ಬಿಜೆಪಿ ನಾಯಕರು ಅಫೀಮು ಸೇವಿಸುತ್ತಾರೆ ಎಂಬ ಬಿ.ಕೆ.ಹರಿಪ್ರಸಾದ್ ಆರೋಪ,ಮಾಡಿದ್ದು
ಬಿ.ಕೆ.ಹರಿಪ್ರಸಾದ್ ಹೇಳಿದ ತಕ್ಷಣ ಅದು ವೇದ ವಾಕ್ಯ ಅಲ್ಲ, ಬಿ.ಕೆ.ಹರಿಪ್ರಸಾದ್ ಬ್ರಹ್ಮ ಏನು ಅಲ್ಲ ಎಂದ ಸಚಿವ ಬಿ.ಸಿ.ಪಾಟೀಲ್ ತಿರಗೇಟು ನೀಡಿದ್ದಾರೆ.
ಬೆಳಗಾವಿಯ ಬಿಜೆಪಿ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ,ಕೃಷಿ ಸಚಿವ ಬಿಸಿ ಪಾಟೀಲ, ಬಿಜೆಪಿ ನಾಯಕರು ಅಫೀಮು ಸೇವಿಸೋದನ್ನು ಬಿ.ಕೆ.ಹರಿಪ್ರಸಾದ್ ಯಾವಗಾ ನೋಡಿದ್ರು?
ಮೊದಲೇ ಹೇಳಬೇಕಿತ್ತಲ್ಲಾ ಇಷ್ಟು ದಿನ ಏಕೆ ಬಾಯಿ ಮುಚ್ಚಿಕೊಂಡರು, ಸುಮ್ಮನೇ ಆಪಾದನೆ ಮಾಡಿ ಹೋಗುವುದು ತಪ್ಪು,ಎಂದು ಬಿಸಿ ಪಾಟೀಲ ಹೇಳಿದ್ರು.
ಆರ್‌ಎಸ್‌ಎಸ್ ರೀತಿ ನಾವು ಶತ್ರುಗಳನ್ನು ಸೃಷ್ಟಿ ಮಾಡಲ್ಲ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿಸಿದ ಅವರು,ಎಸ್‌ಡಿಪಿಐ ಮಾಡ್ತಾರಾ? ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಾಟೆ ಮಾಡಿದವರ್ಯಾರು?
ಗಲಾಟೆ ಎಲ್ಲಿಂದ ಆಗಿದೆ? ಶತ್ರುಗಳನ್ನು ತಯಾರು ಮಾಡ್ತೀರೋರು ಅವರೇ,ದೇಶದ್ರೋಹಿಗಳು ಅವರಲ್ಲೇ ಜಾಸ್ತಿ ಜನ ಇದ್ದಾರೆ, ಅವರನ್ನು ಬಚಾವ್ ಮಾಡಲು ಎಷ್ಟೋ ಜನರ ಪ್ರಾಣ ಹೋಗಿದೆ, ಆಸ್ತಿ ಪಾಸ್ತಿ ನಷ್ಟ ಆಗಿದೆ, ಕೋಮುಗಲಭೆ ಪ್ರಚೋದನೆ ಕೊಡ್ತಾರೆ ಎಂದು ಬಿ.ಕೆ.ಹರಿಪ್ರಸಾದ್‌ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ರು
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					