Breaking News
Home / Breaking News / ತಾಕತ್ತಿದ್ದರೆ ಕಿರಣ ಠಾಖೂರ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಲಿ- ಅಶೋಕ ಚಂದರಗಿ ಸವಾಲು

ತಾಕತ್ತಿದ್ದರೆ ಕಿರಣ ಠಾಖೂರ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಲಿ- ಅಶೋಕ ಚಂದರಗಿ ಸವಾಲು

ಬೆಳಗಾವಿ- ಗಡಿ ಭಾಗದ ಬೆಳಗಾವಿಯಲ್ಲಿ ಎಂಈಎಸ್ ಅಸ್ರಿತ್ವ ಕಳೆದುಕೊಂಡಿದ್ದು ಎಂಈಎಸ್ ನಾಯಕ ಕಿರಣ ಠಾಖೂರ ಅವರು ಗಡಿ ಭಾಗದ ಮರಾಠಿಗರನ್ನು ಪ್ರಚೋದಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಕಿರಣ ಠಾಖೂರ ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಬೆಳಗಾವಿ ಉತ್ತರದಿಂದ ಸ್ಪರ್ದೆ ಮಾಡಲಿ ಆವಾಗ ಅವರ ಅಸಲಿಯತ್ತು ಗೊತ್ತಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಸವಾಲು ಹಾಕಿದ್ದಾರೆ

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ಅವರು ಕಿರಣ ಠಾಖೂರ ಅವರು ಬೆಳಗಾವಿಯಲ್ಲಿ  ಮರಾಠಿ ಫಲಕ ಹಾಕಬೇಕು ಜೊತೆಗೆ ಮರಾಠಿ ಭಾಷೆಯಲ್ಲಿಯೇ ಸರ್ಕಾರಿ ದಾಖಲೆಗಳನ್ನು ಕೊಡಬೇಕು ಎನ್ನುವ ಅಸಂಭದ್ಧವಾದ ಬೇಡಿಕೆ ಇಟ್ಟಿದ್ದು ಸರ್ಕಾರ ಇದಕ್ಕೆ ಕುವಿಗೊಡದೇ ಗಡಿಯಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಬೇಕು ಎಂದು ಅಶೋಕ ಚಂದರಗಿ ಅವರು ಒತ್ತಾಯ ಮಾಡಿದ್ರು

ಬಸ್ ಗಳಲ್ಲಿ ಮರಾಠಿ ಫಲಕ ಹಾಕಬೇಕು ಎಂದು ಒತ್ತಾಯ ಮಾಡಿರುವ ಕಿರಣ ಠಾಖೂರ ಮೊದಲು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಬಸ್ ಗಳಲ್ಲಿ ಕನ್ನಡ ಫಲಕ ಹಾಕಲಿ ಜತ್ತ ಸೊಲ್ಲಾಪೂರಗಳಲ್ಲಿ ಬಂದ್ ಮಾಡಿರುವ ಕನ್ನಡ ಶಾಲೆಗಳನ್ನು ಪನರಾರಂಭ ಮಾಡಲಿ ಎಂದು ಅಶೋಕ ಚಂದರಗಿ ಹೇಳಿದರು

ದೀಪಕ ಗುಡಗನಟ್ಟಿ ಮಾತನಾಡಿ ಮರಾಠಿ ಶಾಲೆಗಳಲ್ಲಿ ಕನ್ನಡವನ್ನು ಸರಿಯಾಗಿ ಕಲಿಸುತ್ತಿಲ್ಲ ಶಿಕ್ಷಣ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಲಿ ಎಂದರೆ ಕಸ್ತೂರಿ ಭಾವಿ ಮಾತ ನಾಡಿ ಕಿರಣ ಠಾಖೂರ ಅವರು ಗಡಿಯಲ್ಲಿ ಭಾಷಾ ವೈಷಮ್ಯ ದ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *