ಬೆಳಗಾವಿ- ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಬಂದಿದೆ, ಕಂದಾಯ ಸಚಿವರು ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಹೊರಗೆ ಬರಲಿಲ್ಲ.ಕಂದಾಯ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಬರಬೇಕು ಜನ ಯಾವ ರೀತಿಯ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುವದನ್ನು ನೋಡಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಸಚಿವರು ಓಡಾಟಬೇಕು.
ಜಿಲ್ಲೆಯಲ್ಲಿ ನಾಲ್ಕು ಜನ ಸಚಿವರು ಇದ್ದಾರೆ.
ಒಬ್ಬರಿಗೆ ಒಬ್ಬರು ಸಂಬಂಧ ಇಲ್ಲದೇ ಇರೋ ರೀತಿಯಲ್ಲಿ ಇದ್ದಾರೆ. ನಾಲ್ಕು ಜನ ಒಟ್ಟಾಗಿ ನಿರ್ಧಾರ ಕೈಗೊಳ್ಳಬೇಕು.
ಕಂದಾಯ ಸಚಿವರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದಾರೆ. ಅನೇಕ ಸಚಿವರು ಬೆಂಗಳೂರು ಸೀಮಿತ ಆಗಿದ್ದಾರೆ.ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ
ಕಾಂಗ್ರೆಸ್ ಪಕ್ಷದಿಂದ ಅಧಿವೇಶನಕ್ಕೆ ಬೇಡಿಕೆ ಇಡಲಾಗಿದೆ.
ಅಧಿವೇಶನ ನಡೆಸಿದ್ರೆ ಕೊರೊನಾ ಅವ್ಯವಹಾರ, ಪ್ರಹಾದ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರವಾಹ ಪರಿಹಾರ ಕೇಂದ್ರ ಸರ್ಕಾರ ಸಹ ತಾರತಮ್ಯ ಮಾಡಿದೆ.ಎಂದು ಸತೀಶ್ ಅರೋಪಿಸಿದರು
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ.
ಕಾಂಗ್ರೆಸ್ ಪಕ್ಷದಿಂದ ಸತ್ಯ ಶೋಧನ ಸಮಿತಿ ರಚಿಸಲಾಗಿದೆ. ಸಮಿತಿಯಿಂದ ಇನ್ನೂ ಕೆಲಸ ಆರಂಭವಾಗಿಲ್ಲ. ಸಮಿತಿ ವರದಿ ನೀಡಿದ ಬಳಿಕ ಸತ್ಯಾಸತ್ಯಾತೆ ಬಯಲು ಆಗುತ್ತದೆ.
ಡಿಕೆಶಿಯಿಂದ ಬೆಂಗಳೂರು ಕಮಿಷನರ್ ಗೆ ದಮ್ಕಿ ಆರೋಪ ಕುರಿತು ವಿಚಾರಿಸಿದಾಗ, ವಿರೋಧ ಪಕ್ಷದಲ್ಲಿ ಇದ್ದವರು ಅನೇಕ ಸಲ ಈ ರೀತಿಯ ಮತು ಗಳನ್ನು ಆಡಿದ್ದಾರೆ. ಏ ಮಿಷ್ಟರ್ ಅಂದ್ರೆ ಧಮ್ಕಿ ಹೇಗೆ ಆಗುತ್ತೆ.
ನಮ್ಮನ್ನು ಟಾರ್ಗೆಟ್ ಮಾಡಬೇಡಿ ಮಿಸ್ಟರ್ ಎಂದಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್ ಟಾರ್ಗೆಟ್ ಮಾಡಿರೋ ಸಂಶಯವಿದೆ. ಕಾಂಗ್ರೆಸ್ ಮಾಜಿ ಪಾಲಿಕೆ ಸದಸ್ಯರನ್ನು ವಿಚಾರಣೆಗೆ ಒಳ ಪಡಿಸಿದ್ದಾರೆ. ಘಟನೆಗೆ ಸಂಬಂಧವಿಲ್ಲದ ಕೇಲವರ ವಿಚಾರಣೆ ನಡೆದಿದೆ.
ಇದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.
ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿದ್ರೆ ಎಲ್ಲಾ ಸತ್ಯಾ ಗೊತ್ತಾಗುತ್ತೆ ಎಂದರು.
ಘಟನೆ ಮುಂದೆ ಆಗದಂತೆ ತಡೆಯಬಹುದಿತ್ತು,
ದೂರು ದಾಖಲಿಸಿಸಲು ಪೊಲೀಸರು ವಿಳಂಬ ಮಾಡಿದ್ದಾರೆ.ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.