ಬೆಳಗಾವಿ-
ದೆಹಲಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಹಿನ್ನಲೆಯಲ್ಲಿ ಸುರೇಶ ಅಂಗಡಿ ಅವರ ಕುಟುಂಬಸ್ಥರ ಜತೆಗೆ ಸ್ವಾಮೀಜಿ ಬಾಳಯ್ಯ ಹಿರೇಮಠ ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಬೆಳಗಾವಿಯಿಂದ ಒಂಬತ್ತು ಜನ ಕುಟುಂಬಸ್ಥರು ದೆಹಲಿಗೆ ಪ್ರಯಾಣ ಬೆಳೆಸಿದ್ದು,ದೆಹಲಿಯ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಸುರೇಶ ಅಂಗಡಿ ಅವರ ಅಂತ್ಯಸಂಸ್ಕಾರವನ್ನು ಲಿಂಗಾಯತ ಸಮಾಜದ ಪದ್ದತಿಯ ಪ್ರಕಾರ, ನೆರವೇರಿಸಲು ಬೆಳಗಾವಿಯಿಂದ ಬಾಳಯ್ಯ ಸ್ವಾಮೀಜಿ ಅವರು ದೆಹಲಿಗೆ ತೆರಳಿದ್ದಾರೆ.
ಇತ್ತ ಬೆಳಗಾವಿಯ ಸದಾಶಿವನಗರದ ಮನೆಯಲ್ಲಿ ಬೆಂಬಲಿಗರು,ನಾಯಕರು,ಅಭಿಮಾನಿಗಳು ತಂಡೋಪ ತಂಡವಾಗಿ ಆಗಮಿಸಿ ಸುರೇಶ ಅಂಗಡಿ ಅವರ ಭಾವ ಚಿತ್ರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ತಮ್ಮ ಸುರೇಶ್ ಅಂಗಡಿ ಅಂತಿಮ ದರ್ಶನ ಪಡೆಯಲಾಗದೇ ಅಣ್ಣ ಡಾ.ಸಿ.ಸಿ.ಅಂಗಡಿ ಕಣ್ಣೀರು ಹಾಕಿದ್ರು,ತಾಯಿ ಹೆಸರಿನಲ್ಲಿ ಊರಿನಲ್ಲಿ ಸುರೇಶ್ ಅಂಗಡಿ ಪಿಯು, ಡಿಗ್ರಿ ಕಾಲೇಜು ಕಟ್ಟಿಸಿದ್ದ, ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಿಸಿದ್ದರು, ಸುತ್ತ 150 ಹಳ್ಳಿಯಿಂದ ಕಾಲೇಜುಗೆ ವಿದ್ಯಾರ್ಥಿಗಳು ಬರುತ್ತಾರೆ, ಕೆ.ಕೆ.ಕೊಪ್ಪ ಗ್ರಾಮದ ಕಾಲೇಜು ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಬೇಕು ಅಂದುಕೊಂಡಿದ್ವಿ,,ಕೊರೊನಾ ಮಾರ್ಗಸೂಚಿ ಹಿನ್ನೆಲೆ ಪಾರ್ಥಿವ ಶರೀರ ತರಲು ಅನುಮತಿ ನೀಡಲಿಲ್ಲ,
ವಿ ಆರ್ ಸ್ಟಿಕ್ ಆನ್ ಅವರ್ ರೂಲ್ಸ್.. ವೀ ಕಾಂಟ್ ವೊಯ್ಲೆಟ್ ಅಂದ್ರು ಎಂದು,ಬೆಳಗಾವಿಯ ಸುರೇಶ್ ಅಂಗಡಿ ನಿವಾಸದಲ್ಲಿ ಸಿ.ಸಿ.ಅಂಗಡಿ ಕಣ್ಣೀರು ಹಾಕಿದರು.
ಮಗ ಇಲ್ಲದ ಮನೆಗೆ ಆಗಮಿಸಿದ ತಾಯಿಯ ರೋಧನ ನೋಡಿ,ಅಲ್ಲಿದ್ದವರೆಲ್ಲ ಕಣ್ಣೀರು ಹಾಕಿದ್ರು,ಮಗ ಸುರೇಶ್ ಅಂಗಡಿರನ್ನು ನೆನೆದು ತಾಯಿ ಸೋಮವ್ವ ಅಂಗಡಿ ಕಣ್ಣೀರು ಹಾಕಿದ್ರು
ಬೆಳಗಾವಿಯ ನಿವಾಸದಲ್ಲಿ ಸುರೇಶ್ ಅಂಗಡಿ ತಾಯಿ ಸೋಮವ್ವ ಅಂಗಡಿ ಮಾತನಾಡಿ, ದೆಹಲಿಗೆ ಹೋಗುವಾಗ ಬಂದು ಭೇಟಿಯಾಗಿ ಹೋಗಿದ್ದ,ಪಾರ್ಲಿಮೆಂಟ್ ನ್ಯಾಗ ರೊಕ್ಕಾ ಇಲ್ಲಾ, ನಾನು ಹೋಗಬೇಕು ಎಂದಿದ್ದ, ಒಂದು ತಿಂಗಳು ಬಳಿಕ ಬಂದು ಭೇಟಿಯಾಗ್ತೀನಿ ಎಂದು ಹೇಳಿದ್ದ,’ಒಂದು ತಿಂಗಳವರೆಗೂ ಹೋಗಬೇಡ ಮಗನೇ ಎಂದಿದ್ದೆ, ಹಳ್ಳಿಯಿಂದ ಬೆಳಗಾವಿಗೆ ಬಂದು ಶಾಲೆ ಕಲಿತು ದೊಡ್ಡ ಮನುಷ್ಯನಾಗಿದ್ದ, ನನ್ನ ಮಾತು ಎಂದಿಗೂ ಮೀರುತ್ತಿರಲಿಲ್ಲ’ ನನ್ನ ಮಗ ಸಾಲಿ ಕಟ್ಟಿಸಿದ್ದಾ,ಬಸವಣ್ಣನ ಗುಡಿ ಕಟ್ಟಿಸಿದ್ದ’ ನನ್ನ ಮಗ ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದ’ಊರಾಗ ಪೈಪ್‌ಲೈನ್ ಮಾಡಿಸಿದ್ದ, ನನ್ನ ಹೆಸರಲ್ಲಿ ಶಾಲೆ ಕಟ್ಟಿಸಿದ್ದ’ ಎಂದು ಮಗನನ್ನು ನೆನೆದು ಕಣ್ಣೀರಿಟ್ಟ ತಾಯಿ ಸೋಮವ್ವ ಅಂಗಡಿ ಕಣ್ಣೀರು ಹಾಕಿದ್ರು