Breaking News
Home / Breaking News / ಸಂಸದ ಅನಂತಕುಮಾರ ಹೆಗಡೆ ಕಾರು ಅಡ್ಡಗಟ್ಟಿದ ರೈತರು

ಸಂಸದ ಅನಂತಕುಮಾರ ಹೆಗಡೆ ಕಾರು ಅಡ್ಡಗಟ್ಟಿದ ರೈತರು

ಕಿತ್ತೂರು ಕ್ಷೇತ್ರದಲ್ಲಿ ಸಂಸದ ಅನಂತಕುಮಾರ್ ಹೆಗಡೆಗೆ ತಟ್ಟಿದ ಪ್ರತಿಭಟನೆಯ ಬಿಸಿ..

ಬ ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕ ಮಹಾಂತೇಶ ದೊಡಗೌಡರ ಇರುವ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ರೈತ ಸಂಘಟನೆ ಕಾರ್ಯಕರ್ತರು

ಬೆಳಗಾವಿ- ರೈತರ ಸಮಸ್ಯೆಗಳನ್ನು ಆಲಿಸದೆ ಅಲ್ಲಿಂದ ತೆರಳಲು ಮುಂದಾದ ಸಂಸದ ಅನಂತಕುಮಾರ ಹೆಗಡೆ ಅವರ ವಾಹನಕ್ಕೆ ರೈತರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದಿದೆ.

ಕಿತ್ತೂರು ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಹಂತ -3ರ ಅಡಿಯಲ್ಲಿ ಬರುವ ವಿವಿಧ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಸಮಾರಂಭಕ್ಕೆ ಸಂಸದ ಅನಂತಕುಮಾರ ಹೆಗಡೆ ಆಗಮಿಸಿದ್ದರು. ನಂತರ ಕಾರ್ಯಕ್ರಮವು ಅಂತಿಮ ಹಂತ ತಲುಪುತ್ತಿದ್ದಂತೆ ಸಂಸದರು ಹಾಗೂ ಶಾಸಕ ಮಹಾಂತೇಶ ದೊಡಗೌಡರ ವೇದಿಕೆಯಿಂದ ಕೆಳಗೆ ಬರುತ್ತಿದ್ದಂತೆ ರೈತ ಸಂಘಟನೆಯ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಹಾಗೂ ಕಾರ್ಯಕರ್ತರು ತಮ್ಮ ಮನವಿ ನೀಡಲು ಸಂಸದರ ಬಳಿ ದೌಡಾಯಿಸಿದರು. ಆಗ ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕರು ಇವರತ್ತ ಗಮನ ಹರಿಸದೆ ವಾಹನವನ್ನೇರಿ ಕುಳಿತ ಪರಿಣಾಮ ರೈತ ಸಂಘಟನೆಯವರು ಸಂಸದ ಹೆಗಡೆ ಇರುವ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ಆರಂಭಿಸಿದರು. ಕೂಡಲೇ ಪೊಲೀಸರು ಆಗಮಿಸಿ ಸಂಸದರಿಗೆ ಹಾಗೂ ಶಾಸಕ ದೊಡಗೌಡರ ಅವರಿಗೆ ಅಲ್ಲಿಂದ ತೆರಳಲು ದಾರಿ ಮಾಡಿ ಕೊಟ್ಟರು.

ಈ ಘಟನೆಯಿಂದ ಕುಪಿತಗೊಂಡ ರೈತ ಸಂಘಟನೆಯ ಕಾರ್ಯಕರ್ತರು ಸಂಸದರ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ಇಂತಹ ಸಂಸದರಿಗೆ ಬುದ್ಧಿ ಕಲಿಸಲು ಮುಂದಾಗಬೇಕೆಂದು ಆಕ್ರೋಷ ವ್ಯಕ್ತ ಪಡಿಸಿದರು.

ಉತ್ತರ ಕನರ್ಾಟಕದ ರೈತ ಸಂಘಟನೆಯ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಇದನ್ನು ಹೊರತು ಪಡಿಸಿ ಭೂ ಸ್ವಾಧಿನ ಹಾಗೂ ಎಪಿಎಂಸಿ ಕಾಯ್ದೆ ರೂಪಿಸಿ ರೈತರ ಬದುಕನ್ನು ಕಸಿದುಕೊಳ್ಳುತ್ತಿದ್ದಾರೆಂದು ಟೀಕಿಸಿದ ಅವರು, ರೈತರ ಪರ ನಿಜವಾದ ಕಾಳಜಿ ಸರ್ಕಾರಕ್ಕಿದ್ದರೆ ಸ್ವಾಮಿನಾಥನ್ ವರದಿ ಜಾರಿಗೆ ತರಲಿ ಎಂದು ಹೇಳಿದರು.

ಚುನಾವಣೆಗೆ ನಿಲ್ಲಲ್ಲು ಮಿತಿಯನ್ನು ನಿಗದಿಗೊಳಿಸಬೇಕು ಎಸ್ಸೆಸ್ಸಲ್ಸಿ ಪಾಸಾದವರಿಗೆ ಪಂಚಾಯಿತಿ, ಪದವಿಧರರಿಗೆ ಶಾಸಕ ಹಾಗೂ ಪಿ.ಎಚ್.ಡಿ ಆದವರಿಗೆ ಸಂಸದರಾಗುವ ಶಾಸನ ರೂಪಿಸಿದಲ್ಲಿ ಮಾತ್ರ ಈಗೀರುವ ಜನಪ್ರತಿನಿಧಿಗಳಲ್ಲಿ ಅರ್ಧದಷ್ಟು ಜನರು ಹೊರಗುಳಿಯಲು ಸಾಧ್ಯ ಎಂದರು.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *