ವರುಣದೇವ ಮುನಿಸಿಕೊಂಡ ರಾತ್ರೋರಾತ್ರಿ ಮನೆಗೆ ನುಗ್ಗಿದ ನೀರು ಇವರನ್ನು ಅಕ್ಷದಶಹ ಬೀದಿಗೆ ಚೆಲ್ಲಿತ್ತು. ಮನೆ ಕೊಚ್ಚಿಹೋಗಿ ಕಂಗಾಲಾದ ಕುಟುಂಬ ಗ್ರಾಮದ ದೇವಾಲಯವೊಂದರಲ್ಲಿ ಕಳೆದೊಂದು ವರ್ಷದಿಂದ ವಾಸವಿತ್ತು. ಇಗ ಬಂದ ಪ್ರವಾಹ ದೇವಾಲಯವನ್ನು ಬಿಡಿಸಿ ಸರ್ಕಾರಿ ಸಹಾಯ ಕೇಂದ್ರಕ್ಕೆ ತಂದು ನಿಲ್ಲಿಸಿದೆ. ಶಾಲೆಯ ಒಡೆದ ಹಂಚುಗಳು ಮೇಲೆ ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆ ಸೋರುವ ಸೂರಿನಲ್ಲಿ ವೃಧ್ದ ತಾಯಿ ಗಂಗಮ್ಮ ಜೊತೆ ಮಗಳು ಸುಶೀಲಾ ಕಾಲ ಕಳೆಯಬೇಕಾಗಿದೆ
ಕಳೆದ ಒಂದು ವರ್ಷದ ಹಿಂದೆಯೇ ಈ ಹಿರಿಯ ಜೀವಿಗಳ ಮನೆ ಬಿದ್ದು ಹೋಗಿದೆ.ಒಂದು ವರ್ಷದಿಂದ ಇವರು ಮಂದಿರದ ಕಟ್ಟೆಯ ಮೇಲೆಯೇ ಆಶ್ರಯ ಪಡೆದಿದ್ದರು,ಮಳೆಯಿಂದಾಗಿ ಈ ಕುಟುಂಬ ಈಗ ರಾಮದುರ್ಗ ತಾಲ್ಲೂಕಿನ ಸುರೇಬಾನ್ ನಿರಾಶ್ರಿತರ ಕೇಂದ್ರದಲ್ಲಿ ಇವರು ಆಶ್ರಯ ಪಡೆದಿದ್ದು ತಾಯಿಗೆ 90 ವರ್ಷ ವಯಸ್ಸು, ಮಗಳಿಗೆ 70 ವರ್ಷ,ಇವರು ಕಳೆದ ಹದಿನೈದು ದಿನಗಳಿಂದ,ಪರದಾಡುತ್ತಿದ್ದು ತಾಯಿಗೆ ಚಿಕಿತ್ಸೆಯ ಅವಶ್ಯಕತೆ ಇದೆ,ಅಧಿಕಾರಿಗಳು ಈ ಹಿರಿಯ ಜೀವಿಗಳ ಕುರಿತು ವಿಶೇಷ ಕಾಳಜಿ ವಹಿಸಬೇಕಾಗಿದೆ.