ಬೆಳಗಾವಿ- ನಾಪತ್ತೆಯಾಗಿದ್ದ ಮಹಿಳೆಯರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಬೆಟ್ಟದಲ್ಲಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೋಡಚಿ ಬೆಟ್ಟದಲ್ಲಿ ಇಬ್ಬರು ಮಹಿಳೆಯರ ಶವಗಳು ಪತ್ತೆಯಾಗಿವೆ ರಾಮದುರ್ಗ ತಾಲೂಕಿನ ಗೊಣಗನೂರು ಗ್ರಾಮದ ರೇಣುಕಾ ತಳವಾರ (೪೦), ಸಾಂವಕ್ಕ ತಳವಾರ (೩೮) ಮೃತ ಮಹಿಖೆಯರಾಗಿದ್ದಾರೆ ರೇಣುಕಾ, ಸಾಂವಕ್ಕ ಸಂಬಂಧಿಕರ ತಿಥಿಗೆ ತೆರಳಿದ್ದ ವೇಳೆಯಲ್ಲಿ ನಾಪತ್ತೆಯಾಗಿದ್ದರು.
ಈ ಬಗ್ಗೆ ಮುರುಗೋಡ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ ೯ ರಂದು ಪ್ರಕರಣ ದಾಖಲಾಗಿತ್ತು. ಅನೈತಿಕ ಸಂಬಂಧ, ಹಣಕಾಸಿನ ವ್ಯವಹಾರ ಹಿನ್ನೆಲೆಯಲ್ಲಿ ಮಹಿಳೆಯರ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ
ಪ್ರಕರಣ ಸಂಬಂಧ ಕಟಕೋಳ ಪೊಲೀಸರಿಂದ ಮೂರು ಜನ ವಶಕ್ಕೆ. ಪಡೆಯಲಾಗಿದೆ ರಮೇಶ ತಾವರಗೇರಿ, ಪಂಚಪ್ಪ, ಬಸವರಾಜ್ ಈಗ ಪೋಲೀಸರ ವಶದಲ್ಲಿದ್ದು ಕಟಕೋಳ ಪೊಲೀಸರಿಂದ ಆರೋಪಿಗಳ ತೀವ್ರ ವಿಚಾರಣೆ.ನಡೆದಿದೆ ಮೃತ ರೇಣುಕಾ, ಸಾಂವಕ್ಕ ಸಂಬಂಧದಲ್ಲಿ ಅತ್ತಿಗೆ ಮತ್ತು ನಾದನಿ.ಎಂದು ತಿಳಿದು ಬಂದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ