ಬೆಳಗಾವಿ-ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಟೈಗರ್ ಗ್ಯಾಂಗ್ ಸದಸ್ಯರು ಕೊಲೆ ಪ್ರಕರಣದ ಆರೋಪದ ಮೇಲೆ ಹಿಂಡಲಗಾ ಜೈಲಿನಲ್ಲಿದ್ದು,ಜೈಲಿನಿಂದಲೇ ಗ್ಯಾಂಗ್ ಆಪರೇಟಿಂಗ್ ಶಂಕೆಯ ಮೇಲಿ ಡಿಸಿಐಬಿ ಪೋಲೀಸರು ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಿದ್ದಾರೆ.
ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಿರುವ ಡಿಸಿಐಬಿ ಪೋಲೀಸರು,ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.ಜೈಲಿನಲ್ಲಿದ್ದುಕೊಂಡೇ ಟೈಗರ್ ಗ್ಯಾಂಗ್ ಆಪರೇಟ್ ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ರಾಮದುರ್ಗ ಡಿವೈಎಸ್‌ಪಿ ಎಸ್.ಎ.ಪಾಟೀಲ್ ನೇತೃತ್ವದಲ್ಲಿ ನಡೆದಿದ್ದ ದಾಳಿ ನಡೆದಿದ್ದು ಹಿಂಡಲಗಾ ಜೈಲಿನ ಮೇಲೆ ರಾಮದುರ್ಗ ಡಿವೈಎಸ್‌ಪಿ & ಡಿಸಿಐಬಿ ವಿಭಾಗದಿಂದ ದಾಳಿ ನಡೆದಿದೆ.
ಬೆಳಗಾವಿ ತಾಲೂಕಿನ ಹಿಂಡಲಗಾ ಬಳಿ ಇರುವ ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಲಾಗಿದ್ದು .ಜಿಲ್ಲಾ ಅಪರಾಧ ತನಿಖಾ ದಳದ ಅಧಿಕಾರಿಗಳಿಂದ ಜೈಲಿನಲ್ಲಿ ತಪಾಸಣೆ ಮಾಡಲಾಗಿದೆ. ಡಿಸಿಐಬಿ ಸಿಪಿಐ ಲಿಂಗನಗೌಡ ಪಾಟೀಲ್ ಸೇರಿ ಇತರ ಅಧಿಕಾರಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಕೋಕಾ ಕೇಸ್‌ನಡಿ ಬಂಧನಕ್ಕೊಳಗಾಗಿದ್ದ ಟೈಗರ್ ಗ್ಯಾಂಗ್‌ನ 9 ಸದಸ್ಯರು ಹಿಂಡಲಗಾ ಜೈಲಿನಲ್ಲಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಸಹವರ್ತಿಗಳಿಗೆ ಕರೆ ಮಾಡಿ ಗ್ಯಾಂಗ್ ಆಪರೇಟ್ ಶಂಕೆ ಹಿನ್ನಲೆಯಲ್ಲಿ, ಪೋಲೀಸ್ ಅಧಿಕಾರಿಗಳು ಜೈಲಿನಲ್ಲಿರು ಟೈಗರ್ ಗ್ಯಾಂಗ್ ನ ಸದಸ್ಯರನ್ನು ವಿಚಾರಣೆ ಮಾಡಿದ್ದಾರೆಂದು ತಿಳಿದು ಬಂದಿದೆ.