Breaking News

ಬೆಂಗಳೂರಲ್ಲಿ ಸೇಷನ್…ಬೆಳಗಾವಿಯಲ್ಲಿ ಪ್ರತಿಭಟನೆಗಳ ಸೀಝನ್…!

ಕೂಲಿ ನೇಕಾರ ಕಾರ್ಮಿಕ ಬಳಗದ ಪ್ರತಿಭಟನೆ
ಬೆಳಗಾವಿ
ವಿದ್ಯುತ್ ಚಾಲಿತ ಮಗ್ಗಳ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆ, ಗುರುತಿನ ಚೀಟಿ (ಲೇಬರ್ ಕಾರ್ಡ್) ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಕೂಲಿ ನೇಕಾರ ಕಾರ್ಮಿಕರ ಬಳಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.
ರಾಜ್ಯದ ವಿದ್ಯುತ್ ಚಾಲಿತ ಮಗ್ಗಗಳ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಕಲ್ಯಾಣ ಮಂಡಳಿ ನಿರ್ಮಾಣ ಮಾಡಬೇಕು. ಕಾರ್ಮಿಕರು ಮೈಕ್ರೊ ಫೈನಾನ್ಸ್ಗಳಲ್ಲಿ, ಸಹಕಾರಿ ಸಂಘಗಳ ಮತ್ತು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ಸರಕಾರ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಮಗ್ಗ ಕಾರ್ಮಿಕರಿಗೆ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ಕೋವಿಡ್-೧೯ನಿಂದ ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ಸರಕಾರ ಘೋಷಣೆ ಮಾಡಿರುವ ೨ ಸಾವಿರ ಪರಿಹಾರ ಹಣ ಇಲ್ಲಿಯವರೆಗೆ ಕೈ ಸೇರಿಲ್ಲ. ಅದನ್ನು ಆದಷ್ಟು ಬೇಗ ನೀಡಬೇಕು ಹಾಗೂ ಕಾರ್ಮಿಕರಿಗೆ ೫೫ ವರ್ಷದ ಬಳಿಕ ೫ ಸಾವಿರ ಮಾಸಿಕ ಪಿಂಚಣಿ ನೀಡಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸೋಮಶೇಖರ ಕವಡಿ, ಶಂಕರ ಢವಳಿ, ವಿಠ್ಠಲ್ ಬಂಗೋಡಿ, ಎಸ್.ಎಂ. ಸೊಂಟಕ್ಕಿ, ರೇಣುಕಾ ಭಂಡಾರಿ, ಸರಸ್ವತಿ ಲೋಕೆರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
—————————-
ಟ್ರೇಡ್ ಯೂನಿಯನ್ ಸಂಘದ ಪ್ರತಿಭಟನೆ
ಬೆಳಗಾವಿ
ಸಿಂಧುತ್ವ ಮುಕ್ತಾಯಗೊಂಡ ವಾಹನಗಳ ಕುರಿತು ರಾಜ್ಯ ಸರಕಾರ ಸ್ಪಷ್ಟ ಆದೇಶ ಹೊರಡಿಸಿದರೂ ಪೊಲೀಸರು ವಾಹನ ಹಿಡಿಯುತ್ತಿದ್ದಾರೆ ಅದನ್ನು ತಪ್ಪಿಸಬೇಕೆಂದು ಆಗ್ರಹಿಸಿ ಬುಧವಾರ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೋವಿಡ್-೧೯ನಿಂದ ಸಾಕಷ್ಟು ಜನರು ಬಳಲುತ್ತಿದ್ದಾರೆ. ಸರಕಾರ ಡಿಸೆಂಬರ್ ವರೆಗೂ ತೆರಿಗೆ, ಇನ್ಸೂರೆನ್ಸ್ ತುಂಬಲು ರಿಯಾಯತಿ ನೀಡಿದೆ. ಆದರೆ ಪೊಲೀಸರು ದಿನಾಂಕ ಮುಕ್ತಾಯವಾದ ವಾಹನಗಳನ್ನು ಹಿಡಿದು ಸೀಜ್ ಮಾಡುತ್ತಿರುವುದಕ್ಕೆ ಮನವಿಯಲ್ಲಿ ಖಂಡಿಸಿದ್ದಾರೆ.

ಸಿAಧುತ್ವವು ಎಲ್ಲಾ ವಾಹನಗಳ ದಾಖಲಾತಿಗಳಾದ ಆರ್ ಸಿ, ಇನ್ಸೂರೆನ್ಸ್, ಟ್ಯಾಕ್ಸ್, ಎಫ್.ಸಿ ದಾಖಲೆಗಳಿಗೆ ಸಂಬAಧಿಸಿರುತ್ತದೆ ಹಾಗೂ ನವೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಡಿಎಲ್ ಕಾರ್ಡ್ನಲ್ಲಿ ಬ್ಯಾಡ್ಜ್ ನಂಬರ್ ನಮೂದುಗೊಳ್ಳುತ್ತಿಲ್ಲ. ಆದ್ದರಿಂದ ಪೊಲೀಸರು ಚಾಲಕರಿಗೆ ತೊಂದರೆ ಮಾಡುತ್ತಿದ್ದಾರೆ. ಆದ್ದರಿಂದ ಸಿಂಧುತ್ವವದ ಕುರಿತು ಸ್ಪಷ್ಟವಾಗಿ ಆದೇಶ ಹೊರಡಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈರಣ್ಣಾ ನಾಯಕ, ಲಕ್ಷ್ಮಣ ನಾಯಕ,ಸುರೇಶ ಅಬ್ಬಿನಕಟ್ಟಿ, ಮಲ್ಲಿಕಾರ್ಜುನ ಪೀಸೆ, ಚಂದ್ರಶೇಖರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
—————
ಅಗ್ರೀ ಗೋಲ್ಡ್ ಠೇವಣಿದಾರರ ಪ್ರತಿಭಟನೆ
ಬೆಳಗಾವಿ
ಅಗ್ರೀ ಗೋಲ್ಡ್ ಕಂಪನಿಯಿAದ ಲಕ್ಷಾಂತರ ಜನ ಠೇವಣಿದಾರರಿಗೆ ವಂಚನೆ ಮಾಡಿದ್ದಾರೆ. ಕೂಡಲೇ ಸರಕಾರ ಅದರ ಮೇಲೆ ಕ್ರಮ ಕೈಗೊಂಡು ಠೇವಣಿದಾರರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ಠೇವಣಿದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.
ಆಂದ್ರಪ್ರದೇಶ ಮೂಲದ ಅಗ್ರೀ ಗೋಲ್ಡ್ ಸಂಸ್ಥೆ ವಿಜಯವಾಡದಲ್ಲಿ ತನ್ನ ಕೇಂದ್ರ ಕಚೇರಿಯನ್ನಾಗಿಸಿಕೊಂಡು ಗ್ರಾಹಕರಿಂದ ಠೇವಣಿ ಸಂಗ್ರಹಿಸಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದೆ. ಅತಿ ಹೆಚ್ಚು ಆಸ್ತಿಯನ್ನು ಆಂದ್ರಪ್ರದೇಶದ ಉದ್ದಗಲಕ್ಕೂ ಹೊಂದಿರುತ್ತದೆ. ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಸುಮಾರು ೮.೫ ಲಕ್ಷ ಗ್ರಾಹಕರಿಂದ ಅಂದಾಜು ೨,೫೦೦ ಕೋಟಿ ರು. ಹಣ ಠೇವಣಿಯಾಗಿ ಸಂಗ್ರಹಿಸಿದ ಈ ಸಂಸ್ಥೆ ಎಲ್ಲ ಗ್ರಾಹಕರಿಗೆ ವಂಚನೆ ಮಾಡಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

Check Also

ಬೆಳಗಾವಿಯ ಥಾಣೇಧಾರ್ ಅಮೇರಿಕಾದ ಸಂಸತ್ ಪ್ರತಿನಿಧಿ.

    ಬೆಳಗಾವಿ- ಬೆಳಗಾವಿಯ ಚಿಂತಾಮನ್ ರಾವ್ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣ ಮುಗಿಸಿದ ಶ್ರೀ ಥಾಣೇಧಾರ್ …

Leave a Reply

Your email address will not be published. Required fields are marked *